ಪುತ್ತೂರು: ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ಪಬ್ಲಿಕ್ ಇಮೇಜ್ ಮತ್ತು ರಸ್ತೆ ಸುರಕ್ಷತಾ ಜಾಗೃತಿ ವಿಭಾಗ ನೇತೃತ್ವದಲ್ಲಿ ರೋಟರಿ ರಸ್ತೆ ಸುರಕ್ಷಾ ಸಪ್ತಾಹದ ಉದ್ಘಾಟನಾ ಸಮಾರಂಭ ಜ.11 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಗಾಂಧಿ ನಗರದಲ್ಲಿರುವ ರೋಟರಿ ಬಾಲ ಭವನದಲ್ಲಿ ನಡೆಯಲಿದೆ.
ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ಸಿಟಿ ಕಾರ್ಪರೇಷನ್ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ರಸ್ತೆ ಸುರಕ್ಷತೆ ಮತ್ತು ಜಾಗೃತಿಯ ಕುರಿತು ನಡೆಸಿದ ರಾಷ್ಟ್ರ ಮಟ್ಟದ ಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಅಟೋರಿಕ್ಷ, ಟ್ಯಾಕ್ಸಿ ಮತ್ತು ಇತರ ವಾಹನ ಚಾಲಕರಿಗೆ ಉಚಿತ ವೈದ್ಯಕೀಯ ಶಿಬಿರ ನಡೆಯಲಿದ್ದು ಇದರ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ನೆರವೇರಿಸಲಿದ್ದಾರೆ. ಜಿಲ್ಲಾ ಎಸ್.ಪಿ. ರಿಷ್ಯಂತ್ ಸಿ.ಬಿ. ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಭಾರತದ ರಾಷ್ಟ್ರೀಯ ಹೈವೇ ಅಥಾರಿಟಿಯ ಮಂಗಳೂರು ವಲಯದ ಪ್ರಾಜೆಕ್ಟ್ ಡೈರೆಕ್ಟರ್ ಅಬ್ದುಲ್ ಜಾವೆದ್ ಅಜ್ಮಿ, ರಾಷ್ಟ್ರೀಯ ಹೈವೇ ಅಥಾರಿಟಿಯ ಮಂಗಳೂರು ವಲಯದ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವ ಪ್ರಸಾದ್, ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ನಿಕಟಪೂರ್ವ ಜಿಲ್ಲಾ ಗವರ್ನರ್ ರಘುನಾಥ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಖ್ಯಾತ ವಾಗ್ಮಿಗಳಾದ ಮಂಗಳೂರು ಸಿಟಿ ಪೊಲೀಸ್ ಕ್ರೈಮ್ ಮತ್ತು ಟ್ರಾಫಿಕ್ ಡಿಸಿಪಿ ರಸ್ತೆ ಸುರಕ್ಷತೆ ಮತ್ತು ಜಾಗೃತೆಯ ಬಗ್ಗೆ ಮಾಹಿತಿ ನೀಡಲಿದ್ದು. ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಅಸೋಸಿಯೇಟ್ ಪ್ರೋಫೆಸರ್ ತಜ್ಞ ವೈದ್ಯೆ ಪ್ರತೀಕ್ಷಾ ರೈ ವಾಹನ ಚಾಲಕರಿಗೆ ಉತ್ತಮ ಆರೋಗ್ಯ ಹೊಂದುವ ಕುರಿತು ಮಾಹಿತಿಯನ್ನು ನೀಡಲಿದ್ದಾರೆ ಎಂದು ರೋಟರಿ ರಸ್ತೆ ಸುರಕ್ಷಾ ಸಪ್ತಾಹ 2024 ರ ಈವೆಂಟ್ ಮ್ಯಾನೇಜರ್ ಕೃಷ್ಣ ಶೆಟ್ಟ, ರೋಟರಿ ಪಬ್ಲಿಕ್ ಇಮೇಜ್ನ ಜಿಲ್ಲಾ ಗವರ್ನರ್ ವಿಶ್ವಾಸ್ ಶೆಣೈ, ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗೃತಿ ವಿಭಾಗದ ಜಿಲ್ಲಾ ಚೇರ್ಮ್ಯಾನ್ ಹರ್ಷ ಕುಮಾರ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಟರಿ ಜಿಲ್ಲೆ 3181 ವತಿಯಿಂದ ಜಿಲ್ಲಾ ಗವರ್ನರ್ ಕೇಶವ್ ಇವರ ನಾಯಕತ್ವದಲ್ಲಿ ರಸ್ತೆ ಸುರಕ್ಷತೆ ಮತ್ತು ಜಾಗೃತಿಯ ಬಗ್ಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು. ರೋಟರಿ ರಸ್ತೆ ಸುರಕ್ಷತಾ ಸಪ್ತಾಹ 2024ರ ಅಂಗವಾಗಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ತಜ್ಞ ವೈದ್ಯರ ತಂಡದಿಂದ ಅಟೋರಿಕ್ಷ ,ಟ್ಯಾಕ್ಸಿ ಮತ್ತು ಇತರ ವಾಹನ ಚಾಲಕರಿಗೆ ಉಚಿತ ವೈದ್ಯಕೀಯ ಶಿಬಿರ ಡಿ.11 ರಂದು ಬೆಳಿಗ್ಗೆ 9.30 ರಿಂದ ಮದ್ಯಾಹ್ನ 1 ರ ತನಕ ಮಂಗಳೂರಿನ ಗಾಂಧಿನಗರದಲ್ಲಿರುವ ರೋಟರಿ ಬಾಲ ಭವನದಲ್ಲಿ ನಡೆಯಲಿದೆ.ಚಾಲಕರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿ
ರೋಟರಿ ರಸ್ತೆ ಸುರಕ್ಷತೆ ಮತ್ತು ಜಾಗೃತಿ ವಿಭಾಗದ ಜಿಲ್ಲಾ ಚೇರ್ಮ್ಯಾನ್ ಹರ್ಷ ಕುಮಾರ್ ರೈ