ಜೆಸಿಐ ಪುತ್ತೂರು ವಲಯ 15ರ ಪದಗ್ರಹಣ

0

ಜೆಸಿಐ ಸಮಾಜಮುಖಿ ಕಾರ್ಯಕ್ರಮಗಳು ಹಲವರಿಗೆ ತಲುಪಿದೆ-ಮಧುಮನೋಹರ್

ಪುತ್ತೂರು: ಜೆಸಿಐ ಪುತ್ತೂರು ವಲಯ 15ರ ಪದಗ್ರಹಣ ಸಮಾರಂಭ ಮರೀಲ್ ಪುತ್ತೂರು ಕ್ಲಬ್‌ನಲ್ಲಿ ನಡೆಯಿತು.
ಪುತ್ತೂರು ನಗರಸಭಾ ಪೌರಾಯುಕ್ತ ಮಧುಮನೋಹರ್ ಮಾತನಾಡಿ ಸುಮಾರು 80 ವರ್ಷದಿಂದ ಜೆಸಿಐ ಸಂಸ್ಥೆ ಕಾರ್ಯಾಚರಿಸುತ್ತಿದೆ. ಪುತ್ತೂರಿನಲ್ಲಿ ಕಳೆದ 53 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. 2023ರ ಅವಧಿಯಲ್ಲಿ ಜೆಸಿಐನಿಂದ ಹಲವಾರು ಕಾರ್ಯಕ್ರಮಗಳು ನಡೆದು ಹಲವರಿಗೆ ತಲುಪಿದೆ. ಕಳೆದ ಅವಧಿಯ ಅಧ್ಯಕ್ಷರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಪ್ರಸ್ತುತ ಅಧಿಕಾರ ವಹಿಸಿಕೊಂಡ ಜೆಸಿಐ ಅಧ್ಯಕ್ಷ ಮೋಹನ್‌ರವರು ಕೂಡ ಸಮಾಜಮುಖಿ ಚಿಂತನೆಗಳುಳ್ಳ ವ್ಯಕ್ತಿಯಾಗಿದ್ದಾರೆ. ನಗರಸಭೆಯಿಂದ ಜೆಸಿಐ ಕಾರ್ಯಗಳಿಗೆ ಸಹಕಾರ ನೀಡಲಾಗುವುದು ಎಂದು ಹೇಳಿ ಶುಭಹಾರೈಸಿದರು.

ಜೆಸಿಐ15 ವಲಯ ರೀಜನ್ ಬಿ. ಉಪಾಧ್ಯಕ್ಷ ಜೆಸಿ ಶಂಕರ್ ರಾವ್ ಮಾತನಾಡಿ ಜೆಸಿಐ ವ್ಯಕ್ತಿತ್ವ ವಿಕಸನದ ಅಡಿಯಲ್ಲಿ ಹುಟ್ಟಿಕೊಂಡ ಅಂತರಾಷ್ಟ್ರೀಯ ಸಂಸ್ಥೆ. ಇದರ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಮೂಲಕ ತಾವು ಬೆಳೆದು ಇತರರನ್ನು ಬೆಳೆಸಲು ಅವಕಾಶಗಳು ಸಿಗುತ್ತದೆ. ಪುತ್ತೂರಿನಲ್ಲಿ ಜೆಸಿಐ ಆಂದೋಲನವನ್ನು ಮಾಡಿ ಪುತ್ತೂರಿನ ಉದ್ದಗಲಕ್ಕೂ ಪಸರಿಸಿ ಎಂದರು. ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಹಾಗೂ ಪುತ್ತೂರು ಕ್ಲಬ್ ಅಧ್ಯಕ್ಷ ದೀಪಕ್ ರೈ ಮಾತನಾಡಿ ಜೆಸಿಐ ಸದಸ್ಯರಾದವರು ಸಮಾಜಸೇವೆಗೆ ಸಿದ್ಧರಾಗಬೇಕು. ಸಮಾಜದಲ್ಲಿರುವ ಕೊರತೆಯನ್ನು ನೀಗಿಸಲು ಇಂತಹ ಸಂಸ್ಥೆಯ ಅಗತ್ಯವಿದೆ. ನೂತನ ಅಧ್ಯಕ್ಷರು ಸಮರ್ಥರಾಗಿದ್ದಾರೆ. ಪುತ್ತೂರು ಜೆಸಿಐ ದೊಡ್ಡ ಘಟಕವಾಗಿದೆ. ನಮ್ಮ ಕ್ಲಬ್‌ನಿಂದ ಯಾವುದೇ ಸಹಕಾರ ನೀಡಲು ಸಿದ್ಧ ಎಂದು ಹೇಳಿ ಶುಭಹಾರೈಸಿದರು.


