ರೋಟರಿ ಸ್ವರ್ಣದಿಂದ ನೂತನ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳ ಅಧಿಕೃತ ಘೋಷಣೆ, ಮಾಹಿತಿ ಕಾರ್ಯಾಗಾರ

0

ಒಡನಾಟ, ಮಿತೃತ್ವ ರೋಟರಿಯ ಧ್ಯೇಯವಾಗಿದೆ-ವಿಕ್ರಂ ದತ್ತ

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಒಡನಾಟ ಹಾಗೂ ಮಿತೃತ್ವ ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ರೋಟರಿ ಸ್ವರ್ಣ ಕೂಡ ಉತ್ತಮವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಸಮಾಜದಲ್ಲಿ ಉತ್ತಮ ಹೆಸರು ಗಳಿಸಿಕೊಂಡಿದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.


ಜ.2 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2024-25ನೇ ಸಾಲಿಗೆ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅಧಿಕೃತ ಘೋಷಣೆ ಮತ್ತು ಮಾಹಿತಿ ಕಾರ್ಯಾಗಾರವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಕೋ-ಟ್ರೈನರ್ ಬಿ.ಶೇಖರ್ ಶೆಟ್ಟಿ ಮಾತನಾಡಿ, ಕ್ಲಬ್ ನಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಯಾವುದು ಸುಲಭ ಅಂತ ತಿಳ್ಕೊತ್ತಾರೋ ಆಗ ಅದು ಸುಲಭವಾಗುತ್ತದೆ, ಕಷ್ಟ ಅಂತ ಭಾವಿಸಿದರೆ ಕಷ್ಟವಾಗುತ್ತದೆ. ಯಾವುದೇ ಕಾರ್ಯಗಳನ್ನು ಕಷ್ಟಪಟ್ಟು ಮಾಡಬೇಡಿ, ಇಷ್ಟಪಟ್ಟು ಮಾಡುವ ಸಂಕಲ್ಪ ಶಕ್ತಿ ಹೊಂದುವವರಾಗಿ ಎಂದು ಹೇಳಿ ನೂತನ ಪದಾಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಮಾತನಾಡಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ಪಬ್ಲಿಕ್ ಇಮೇಜ್ ಜಿಲ್ಲಾ ಚೇರ್‌ಮ್ಯಾನ್ ಎ.ಕೆ.ಎಸ್ ವಿಶ್ವಾಸ್ ಶೆಣೈ ಮಾತನಾಡಿ, ರೋಟರಿ ಸ್ವರ್ಣದಿಂದ ವಿಶೇಷ ಹಾಗೂ ವಿನೂತನ ಕಾರ್ಯಕ್ರಮ ಇದಾಗಿದೆ. ಜೊತೆಗೆ ರೋಟರಿ ನಿಯೋಜಿತ ಜಿಲ್ಲಾ ಗವರ್ನರ್‌ರವರ ವಿದೇಶ ಪ್ರಯಾಣಕ್ಕೆ ರೋಟರಿ ಸ್ವರ್ಣರವರು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಶುಭ ಹಾರ‍್ಯಸಿರುವುದು ಮತ್ತೂ ವಿಶೇಷವಾಗಿದೆ ಎಂದರು.


ವಲಯ ಐದರ ಸಹಾಯಕ ಗವರ್ನರ್ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದ ಮೊದಲೇ ಮುಂದಿನ ಪದಾಧಿಕಾರಿಗಳ ಘೋಷಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ನಮ್ಮಲ್ಲಿ ಹೃದಯ ವೈಶಾಲ್ಯತೆ ಇದ್ದರೆ ಹಾಗೂ ಎಲ್ಲರನ್ನು ವಿಶ್ವಾಸವಿರಿಸಿ ಮುನ್ನೆಡೆದರೆ ಜೊತೆಗೆ ಬದ್ಧತೆ, ಪಾರದರ್ಶಕತೆ, ಕ್ರಿಯಾಶೀಲತೆ ಇದ್ದಾಗ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವುದು ಎಂದರು.


