ಪುತ್ತೂರು: ಬೆಟ್ಟಂಪಾಡಿ ಗ್ರಾಮಪಂಚಾಯತ್‌ನಲ್ಲಿ ವಿಕಲಚೇತನರ ಗ್ರಾಮಸಭೆ ನಡೆಯಿತು. ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಇಲಾಖೆಯ ಮಾಹಿತಿ ನೀಡಿದರು.
ಬೆಟ್ಟಪಾಂಡಿ ಸಮುದಾಯದ ಆರೋಗ್ಯ ಕೇಂದ್ರ ಸುರಕ್ಷಾ ವೈದ್ಯಾಧಿಕಾರಿ ಡಾ.ಧನ್ಯ ಎಂಡೋ ಪೀಡಿತರ ಆರೋಗ್ಯದ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ, ಉಪ್ಪಾಧ್ಯಕ್ಷ ಮಹೇಶ್ ಕೋರ್ಮಂಡ, ಕಾರ್ಯದರ್ಶಿ ಬಾಬು ನಾಯ್ಕ, ಬೆಟ್ಟಂಪಾಡಿ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ ರಾಧಾವತಿ, ಪಾಣಾಜೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಅಬ್ದುಲ್ ಆಜೀಜ್, ನಿಡಳ್ಳಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಾಮ, ವಿಕಲಚೇತನರು, ವಿಕಲಚೇತನರ ಪೋಷಕರು, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಸಂಘದ ಸದ್ಯಸರು ಉಪಸ್ಥಿತರಿದ್ದರು.