ಪುತ್ತೂರು: ಸೆವೆನ್ ಡೈಮಂಡ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಆಯ್ದ ಆಹ್ವಾನಿತ 8 ತಂಡಗಳ ಹೊನಲು ಬೆಳಕಿನ ಲೀಗ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯಾಟ ಫೆ.10 ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಜೂಲಿಯನ್ ಪೀಟರ್, ಅಧ್ಯಕ್ಷರಾಗಿ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷರಾಗಿ ಗಣೇಶ್ ರೈ ಮುಂಡಾಸು, ಪ್ರ.ಕಾರ್ಯದರ್ಶಿಯಾಗಿ ಪ್ರದೀಪ್ ಪಿ.ಆರ್, ಜೊತೆ ಕಾರ್ಯದರ್ಶಿಯಾಗಿ ಶರತ್ ರೈ ಮುಂಡಾಸು, ಕೋಶಾಧಿಕಾರಿಯಾಗಿ ಗುಣಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ಮೋಹನ್ ಕೆ, ರಾಧಾಕೃಷ್ಣ ಎ.ಎಸ್.ಐ ಪುತ್ತೂರುರವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಶಿವರಾಮ್ ಭಟ್ ಪೆರ್ಲಂಪಾಡಿ, ಪ್ರಕಾಶ್ ಪಿ.ಎಸ್.ಐ, ರಾಧಾಕೃಷ್ಣ ರೈ ಮುಂಡಾಸ್, ಉಜ್ವಲ್ ಶೆಟ್ಟಿ ಪುತ್ತೂರು, ಬೇಬಿಜಾನ್, ಮೋನಪ್ಪ ಪಟ್ಟೆ, ಪ್ರಶಾಂತ್ ರೈ ಕೈಕಾರ, ರಾಕೇಶ್ ರೈಯವರನ್ನು ಆಯ್ಕೆ ಮಾಡಲಾಯಿತು. ಕ್ರೀಡಾ ಸಂಚಾಲಕರಾಗಿ ಅನೂಪ್, ರಫೀಕ್ ಆತೂರು, ನವನೀತ್ ಬಜಾಜ್, ಕಿರಣ್ ರೈ ಕೈಕಾರ, ನಂದ ಪಟ್ಟೆ, ಗುರುಕಿರಣ್, ಪ್ರಮೋದ್ ಉಪ್ಪಳಿಗೆ, ಸವೀಣ್ ಪುತ್ತೂರು, ಸಂಜೀವ, ಶರತ್ ಕೂರೇಲು, ಸುಹಾಸ್ ಉಪ್ಪಿನಂಗಡಿ, ಅಶ್ವಿನ್ ಪರ್ಪುಂಜ, ಆಕ್ಷಯ್‌ರವರುಗಳನ್ನು ಆಯ್ಕೆ ಮಾಡಲಾಯಿತು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.25 ಸಾವಿರ, ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ಹಾಗೂ ಚತುರ್ಥ 7 ಸಾವಿರ ನಗದು ಹಾಗೂ ಪ್ರತಿ ಪಂದ್ಯಕ್ಕೆ ಮ್ಯಾನ್ ಆಫ್ ದಿ ಮ್ಯಾಚ್ ನಗದು ಬಹುಮಾನ, ಬೆಸ್ಟ್ ಟೂರ್ನಮೆಂಟ್ ಪ್ಲೇಯರ್ ಹೀರೋ ಸೈಕಲ್ ಬಹುಮಾನ ಇದೆ. ಪಂದ್ಯಾಟ ಫೆ.10 ರಂದು ಸಂಜೆ 4 ರಿಂದ ಆರಂಭಗೊಳ್ಳಲಿದೆ. ಕ್ರೀಡಾ ಪ್ರೇಮಿಗಳಿಗೆ ಉಚಿತ ಪ್ರವೇಶ ಇದೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.