ಅಂಕೋಲದಲ್ಲಿ ವೃದ್ಧ ದಂಪತಿಯ ಭೀಕರ ಕೊಲೆ, ದರೋಡೆ ಪ್ರಕರಣ- ಪ್ರಾಸಿಕ್ಯೂಶನ್ ಪರ ಎಸ್‌ಪಿಪಿ ಶಿವಪ್ರಸಾದ್ ಆಳ್ವರ ಸಮರ್ಥ ವಾದ ಮಂಡನೆ

0

ಪುತ್ತೂರು:2019ರಲ್ಲಿ ಅಂಕೋಲದಲ್ಲಿ ಕೈಕಾಲುಗಳನ್ನು ಕಟ್ಟಿ ಹಾಕಿ ವೃದ್ಧ ದಂಪತಿಯನ್ನು ಭೀಕರವಾಗಿ ಕೊಲೆಗೈದು ದರೋಡೆ ಮಾಡಿದ್ದ ಅಪರಾಽಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 2.7 ಲಕ್ಷ ರೂ. ದಂಡ ವಿಧಿಸಿ ಕಾರವಾರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾಗಿ ಪುತ್ತೂರಿನ ಶಿವಪ್ರಸಾದ್ ಆಳ್ವ ಅವರು ಸಮರ್ಥ ವಾದ ಮಂಡನೆ ಮಾಡಿ ಅಪರಾಽಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

2019ರ ಡಿ.19ರಂದು ಅಂಕೋಲ ತಾಲೂಕಿನ ಮೊಗಟಾ ಗ್ರಾ.ಪಂ.ವ್ಯಾಪ್ತಿಯ ಆಂದ್ಲೆಯಲ್ಲಿ ಗುತ್ತಿಗೆದಾರ ನಾರಾಯಣ ಬೊಮ್ಮಯ್ಯ ನಾಯಕ(78ವ.)ಹಾಗೂ ಅವರ ಪತ್ನಿ ಸಾವಿತ್ರಿ ನಾರಾಯಣ ನಾಯಕ (68ವ.)ದಂಪತಿಯ ಕೈಕಾಲು ಕಟ್ಟಿ ಹಾಕಿ ಅವರನ್ನು ಭೀಕರವಾಗಿ ಕೊಲೆ ಮಾಡಿ,ಮನೆಯಲ್ಲಿದ್ದ ಚಿನ್ನಾಭರಣ ಮತ್ತು 2.5 ಲಕ್ಷ ರೂ.ನಗದು ದರೋಡೆ ಮಾಡಲಾಗಿತ್ತು.ದುಷ್ಕರ್ಮಿಗಳು ಮನೆಯ ಹಿಂಬದಿಯ ಬಾಗಿಲಿನಿಂದ ಒಳ ನುಗ್ಗಿ,ದಂಪತಿಯ ಹತ್ಯೆಗೈದಿದ್ದರು.ಮನೆಯ ಹಿಂಬದಿಯ ಬಾಗಿಲಿನ ಹೊರಗಡೆ ನಾರಾಯಣ ನಾಯಕ ಅವರ ಮೃತ ದೇಹವು ಕೈಕಾಲು ಕಟ್ಟಿ ಹಾಕಿದ ರೀತಿಯಲ್ಲಿ ಬಿದ್ದಿದ್ದರೆ,ಸಾವಿತ್ರಿ ನಾಯಕ ಅವರನ್ನು ಮನೆಯೊಳಗಿನ ಕೊಠಡಿಯಲ್ಲಿ ಬೆಡ್‌ಶೀಟ್‌ನಿಂದ ಕೈ ಕಾಲುಗಳನ್ನು ಕಟ್ಟಿ,ಬಾಯಿಗೆ ಗಮ್‌ಟೇಪ್ ಸುತ್ತಿ ಕೊಲೆ ಮಾಡಲಾಗಿತ್ತು.ವೃದ್ಧ ದಂಪತಿಯ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ, ಕೊಲೆಯಾದ ನಾರಾಯಣ ನಾಯಕ ಅವರ ತಮ್ಮನ ಮಗ ಸುಖೇಶಚಂದ್ರು ನಾಯಕ(42ವ),ಬೆಂಗಳೂರಿನ ಇಂಡಸ್ಟ್ರೀಯಲ್ ಜಿಗಣೆ ಏರಿಯಾದ ವೆಂಕಟರಾಜಪ್ಪ, ಭರತ್ ಇ ಮತ್ತು ನಾಗರಾಜ್ ವಾಯ್ ಅಪರಾಧಿಗಳು ಎಂದು ಕಾರವಾರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧಿಶ ವಿಜಯ ಕುಮಾರ್ ಅವರು ದ.27ರಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಜ.2ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.

