ಕೆದಿಲ ಶ್ರೀ ಸಪರಿವಾರ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶ, ಜಾತ್ರೋತ್ಸವ- ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಕೆದಿಲ ಗ್ರಾಮದ ಕೆದಿಲ ಶ್ರೀ ಸಪರಿವಾರ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವವು ಮಾ.11 ರಿಂದ 15 ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಜ.3ರಂದು ದೈವಸ್ಥಾನದ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.


ನೇರಳಕಟ್ಟೆ ಸದ್ಗುರು ಹೊಟೇಲ್ ಮಾಲಕ ಅನಂತಪ್ರಭು ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜೆ.ಕೃಷ್ಣ ಭಟ್ ಮೀರಾವನ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಾಜಿ ಸೈನಿಕರಾಗಿರುವ ಜನಾರ್ದನ ಕುಲಾಲ್ ಗಾಣದಕೊಟ್ಯ, ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಕುಲಾಲ್ ನೇರಳಕಟ್ಟೆ, ಸಮಿತಿ ಪದಾಧಿಕಾರಿಗಳು, ಕರಸೇವಕರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಮಂತ್ರಣವನ್ನು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಜಿನ್ನಪ್ಪ ಗೌಡ ಅವರಿಗೆ ಆಮಂತ್ರಣ ಪತ್ರವನ್ನು ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here