ಕಾವು: ಡಿ.18ರಂದು ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಾವು-ಮಾಡ್ನೂರು ಇದರ ವತಿಯಿಂದ ಕಾವುನಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆಯು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಗ್ರಾಮ ದೇವರಾದ ಕಾವು ಶ್ರೀ ಪಂಚಲಿಂಗೇಶ್ವರ ದೇವರಿಗೆ ಸೋಮವಾರ ಪೂಜೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮವು ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರ ಉಪಸ್ಥಿತಿಯಲ್ಲಿ ಜ.8ರಂದು ಸಂಜೆ ನಡೆಯಿತು. ಕಾವು ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಶ್ರೀದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿ ಪ್ರಸಾದ ವಿತರಿಸಿದರು.
ಅಭಿನಂದನಾ ಕಾರ್ಯಕ್ರಮ:
ಕಾವುನಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಯಶಸ್ವಿಗೆ ಎಲ್ಲಾ ರೀತಿಯ ಮಾರ್ಗದರ್ಶನ ಮಾಡಿದ ಮತ್ತು ಪುತ್ತೂರಿನಲ್ಲಿ ಅಭೂತಪೂರ್ವವಾಗಿ ಸಂಪನ್ನಗೊಂಡ ಶ್ರೀನಿವಾಸ ಕಲ್ಯಾಣೋತ್ಸವದ ನೇತೃತ್ವ ವಹಿಸಿದ್ದ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರಿಗೆ ಕಾವು ಘಟಕದಿಂದ ಅಭಿನಂದನೆ ಸಲ್ಲಿಸಿ ಸನ್ಮಾನ ಮಾಡಲಾಯಿತು.
ಧಾರ್ಮಿಕ ಕಾರ್ಯಗಳಿಂದ ಹಿಂದೂ ಸಮಾಜಕ್ಕೆ ಶಕ್ತಿ-ಪುತ್ತಿಲ
ಅಭಿನಂದನೆ ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲರವರು ನಾವೆಲ್ಲರೂ ಒಗ್ಗಟ್ಟಾಗಿ ನಡೆಸುವ ಧಾರ್ಮಿಕ ಕಾರ್ಯಗಳಿಂದ ಹಿಂದೂ ಸಮಾಜಕ್ಕೆ ಇನ್ನಷ್ಟು ಶಕ್ತಿ ಹೆಚ್ಚಾಗುತ್ತದೆ, ಸಮಾಜದಲ್ಲಿ ನಿರಂತರವಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸಿ ಹಿಂದೂ ಸಮಾಜದ ಏಳಿಗೆಗಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಪ್ರಸನ್ನ ಕುಮಾರ್ ಮಾರ್ತ, ಕಾವು ಘಟಕದ ಉಸ್ತುವಾರಿ ಸುನೀಲ್ ಬೋರ್ಕರ್, ಅಧ್ಯಕ್ಷ ಹರೀಶ್ ಕುಂಜತ್ತಾಯ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಕಾವು, ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಪಳನೀರು, ಪ್ರಧಾನ ಕಾರ್ಯದರ್ಶಿ ಚಿದಾನಂದ ಆಚಾರ್ಯ ಸಸ್ಪೆಟ್ಟಿ, ಪದಾಧಿಕಾರಿಗಳಾದ ಶರತ್ ಕುಮಾರ್ ನೆಲ್ಲಿತ್ತಡ್ಕ, ರವಿ ಕುಲಾಲ್ ಮಾಣಿಯಡ್ಕ, ಅನಂತಕೃಷ್ಣ ನಾಯಕ್, ರವಿಪ್ರಸಾದ್ ಕಾವು, ರವಿಕಿರಣ ಪಾಟಾಳಿ ಕಾವು, ಚಿತ್ತರಂಜನ್ ವಾಗ್ಲೆ, ಕಮಲಾಕ್ಷ ಕಾವು, ಪ್ರಸಾದ್ ಕೆರೆಮಾರು, ನಿರಂಜನ ಕಾವು, ಅಮೃತಲಿಂಗಂ ಕಾವು, ಸುಧೀಂದ್ರ ಕಾವು, ಮಹೇಶ್ವರ ನನ್ಯ, ನಾರಾಯಣಶರ್ಮ ಬರೆಕರೆ, ಅಖಿಲೇಶ್ ಕಾಮತ್, ಪುನೀತ್ ಕೆರೆಮಾರು, ಪ್ರದೀಪ್ ಕೆರೆಮಾರು, ದೇವಿಶ್ ಡೆಂಬಾಳೆ, ಮೋನಪ್ಪ ಕುಲಾಲ್, ಜಯರಾಮ ಬಾಳೆಕೊಚ್ಚಿ ಸೇರಿದಂತೆ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.