ಮೋದಿ ಆಡಳಿತವನ್ನು ಜಗತ್ತು ಒಪ್ಪಿಕೊಂಡಿದೆ- ಸುದರ್ಶನ್
ಪುತ್ತೂರು: ಖ್ಯಾತ ಉದ್ಯಮಿ, ಸಹಕಾರ ರತ್ನ ಸವಣೂರು ಕೆ. ಸೀತಾರಾಮ ರೈ ಅವರ ಅಳಿಯ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿಯವರು ರಾಜಕೀಯ ಪ್ರವೇಶ ಮಾಡಿದ್ದಾರೆ. ಜ.4ರಂದು ಬೆಳಿಗ್ಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಹತ್ತಿರ ಇರುವ ಬಿಜೆಪಿ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಅಶ್ವಿನ್ ಎಲ್ ಶೆಟ್ಟಿಯವರಿಗೆ ಪಕ್ಷದ ಧ್ವಜವನ್ನು ನೀಡಿ, ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರಿರವರು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ನಾಯಕತ್ವ, ಆಡಳಿತವನ್ನು ಇಂದು ಜಗತ್ತು ಒಪ್ಪಿಕೊಂಡಿದೆ, ಇದೀಗ ಯುವ ಮುಂದಾಳು ಸವಣೂರಿನ ಅಶ್ವಿನ್ ಎಲ್ ಶೆಟ್ಟಿಯವರು ಬಿಜೆಪಿ ಸೇರ್ಪಡೆ ಆಗಿರುವುದು ತುಂಬಾ ಸಂತೋಷ ತಂದಿದೆ. ಇದು ಯುವ ಸಮುದಾಯಕ್ಕೆ ಸ್ವೂರ್ತಿಯಾಗಿದೆ. ಸವಣೂರು ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಸವಣೂರು ಸೀತಾರಾಮ ರೈಯವರು ಅದ್ಭುತವಾದ ಸೇವೆಯನ್ನು ಸಮಾಜಕ್ಕೆ ನೀಡಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದೀಗ ಅವರ ಅಳಿಯ ಅಶ್ವಿನ್ ಎಲ್ ಶೆಟ್ಟಿಯವರು ಬಿಜೆಪಿಯ ಮೂಲಕ ಸಮಾಜದಲ್ಲಿ ತಮ್ಮ ಸಾಮಾಜಿಕ, ರಾಜಕೀಯ ಸೇವಾ ಕಾರ‍್ಯಕ್ಕೆ ಬಂದಿರುವುರು ಪಕ್ಷಕೆ ತುಂಬಾ ಸಂತಸ ತಂದಿದೆ ಎಂದು ಹೇಳಿ, ಅಶ್ವಿನ್ ಶೆಟ್ಟಿಯವರಿಗೆ ಶುಭಹಾರೈಸಿದರು.
ಅಶ್ವಿನ್ ಎಲ್ ಶೆಟ್ಟಿಯವರು ಪಕ್ಷ ಸೇರ್ಪಡೆ ಬಳಿಕ ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಸಂತೋಷ್ ಕುಮಾರ್ ರೈ ಬೊಳಿಯಾರ್ ಹಾಗೂ ಪ್ರಧಾನ ಕಾರ‍್ಯದರ್ಶಿ ರಾಮದಾಸ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಸಮಿತಿ ಕಾರ‍್ಯದರ್ಶಿ ರಾಕೇಶ್ ರೈ ಕೆಡೆಂಜಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ‍್ಯಕ್ರಮ ನಿರೂಪಿಸಿದರು.
ಎಸ್ ಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರ ಭಾರತಿ ಪ್ರಮುಖ್ ಉದಯ ರೈ ಮಾದೋಡಿ, ಬಿಜೆಪಿ ಜಿಲ್ಲಾ ಕಾರ‍್ಯದರ್ಶಿ ಪೂಜಾ ಪೈ, ಮಂಳೂರು ಮಹಾನಗರ ಪಾಲಿಕೆ ಸದಸ್ಯೆ ಸಂಗೀತಾ ಆರ್ ನಾಯಕ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಬಂಟ್ವಾಲ ತಾಲೂಕು ತಾ.ಪಂ, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಾಧವ ಮಾವೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಚೇತನ್ ಕುಮಾರ್ ಕೋಡಿಬೈಲು, ನ್ಯಾಯವಾದಿ ಮಹೇಶ್ ಕೆ.ಸವಣೂರು, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಜಿ.ಪಂ, ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾ.ಪಂ, ಸದಸ್ಯ ರವಿಪ್ರಸಾದ್ ಶೆಟ್ಟಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶ್ ರೈ ಮೇನಾಲರವರುಗಳು ಉಪಸ್ಥಿತರಿದ್ದರು.