ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮ ಪಂಚಾಯತ್ ವಿಕಲಚೇತನರ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಇವರ ಅಧ್ಯಕ್ಷತೆಯಲ್ಲಿ ಜ.3 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ತಾಲೂಕು ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಹಾಗೂ ಪಾಣಾಜೆ ಗ್ರಾಮ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತ ಅಬ್ದುಲ್ಲ ಅಜೀಜ್ ವಿಕಲಚೇತನರಿಗಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಅರೋಗ್ಯ ಅಧಿಕಾರಿ ಲಕ್ಷ್ಮೀ ವಿಕಲಚೇತನರ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.ಪಂಚಾಯತ್ ಉಪಾಧ್ಯಕ್ಷೆ ಸೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಡಿಒ ಸಂಧ್ಯಾಲಕ್ಷ್ಮಿ ಸ್ವಾಗತಿಸಿ ವಂದಿಸಿದರು.ಪಂಚಾಯತ್ ಸದಸ್ಯರಾದ ಗೀತಾ.ಡಿ, ಗ್ರೆಟಾ ಡಿ’ ಸೋಜಾ, ನಿಡ್ಪಳ್ಳಿ ಗ್ರಾಮ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತ ರಾಮಣ್ಣ, ಬೆಟ್ಟಂಪಾಡಿ ಗ್ರಾಮ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತೆ ರಾಧಾವತಿ ಹಾಗೂ ವಿಕಲಚೇತನರ ಪೋಷಕರು ಪಾಲ್ಗೊಂಡರು. ಸಿಬ್ಬಂದಿಗಳಾದ ಸಂಶೀನಾ, ವಿನೀತ್ ಕುಮಾರ್ ಸಹಕರಿಸಿದರು.
ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರಿಗೆ ಫಿಸಿಯೋತೆರಪಿ ವ್ಯವಸ್ಥೆ ಅವಶ್ಯಕತೆ ಇದ್ದು ಅದನ್ನು ಆರಂಭಿಸಲು ಕ್ರಮ ಕೈಗೊಳ್ಳಲು ಪೋಷಕರು ಮನವಿ ಮಾಡಿದರು.ಇಲ್ಲದಿದ್ದರೆ ದೂರದ ಪುತ್ತೂರು ಕೇಂದ್ರಕ್ಕೆ ಹೋಗಬೇಕಾಗಿದ್ದು ಕಷ್ಟಕರವಾಗಿದೆ. ಅಲ್ಲದೆ ಅಂಗವಿಕಲರಿಗಿರುವ ಮೂಲಭೂತ ಸೌಕರ್ಯ ಒದಗಿಸುವಂತೆ ಹೆತ್ತವರು ಮನವಿ ಮಾಡಿದರು.