ಕಾಣಿಯೂರು: ಸೆಲ್ಕೋ ಸೋಲಾರ್‌ನಿಂದ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ

0

ಪುತ್ತೂರು: ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ಬಡತನ ನಿರ್ಮೂಲನೆಯಲ್ಲಿ ವಿಶಿಷ್ಟ ಮಾದರಿಯ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ವ್ಯವಸ್ಥಾಪಕ ಚೇತನ್ ಸಿ ಹೇಳಿದರು.


ಸೆಲ್ಕೋ ಸೋಲಾರ್ ಲೈಟ್ ಕಂಪನಿಯ ವತಿಯಿಂದ ಜ.8ರಂದು ಕಾಣಿಯೂರು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರಕ್ಕೆ ಪೂರಕವಾದ ಸೌರ ಇಂಧನವನ್ನು ಬಳಸಿಕೊಂಡು ಮುಂದಿನ ಮೂರು ವರ್ಷಗಳಲ್ಲಿ, ದೇಶಾದ್ಯಂತ ಸುಮಾರು 50 ಸಾವಿರ ಸ್ವ ಉದ್ಯೋಗಿಗಳನ್ನು ಸೃಷ್ಟಿಸುವ ಕೆಲಸ ಸೆಲ್ಕೋ ಸಂಸ್ಥೆ ಕೆಲಸ ಮಾಡುತ್ತಿದೆ. ಜೀವನೋಪಾಯ ಕ್ಷೇತ್ರದಲ್ಲಿ ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಸ್ವ ಉದ್ಯೋಗವನ್ನು ಮಾಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ಪೂರಕವಾಗುವಂತೆ ವಿವಿಧ ಉದ್ಯೋಗ ಮಾದರಿ ಮತ್ತು ಸೂಕ್ತ ತರಬೇತಿ ನೀಡಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ದೊರೆಯಲಿದೆ. ಇದಕ್ಕಾಗಿ ನಮ್ಮ ಬ್ಯಾಂಕ್‌ನ ಮೂಲಕ ಸಾಲ ಸೌಲಭ್ಯವಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಸೆಲ್ಕೋ ಸೋಲಾರ್‌ನ ಇಲಾಖೆ ಪ್ರದೇಶ ವ್ಯವಸ್ಥಾಪಕ ಪ್ರಸಾದ್ ಮಾತನಾಡಿ, ಸ್ವ ಉದ್ಯೋಗ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನ ಸಿಬ್ಬಂದಿಗಳಾದ ಚೈತ್ರ ಎಮ್.ಸಿ., ವಿಜಾತ ನವೀನ್ ನಾಯಕ್, ಸೆಲ್ಕೋ ಸೋಲಾರ್‌ನ ಕ್ಷೇತ್ರದ ವ್ಯವಸ್ಥಾಪಕ ಸಂಜಿತ್ ರೈ, ಶಾಖಾ ವ್ಯವಸ್ಥಾಪಕ, ಸುಧಾಕರ ಆಳ್ವ, ಮಾರಾಟ ನಿರ್ವಾಹಕರಾದ ಚಿದಾನಂದ ಮತ್ತು ರೋಶನ್ ಶೆಟ್ಟಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here