ಪದಸ್ವೀಕರಿಸಿದ ನೂತನ ಅಧ್ಯಕ್ಷ ಮೋಹನ್ ಕೆ. ಮಾತನಾಡಿ ಪುತ್ತೂರು ಜೆಸಿಐಯ 53ನೇ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. 53 ನನ್ನ ಅದೃಷ್ಟದ ಸಂಖ್ಯೆ. ನಾನು 2017ರಲ್ಲಿ ಜೆಸಿಐ ಸಂಘಟನೆಗೆ ಸೇರಿದೆ. ಇಲ್ಲಿಯವರೆಗೆ ಹಲವು ಜವಾಬ್ದಾರಿಯನ್ನ ನಿರ್ವಹಿಸಿದ್ದೇನೆ. ಜೆಸಿಐನಲ್ಲಿ ವಿಶೇಷವಾಗಿ ಸಿಗುವ ಕಾರ್ಯಕ್ರಮಗಳ ಪ್ರಯೋಜನ ಪಡೆದಿದ್ದೇನೆ. ಇಲ್ಲಿ ನಿಂತು ಮಾತನಾಡಬೇಕಾದರೆ ಕಾರಣ ಜೆಸಿಐ. ಪುತ್ತೂರನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಬೇಕೆಂಬ ನನ್ನ ಯೋಜನೆ ಗುರಿಯಾಗಿದೆ ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಸುಹಾಸ್ ಮರಿಕೆ ವರದಿ ವಾಚಿಸಿ ಮಾತನಾಡಿ ಪುತ್ತೂರು ಜೆಸಿಐ ಸಮಾಜಮುಖಿ ಕೆಸಲಗಳನ್ನು ಮಾಡುತ್ತಿದೆ. ಸಮಾಜದ ಅಭಿವೃದ್ಧಿಯಾಗಬೇಕೆನ್ನುವ ದೃಷ್ಟಿಯಿಂದ ಮುಂದಿನ ಜವಾಬ್ದಾರಿ ನೀಡುತ್ತಿದ್ದೇನೆ. 2023ರಲ್ಲಿ ಆರ್ಥಿಕ ಕ್ರೋಢಿಕರಣಕ್ಕೆ ಹಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಮುಂದಿನ 50 ವರ್ಷಗಳ ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿದ್ದೇವೆ ಎಂದು ಹೇಳಿ ನೂತನ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಸನ್ಮಾನ: ಜೆಸಿಐ 2023ರ ನಿಕಟಪೂರ್ವ ಅಧ್ಯಕ್ಷ ಸುಹಾಸ್ ಮರಿಕೆಯವರನ್ನು ಸನ್ಮಾನಿಸಲಾಯಿತು.

