ಪೆರ್ನೆಯಲ್ಲಿ ಐ ಕ್ಯಾಪ್ಚರ್ ಸ್ಟುಡಿಯೋ ಶುಭಾರಂಭ

0

ಪುತ್ತೂರು:ಬಾಲಕೃಷ್ಣ ಎನ್.ಜಿ.ಇವರ ಮಾಲೀಕತ್ವದ ಐ ಕ್ಯಾಪ್ಚರ್ ಸ್ಟುಡಿಯೋ ಪೆರ್ನೆ ಕೆ.ಹೆಚ್.ಕೆ.ಸಂಕೀರ್ಣದಲ್ಲಿ ಜ.3ರಂದು ಶುಭಾರಂಭಗೊಂಡಿತು.
ನೂತನ ಸ್ಟುಡಿಯೋವನ್ನು ಪುತ್ತೂರು ಯೂನಿಯನ್ ಬ್ಯಾಂಕ್‌ನ ಶಾಖಾ ಪ್ರಬಂಧಕ ಸುರೇಶ ನಾಯ್ಕ ಬಿ.ರವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ, ಶುಭ ಹಾರೈಸಿದರು.

ಪುತ್ತೂರು ಮೆಗಾ ಪ್ಲಾಸ್ಟಿಕ್ಸ್ ಮಾಲಕ ಆಸ್ಕರ್ ಆನಂದ್‌ರವರು ಉಪಸ್ಥಿತರಿದ್ದು, ಶುಭಹಾರೈಸಿದರು.ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ,
ಸೋಜಾ ಮೆಟಲ್ಸ್ ಮಾಲಕ ಜಾನ್ ಕುಟಿನ್ಹಾರವರು ಮಾತನಾಡಿ, ಉತ್ತಮ ರೀತಿಯ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಸಂಸ್ಥೆಯು ಹೆಸರುವಾಸಿಯಾಗಲಿಯೆಂದು ಹೇಳಿ, ಸಂಸ್ಥೆಯ ಶ್ರೇಯೋಭಿವೃದ್ದಿಗೆ ಹರಸಿದರು.

ಸ್ಟುಡಿಯೋ ಮಾಲಕ ಬಾಲಕೃಷ್ಣ ಮಾತನಾಡಿ ಎಲ್ಲಾ ರೀತಿಯ ಸಮಾರಂಭಗಳ ಫೊಟೋಗ್ರಫಿ ಮತ್ತು ವಿಡಿಯೋಗ್ರಫಿ, ಇನ್‌ಡೋರ್ ಮತ್ತು ಔಟ್‌ಡೋರ್ ಶೂಟ್, ಫೊಟೋ ಕಾಪಿ ಜೊತೆಗೆ ಫ್ರೇಮ್ ವರ್ಕ್, ವಿಡಿಯೋ ಎಡಿಟಿಂಗ್ ಹಾಗೂ ಅಲ್ಬಮ್ ವರ್ಕ್ ಸೇವಗಳೂ ನಮ್ಮಲ್ಲಿ ಲಭ್ಯವಿದ್ದು, ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಮಾಲಕರ ಮನೆಯವರು, ಕುಟುಂಬ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here