ಸವಣೂರು ಸೀತಾರಾಮ ರೈ ಅಳಿಯ ಅಶ್ವಿನ್ ಎಲ್ ಶೆಟ್ಟಿ ಇಂದು ಬಿಜೆಪಿ ಸೇರ್ಪಡೆ

0

ಪುತ್ತೂರು: ಖ್ಯಾತ ಉದ್ಯಮಿ, ಸಹಕಾರಿ, ಧುರೀಣ ಸವಣೂರು ಸೀತಾರಾಮ ರೈ ಅವರ ಅಳಿಯ ಅಶ್ವಿನ್ ಎಲ್ ಶೆಟ್ಟಿ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಜ.4ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರಿ ಮತ್ತು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಇವರು ಬಿಜೆಪಿ ಸೇರಲಿದ್ದಾರೆ.

2002 ರಿಂದ 2016 ರವರೆಗೆ ಜರ್ಮನಿ, ಫ್ರಾನ್ಸ್, ಸ್ಪೇನ್, ಚೀನಾ ಮತ್ತು ಆಸ್ಟ್ರೇಲಿಯಾದಲ್ಲಿ ಏರ್ ಬಸ್ ಸಂಸ್ಥೆಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿ ಉದ್ಯೋಗದಲ್ಲಿದ್ದ ಅಶ್ವಿನ್ ಎಲ್. ಶೆಟ್ಟಿಯವರು ಪ್ರಸ್ತುತ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here