ವಲಯ ಐದರ ನಿಯೋಜಿತ ಸಹಾಯಕ ಗವರ್ನರ್ ಸೂರ್ಯನಾಥ ಆಳ್ವ, ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ, ವಲಯ ಐದರ ವಲಯ ಸೇನಾನಿ ಭಾಸ್ಕರ ಕೋಡಿಂಬಾಳ, ವಲಯ ಐದರ ನಿಯೋಜಿತ ವಲಯ ಸೇನಾನಿ ವೆಂಕಟ್ರಮಣ ಗೌಡ ಕಳುವಾಜೆರವರು ಸಂದರ್ಭೋಚಿತವಾಗಿ ಮಾತನಾಡಿದರು.
ಸದಸ್ಯೆ ಮೀನಾಕ್ಷಿ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಸುಂದರ ರೈ ಬಲ್ಕಾಡಿ ಸ್ವಾಗತಿಸಿ, ಸಂಧ್ಯಾ ಬೈಲಾಡಿ ವಂದಿಸಿದರು. ಆಶಾ ರೆಬೆಲ್ಲೋ, ಆನಂದ ಮೂವಪ್ಪು, ಚಂದ್ರಶೇಖರ ಮೂರ್ತಿ, ಅಶೋಕ್ ಆಚಾರ್ಯ, ದೀಪಕ್ ಮಿನೇಜಸ್, ರೋಶನ್ ರೈ, ವಿಜಯ್ ಡಿ’ಸೋಜರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಮಹಾಬಲ ಗೌಡರವರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಯಶವಂತ ಗೌಡ ಕಾಂತಿಲ ವರದಿ ಮಂಡಿಸಿದರು. ಸುಧಾಕರ ನಿಡ್ವಣ್ಣಾಯರವರು ಅತಿಥಿಗಳ ಪರಿಚಯ ಮಾಡಿದರು. ಸದಸ್ಯ ದೀಪಕ್ ಬೊಳ್ವಾರು ಕಾರ್ಯಕ್ರಮ ನಿರೂಪಿಸಿದರು.


‘ದಶ’ ಕಾರ್ಯಕ್ರಮದೊಂದಿಗೆ ‘ಸ್ವರ್ಣಯುಗ’…
ಮಾತೃಸಂಸ್ಥೆ ರೋಟರಿ ಪುತ್ತೂರು ತನ್ನ ಐವತ್ತನೇ ವರ್ಷಕ್ಕೆ ಹುಟ್ಟು ಹಾಕಿದ್ದ ಈ ಸಂಸ್ಥೆಯು ದಶ ಸಂಭ್ರಮದತ್ತ ಮುನ್ನುಗ್ಗುತ್ತಿದೆ. ಈ ದಶ ಸಂಭ್ರಮದ ಅಧ್ಯಕ್ಷನನ್ನಾಗಿ ಕ್ಲಬ್ ಸದಸ್ಯರು ಈ ಕಿರಿಯ ಸಹೋದರನ ಮೇಲೆ ಭರವಸೆ ಹಾಗೂ ಪ್ರೀತಿಯಿಟ್ಟು ಆಯ್ಕೆ ಮಾಡಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ. ಮಾತ್ರವಲ್ಲ ಮುಂದೆ ಗುರಿ, ಹಿಂದೆ ಗುರುಗಳಿದ್ದಾರೆ ಎಂಬಂತೆ ಕಾಯಾ, ವಾಚಾ, ಮನಸಾ ನಾನು ಕ್ಲಬ್ ಅನ್ನು ಮುನ್ನೆಡೆಸುತ್ತೇನೆ ಎಂಬ ಅಚಲ ನಂಬಿಕೆ ನನಗಿದೆ. ಕ್ಲಬ್‌ನ ದಶ ಸಂಭ್ರಮಕ್ಕೆ ‘ದಶ’ ಸಮಾಜಮುಖಿ ಗುರಿಗಳನ್ನು ಕ್ಲಬ್ ಸದಸ್ಯರ ಪ್ರೋತ್ಸಾಹದಿಂದ ಕ್ಲಬ್‌ಗೆ ನವರತ್ನಗಳನ್ನು ಪೋಣಿಸಿ ಕ್ಲಬ್ ಅನ್ನು ‘ಸ್ವರ್ಣಯುಗ’ವನ್ನಾಗಿ ಮಾಡಲು ಕಾತರನಾಗಿದ್ದೇನೆ.
-ಸುರೇಶ್ ಪಿ, ನಿಯೋಜಿತ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ

ಆರತಿ ಬೆಳಗಿಸಿ, ಹಣೆಗೆ ತಿಲಕ..
ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ರೋಟರಿ ತರಬೇತುದಾರರಾಗಿ ಆಮೇರಿಕ ವಿದೇಶ ಪ್ರಯಾಣ ಕೈಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರೋಟರಿ ಸ್ವರ್ಣದ ಮಹಿಳಾಮಣಿಗಳು ವಿಕ್ರಂ ದತ್ತರವರಿಗೆ ಆರತಿ ಬೆಳಗಿಸಿ, ಹಣೆಗೆ ತಿಲಕವನ್ನಿಟ್ಟು ಶುಭ ಹಾರೈಸಿದರು. ಈ ಸಂಭ್ರಮದ ಪ್ರತೀಕವಾಗಿ ವಿಕ್ರಂ ದತ್ತರವರು ಪ್ರಸ್ತುತ ಅಧ್ಯಕ್ಷ ಸುಂಂದರ್ ರೈ ಬಲ್ಕಾಡಿ, ನಿಯೋಜಿತ ಅಧ್ಯಕ್ಷ ಸುರೇಶ್ ಪಿ.ರವರೊಡಗೂಡಿ ಕೇಕ್ ಕತ್ತರಿಸಿ ಸಿಹಿಯನ್ನು ಹಂಚಿಕೊಳ್ಳಲಾಯಿತು.

2024-25ನೇ ನೂತನ ತಂಡ..
2024-25ನೇ ನೂತನ ಅಧ್ಯಕ್ಷರಾಗಿ ಸುರೇಶ್ ಪಿ, ಕಾರ್ಯದರ್ಶಿ ಸೆನೋರಿಟ ಆನಂದ್, ಉಪಾಧ್ಯಕ್ಷ ಪ್ರವೀಣ್ ರೈ ಸಾಂತ್ಯ, ಜೊತೆ ಕಾರ್ಯದರ್ಶಿ ಮೀನಾಕ್ಷಿ, ಕೋಶಾಧಿಕಾರಿ ವಿಜಯ್ ಡಿ’ಸೋಜ, ಸಾರ್ಜಂಟ್ ಎಟ್ ಅರ್ಮ್ಸ್ ಸುಭಾಷ್ ರೈ ಬೆಳ್ಳಿಪ್ಪಾಡಿ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ನಿರ್ದೇಶಕರುಗಳಾಗಿ ಕ್ಲಬ್ ಸರ್ವಿಸ್ ಭಾಸ್ಕರ್ ಕೋಡಿಂಬಾಳ, ವೊಕೇಶನಲ್ ಸರ್ವಿಸ್ ಮಹಾಬಲ ಗೌಡ, ಕಮ್ಯೂನಿಟಿ ಸರ್ವಿಸ್ ಸುಧಾಕರ್ ನಿಡ್ವಣ್ಣಾಯ, ಇಂಟರ್‌ನ್ಯಾಷನಲ್ ಸರ್ವಿಸ್ ದಿನೇಶ್ ಆಚಾರ್ಯ, ಯೂತ್ ಸರ್ವಿಸ್ ಸುನಿಲ್ ಜಾಧವ್, ಚೇರ್‌ಮ್ಯಾನ್‌ಗಳಾಗಿ ಸದಾನಂದ ಆಚಾರ್ಯ(ಪಲ್ಸ್ ಪೋಲಿಯೊ), ದೀಪಕ್ ಬೊಳ್ವಾರು(ಟಿಆರ್‌ಎಫ್), ಜಯಂತ್ ಶೆಟ್ಟಿ ಕಂಬಳದಡ್ಡ(ಜಿಲ್ಲಾ ಪ್ರಾಜೆಕ್ಟ್), ದೀಪಕ್ ಮಿನೇಜಸ್(ಮೆಂಬರ್‌ಶಿಪ್, ರಾಮಣ್ಣ ರೈ ಕೈಕಾರ(ಟೀಚ್), ಯಶವಂತ್ ಗೌಡ ಕಾಂತಿಲ(ವಿನ್ಸ್), ಮೋಹನ್ ಗೌಡ ನೆಲಪ್ಪಾಲ್(ವೆಬ್), ಸೀತಾರಾಮ ಗೌಡ(ಸಿಎಲ್‌ಸಿಸಿ), ಶೀನಪ್ಪ ಪೂಜಾರಿ(ವಾಟರ್ & ಸ್ಯಾನಿಟೇಶನ್), ರೋಶನ್ ರೈ ಬನ್ನೂರು(ಪಬ್ಲಿಕ್ ಇಮೇಜ್), ಗಣೇಶ್(ಪರಿಸರ)ರವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here