ಜ.13: ಡಾ ಅಮೃತ ಸೋಮೇಶ್ವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವು ಜ.13 ಶನಿವಾರ ಸಂಜೆ 4 ಗಂಟೆಯಿಂದ 5 ರ ತನಕ ರೋಟರಿ ಬ್ಲಡ್ ಬ್ಯಾಂಕಿನ ಬಳಿ ಇರುವ ಅನುರಾಗ ವಠಾರದಲ್ಲಿ ನಡೆಯಲಿದೆ.

ಡಾ. ಸೋಮೇಶ್ವರ ಅವರ ಅಭಿಮಾನಿಗಳು, ಶಿಷ್ಯ ವರ್ಗದವರು,ಸಾಹಿತಿಗಳು ಈ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಬೇಕೆಂದು ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here