ಪುತ್ತೂರು: ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಅಡ್ಹೊಕ್ ಕಮಿಟಿಯ ನೇತೃತ್ವದಲ್ಲಿ ಇಂಡಿಯನ್ ಒಲಂಪಿಕ್ಸ್ ಎಸೋಸಿಯೇಷನ್ ಮತ್ತು ಕ್ರೀಡಾ ಮಂತ್ರಾಲಯ, ಭಾರತ ಸರಕಾರದ ಅನುಮೋದನೆಯೊಂದಿಗೆ ಬೀಚ್ ವಾಲಿಬಾಲ್ ಪಂದ್ಯಾಟವು ಜನವರಿ 5, 2024 ರಿಂದ (DIU) ಡಿಯು ಗುಜರಾತ್ ನಲ್ಲಿ ನಡೆಯುತ್ತಿದ್ದು ಈ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುವ ಪುರುಷರ ತಂಡದಲ್ಲಿ ಪುತ್ತೂರಿನ ಕ್ರೀಡಾಪಟುಗಳಾದ ಪವಿತ್ ಗೌಡ ಮತ್ತು ಮಹಮ್ಮದ್ ಹಝೀಂ ಹಾಗೂ ಮಹಿಳಾ ತಂಡದಲ್ಲಿ ಧಾರವಾಡ ಜಿಲ್ಲೆಯ ಶಿಲ್ಪಾ ಎಂ ಬಡಿಗಾರ್ ಮತ್ತು ಶ್ರೀದೇವಿ ಎಸ್ ಬಡಿಗಾರ್ ಭಾಗವಹಿಸಿದ್ದು ಸೆಮಿ ಫೈನಲ್ಸ್ ತಲುಪಿದ್ದಾರೆ.
ಈ ಕ್ರೀಡಾಪಟುಗಳು ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಹಾಗೂ ವಾಲಿಬಾಲ್ ತರಬೇತುದಾರ ಹಾಗೂ ಮಾಜಿ ಸಿಂಡಿಕೇಟ್ ಬ್ಯಾಂಕ್ನ ರಾಷ್ಟ್ರೀಯ ತರಬೇತುದಾರ ಪಿ.ವಿ.ನಾರಾಯಣ್ ರಿಂದ ಪುತ್ತೂರಿನ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ನಡೆಸಿದ ವಾಲಿಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು ತರಬೇತಿಯನ್ನು ಪಡೆದವರಾಗಿರುತ್ತಾರೆ. ಅಲ್ಲದೇ ಪುರುಷರ ತಂಡದ ಕ್ರೀಡಾಪಟುಗಳು ಅಕಾಡೆಮಿಯ ಸದಸ್ಯರಾಗಿರುತ್ತಾರೆ. ಕಳೆದ 6 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿರುವ ಮಹಿಳಾ ಮತ್ತು ಪುರುಷರ ಬೀಚ್ ವಾಲಿಬಾಲ್ ತಂಡದ ಕ್ರೀಡಾಪಟುಗಳು ಪುತ್ತೂರಿನ ಮಿತ್ರವೃಂದ ವಾಲಿಬಾಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದು ಪುತ್ತೂರಿಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತಂದಿರುತ್ತಾರೆ.