ಪುತ್ತೂರು / ಮಂಗಳೂರು: ಈ ದೇಶವನ್ನು ಜಾತ್ಯಾತೀತ ರಾಷ್ಟ್ರ ಮಾಡಿ ಎಂದು ಮಹಾತ್ಮಗಾಂಧಿ ಹೇಳಿಲ್ಲ. ಬದಲಾಗಿ ರಾಮರಾಜ್ಯ ಮಾಡಿ ಎಂದಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಛೇರಿಯಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮಹತ್ಮಾ ಗಾಂಧಿ ರಾಮ ರಾಜ್ಯದ ಪರಿಕಲ್ಪನೆಯನ್ನು ಕಂಡವರು. ರಾಮರಾಜ್ಯದ ಪರಿಕಲ್ಪನೆ ಹಿಂದೂರಾಷ್ಟ್ರದ ಪರಿಕಲ್ಪನೆ. ಈ ವಿಚಾರವನ್ನು ಯತೀಂದ್ರ ಅವರು ಒಪ್ಪುವುದಿಲ್ಲ ಎಂದಾದರೆ ಅವರು ಗಾಂಧಿಯನ್ನು ಒಪ್ಪುವುದಿಲ್ಲ ಎಂದರ್ಥ. ಈ ರಾಷ್ಟ್ರ ಹಿಂದೂ ರಾಷ್ಟ್ರ. ಹಿಂದೂ ರಾಷ್ಟ್ರ ಆಗಿರುವ ಕಾರಣಕ್ಕೆ ದೇಶ ಜಾತ್ಯಾತೀತ ರಾಷ್ಟ್ರ ಆಗಿ ಉಳಿದಿದೆ. ಅವರು ಹಿಂದೂ ರಾಷ್ಟ್ರದ ಪರಿಣಾಮವಾಗಿ ಈ ದೇಶ ಚೆನ್ನಾಗಿ ನಡೀತಿದೆ. ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಈ ದೇಶದಲ್ಲಿ ಭಯೋತ್ಪಾದನೆ ತಾಂಡವವಾಡುತ್ತಿತ್ತು ಎಂದವರು ಹೇಳಿದರು.