ಪುತ್ತೂರು ಜೆಸಿಐನ ಪ್ಲಾಸ್ಟಿಕ್ ಮುಕ್ತ ಆಂದೋಲನದ ಪ್ರಯುಕ್ತ ಪುತ್ತೂರು ಕ್ಲಬ್‌ನಲ್ಲಿ ವಾಟರ್ ಪ್ಯೂರೀಫಯರ್‌ನ್ನು ನಗರಸಭಾ ಪೌರಾಯುಕ್ತ ಮಧುಮನೋಹರ್ ಉದ್ಘಾಟಿಸಿದರು. ಪೂರ್ವಾಧ್ಯಕ್ಷ ಪುರಂದರ ರೈರವರು ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಅಭಿನಂದನೆ ಸಲ್ಲಿಸಿದರು. ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. 2023ರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸದಸ್ಯರನ್ನು ಗೌರವಿಸಲಾಯಿತು. ದಾಮೋದರ ಪಾಟಾಳಿ, ಅನೂಪ್, ಮನೋಹರ್, ಸುಪ್ರೀತ್ ಕೆ.ಸಿ. ಅತಿಥಿಗಳ ಪರಿಚಯ ಮಾಡಿದರು.
ಜೆಸಿಐ ಪೂರ್ವಾಧ್ಯಕ್ಷ ಶಶಿರಾಜ್ ರೈ, ಮಾಜಿ ಕಾರ್ಯದರ್ಶಿ ಕಾರ್ತಿಕ್ ಬಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಜೆಸಿ ಪೂರ್ವಾಧ್ಯಕ್ಷ ಪವಿತ್, ನಿಕಟಪೂರ್ವ ಅಧ್ಯಕ್ಷ ಸುಹಾಸ್ ಮರಿಕೆ ಸ್ವಾಗತಿಸಿ ನೂತನ ಕಾರ್ಯದರ್ಶಿ ಆಶಾ ಎಮ್. ವಂದಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು, ಜೆಸಿಐ ಪೂರ್ವಾಧ್ಯಕ್ಷರುಗಳು, ಸಲಹೆಗಾರರು, ರೋಟರಿ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜೆಸಿಐ ಅಧ್ಯಕ್ಷ, ಪದಾಧಿಕಾರಿಗಳ ಪದಪ್ರದಾನ
ಜೆಸಿಐ ಪುತ್ತೂರು ನೂತನ ಅಧ್ಯಕ್ಷ ಮೋಹನ್ ಕೆ.ರವರಿಗೆ ನಿಕಟಪೂರ್ವ ಅಧ್ಯಕ್ಷ ಸುಹಾಸ್ ಮರಿಕೆರವರು ಪದಪ್ರದಾನ ಮಾಡಿ ಪ್ರಮಾಣವಚನ ಬೋಧಿಸಿದರು. ಕಾರ್ಯದರ್ಶಿ ಆಶಾ ಎಮ್., ಜೆಜೆಸಿ ಅಧ್ಯಕ್ಷೆ ವಿಷ್ಣುಪ್ರಿಯ ಕೆ.ವಿ.,ರವರಿಗೆ ಪದಪ್ರದಾನ ಮಾಡಲಾಯಿತು.ಕೋಶಾಧಿಕಾರಿ ಸುಹಾಸ್ ರೈ, ವಿವಿಧ ಪದಾಧಿಕಾರಿಗಳಾದ ಅನೂಪ್ ಕೆ.ಜೆ., ಭಾಗ್ಯೇಶ್ ರೈ, ಮಾಳಿನಿ ಕಶ್ಯಪ್, ಚೇತನ್ ಕುಮಾರ್, ಭವಿತ್ ಜಿ., ಜಿತೇಶ್ ರೈ, ಶೋಭಾ ರೈ, ವಿಷ್ಣುಪ್ರಿಯ ಕೆ.ವಿ., ರಂಜಿನಿ ಶೆಟ್ಟಿರವರಿಗೆ ನೂತನ ಅಧ್ಯಕ್ಷ ಮೋಹನ್ ಕೆ. ಪ್ರಮಾಣವಚನ ಬೋಧಿಸಿದರು.

LEAVE A REPLY

Please enter your comment!
Please enter your name here