ಪುತ್ತೂರು: ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲೆ 3181 ರ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ “ಕಲಾ ಅನ್ವೇಷಣೆಯಲ್ಲಿ” ಪ್ರತಿಷ್ಠಿತ “ಪುತ್ತೂರು ರೋಟರಿ ಕ್ಲಬ್” ಸಮಗ್ರ ಚಾಂಪಿಯನ್‌ಶಿಪ್ ಪಟ್ಟವನ್ನು ಪಡೆದುಕೊಂಡಿದೆ. ಭಾಗವಹಿಸಿದ ಎಲ್ಲಾ ಏಳು ವಿಭಾಗಗಳಲ್ಲಿಯೂ ಬಹುಮಾನ ಪಡೆದು ರೋಟರಿ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿದೆ.
ಇತ್ತೀಚೆಗೆ ನಡೆದ ವಲಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿಯೂ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಬಾಜನವಾಗಿದ್ದ ಕ್ಲಬ್, ಇದೀಗ ರೋಟರಿ ಜಿಲ್ಲಾ ಸ್ಪರ್ಧೆಗಳಲ್ಲೂ ಉತ್ತಮ ಸಾಧನೆ ಮಾಡಿದೆ. ಸಮೂಹನೃತ್ಯ ಸ್ಪರ್ಧೆಯಲ್ಲಿ ಪ್ರಥಮ, ಕಿರುಪ್ರಹಸನ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಆನೆಟ್ ವಿಭಾಗದಲ್ಲಿ ವೈಯಕ್ತಿಕ ಗಾಯನ ಸ್ಪರ್ಧೆಯಲ್ಲಿ ಪ್ರಾರ್ಥನ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ. ಯುಗಳ ಗೀತೆಯಲ್ಲಿ ರೊಟೇರಿಯನ್ ದಾಮೋದರ ಮತ್ತು ಪ್ರಾರ್ಥನ ಆನೆಟ್ ,ವಿಭಾಗ ವೈಯಕ್ತಿಕ ಸಂಗೀತದಲ್ಲಿ ಆನೆಟ್ ಆರಾಧನ, ವೈಯಕ್ತಿಕ ನೃತ್ಯದಲ್ಲಿ ಆನೆಟ್ ಜ್ಞಾನ ರೈ ಮತ್ತು ಸ್ಟಾಂಡ್ ಅಪ್ ಕಾಮಿಡಿಯಲ್ಲಿ ರೊಟೇರಿಯನ್ ಸುಬ್ಬಪ್ಪ ಕೈಕಂಬ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ಜೈರಾಜ್ ಭಂಡಾರಿ ಮತ್ತು ಕಾರ್ಯದರ್ಶಿ ರೊಟೇರಿಯನ್ ಸುಜಿತ್ ಡಿ ರೈಯವರ ಮಾರ್ಗದರ್ಶನದಲ್ಲಿ ರೋಟರಿ ತಂಡ ಭಾಗವಹಿಸಿದ್ದು, ಕಾರ್ಯಕ್ರಮ ಸಮಿತಿ ಸಭಾಪತಿ ರೊಟೇರಿಯನ್ ಸುಬ್ಬಪ್ಪ ಕೈಕಂಬ ನಿರ್ದೇಶನ ಮಾಡಿದ್ದರು. ಸಂಗೀತ ನಿರ್ದೇಶಕರಾಗಿ ನೀನಾಸಂ ಪದವೀಧರ ಶೀನಾ ನಾಡೋಳಿ ಹಾಗೂ ನೃತ್ಯ ನಿರ್ದೇಶಕರಾಗಿ ರಂಗಾಯಣ ಪದವೀಧರ ರಾಕೇಶ್ ಸಹಕರಿಸಿದ್ದರು. ರೊಟೇರಿಯನ್‌ಗಳಾದ ಪ್ರೇಮಾನಂದ, ಪರಮೇಶ್ವರ, ದಾಮೋದರ, ಕಿಶನ್, ಜಗದೀಶ್, ಗಣೇಶ್ ರೈ, ಹಾಗೂ ಆನ್‌ಗಳಾದ ಶ್ರೀಲತಾ, ಅನಸೂಯ, ಸವಿತಾ ಎಸ್ ಕೈಕಂಬ, ಕವಿತಾ ಕೊಳತ್ತಾಯ ಕೃಷ್ಣವೇಣಿ, ಹೇಮಾ ಜಯರಾಮ್ ಆನೆಟ್‌ಗಳಾದ ಪ್ರಾರ್ಥನಾ, ಅನಘ, ಆರಾಧನಾ, ತೇಜಸ್ ಎಸ್ ಕೆ, ವೈಭವ್ ಎಸ್ ಕೆ, ಅನ್ವಿತ್, ವಿಶಸ್, ಜ್ಞಾನ ರೈ, ಭಾಗವಹಿಸಿ ಬಹುಮಾನಗಳಿಸಿರುತ್ತಾರೆ.