ಜ.3ರಂದು ಅಪರಾಧಿಗಳ ಪರ ನ್ಯಾಯವಾದಿಗಳು ಅಪಿಡವಿಟ್ ಸಲ್ಲಿಸಿ, ಈ ಅಪರಾಧಿಗಳಿಗೆ ಕೊಲೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ.ಕೇವಲ ಮನೆಯನ್ನು ಕಳವು ಮಾಡಲು ಬಂದಿದ್ದರು.ಈ ಹತ್ಯೆ ಎನ್ನುವುದು ಕೇವಲ ಆಕಸ್ಮಿಕ.ಹಾಗಾಗಿ ಶಿಕ್ಷೆಯನ್ನು ಕಡಿಮೆಗೊಳಿಸಿ ನೀಡುವಂತೆ ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿದ್ದರು.ಈ ವೇಳೆ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ ಆಳ್ವ ಕೆ.ಅವರು, ಅಪರಾಧಗಳು ರಾಕ್ಷಿಸಿ ಪ್ರವೃತ್ತಿಯಂತೆ ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದಾರೆ.ಹೀಗಾಗಿ ಅವರಿಗೆ ಗರಿಷ್ಠ ಕಠಿಣ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ ಮಾಡಿದರು.ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧಿಶರು ಜ.9ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದರು.ಜ.9ರಂದು ಅಪರಾಧಗಳ ಎದುರು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧಿಶರು ಘೋಷಿಸಿದರು.ನಾಲ್ಕು ಅಪರಾದಿಗಳಿಗೂ ಜೀವಾವಧಿ ಶಿಕ್ಷೆ ಮತ್ತು ತಲಾ 2.7 ಲಕ್ಷ ರೂ ದಂಡ ವಿಧಿಸಲಾಗಿದೆ.

ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು.ದರೋಡೆ ಮಾಡಿದ್ದಕ್ಕಾಗಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಮತ್ತು ಸಾಕ್ಷಿ ನಾಶ ಮಾಡಿದ್ದಕ್ಕಾಗಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ 5 ಸಾವಿರ ರೂ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಜೆ ಹಾಗೂ ಕೊಲೆ ಪೂರ್ವ ಸಂಚು ರೂಪಿಸಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 5 ಸಾವಿರ ರೂ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.ಈ ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿಗೊಳಿಸತಕ್ಕದ್ದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಎಸ್‌ಪಿಪಿ ಶಿವಪ್ರಸಾದ್ ಆಳ್ವರಿಂದ ಸಮರ್ಥ ವಾದ ಮಂಡನೆ: ಈ ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾಗಿದ್ದ ಪುತ್ತೂರಿನ ಶಿವಪ್ರಸಾದ ಆಳ್ವ ಕೆ.ಅವರು ಸಮರ್ಥವಾಗಿ ವಾದ ಮಂಡಿಸಿ, ನಾಲ್ಪರು ಆರೋಪಿಗಳೂ ಕೃತ್ಯದಲ್ಲಿ ಪಾಲ್ಗೊಂಡಿರುವುದನ್ನು ಸಾಬೀತುಪಡಿಸಿದ್ದರಲ್ಲದೆ, ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ನೀಡುವಂತೆ ನ್ಯಾಯಾಲಯದ ಮುಂದೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.ನ್ಯಾಯಾಧಿಶ ವಿಜಯಕುಮಾರ ಅವರು ಪ್ರಕರಣವನ್ನು ಆಳವಾಗಿ ಅಧ್ಯಯನ ನಡೆಸಿ ಅಂತಿಮವಾಗಿ ಆರೋಪಿಗಳಿಗೆ ಜೀವಾವಽ ಶಿಕ್ಷೆ ಮತ್ತು ದಂಡ ವಿಽಸಿ ತೀರ್ಪು ನೀಡಿದ್ದಾರೆ. ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿರುವ ಶಿವಪ್ರಸಾದ್ ಆಳ್ವರವರು ಪುತ್ತೂರು ಸಹಿತ ವಿವಿಧ ನ್ಯಾಯಾಲಯಗಳಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ, ಅಭಿಯೋಜಕರಾಗಿ, ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು.ಪ್ರಸ್ತುತ ಇವರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಽಕಾರಿಯಾಗಿದ್ದಾರೆ.ವಿಶೇಷ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಲು ಸರಕಾರ ಶಿವಪ್ರಸಾದ್ ಆಳ್ವರವರನ್ನು ನೇಮಿಸುತ್ತಿದೆ.ಈಗಾಗಲೇ ಹಲವು ಪ್ರಕರಣಗಳಲ್ಲಿ ಇವರು ಸಮರ್ಥ ವಾದ ಮಂಡನೆ ಮಾಡಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬೆಳಗಾವಿ ಅಂಕೋಲಾದ ಉದ್ಯಮಿ, ಬಿಜೆಪಿಯ ಪ್ರಭಾವೀ ನಾಯಕರೂ ಆಗಿದ್ದ ಆರ್.ಎನ್.ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ಸಹಿತ 9 ಮಂದಿ ಅಪರಾಧಿಗಳಿಗೆ ‘ಕೋಕಾ’ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.ಇಲ್ಲಿಯೂ ಪ್ರಾಸಿಕ್ಯೂಶನ್ ಪರವಾಗಿ ಕೆ.ಶಿವಪ್ರಸಾದ್ ಆಳ್ವ ವಾದಿಸಿದ್ದರು.ಕೋಕಾ ಕಾಯ್ದೆಯಡಿ ದಾಖಲಾದ ಪ್ರಥಮ ಪ್ರಕರಣ ಇದಾಗಿದ್ದು ಪರಿಣಾಮಕಾರಿ ವಾದ ಮಂಡನೆ ಮಾಡಿದ್ದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಶಿವಪ್ರಸಾದ್ ಆಳ್ವ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿ ಅಭಿನಂದಿಸಿದ್ದರು.ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಪತ್ನಿ ನಾಪತ್ತೆ, ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ನ್ಯಾಯಾಲಯ ಜೈಲು ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿತ್ತು.ಈ ಪ್ರಕರಣದಲ್ಲಿಯೂ ಪ್ರಾಸಿಕ್ಯೂಶನ್ ಪರ ಶಿವಪ್ರಸಾದ್ ಆಳ್ವ ವಾದಿಸಿದ್ದರು.

ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.ಅಪರಾಧಗಳು ಈ ಪ್ರಕರಣದಲ್ಲಿ ಸಿಕ್ಕಿ ಬೀಳಬಾರದೆಂದು ಬಹಳ ಚಾಕಚಕ್ಯತೆಯಿಂದ ಕೊಲೆ ಮಾಡಿ ದರೋಡೆ ಮಾಡಿದ್ದರು.ಆದರೆ ನ್ಯಾಯಾಲಯದಲ್ಲಿ ಸಾಂದರ್ಭಿಕ ಸಾಕ್ಷಿಗಳನ್ನು ಒಟ್ಟುಗೂಡಿಸಿ, ಇವರೇ ಕೊಲೆ ಮಾಡಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದೇವೆ.ಕಾನೂನಿನ ಕೈ ತುಂಬಾ ದೊಡ್ಡದಿದೆ.ಕಾನೂನಿನಲ್ಲಿ ಎಲ್ಲ ಸಾಕ್ಷಿಗಳನ್ನು ಒಟ್ಟುಗೂಡಿಸಿದರೆ ಯಾವುದೇ ಪ್ರಕರಣದಲ್ಲಿಯೂ ಆರೋಪಿಗಳನ್ನು ಶಿಕ್ಷಗೆ ಒಳಪಡಿಸಬಹುದು ಎನ್ನುವುದಕ್ಕೆ ಈ ಪ್ರಕರಣದ ತೀರ್ಪು ಸಮಾಜಕ್ಕೆ ಉತ್ತಮ ಸಂದೇಶ ಕೊಡಲಿದೆ
– ಶಿವಪ್ರಸಾದ ಆಳ್ವ, ಸರಕಾರದ ವಿಶೇಷ ಅಭಿಯೋಜಕರು.

LEAVE A REPLY

Please enter your comment!
Please enter your name here