ಅಂಗನವಾಡಿ ಕಾರ್ಯಕರ್ತರ ಸೇವೆ ಪಾವಿತ್ರತ್ಯತೆಯನ್ನು ಹೊಂದಿದೆ: ಶಾಸಕ ಅಶೋಕ್ ರೈ
ಪುತ್ತೂರು : ಕಲ್ಮಶಮುಕ್ತ ಪುಟ್ಟ ಹೃದಯಗಳಿಗೆ ನಲ್ಮೆಯ ಸಂದೇಶ, ಸಂಸ್ಕಾರದ ಪಾಠ ಕಲಿಸುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಅತ್ಯಂತ ಪವಿತ್ರವಾದದ್ದಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಕೆಮ್ಮಾಯಿ ಅಂಗನವಾಡಿಯಲ್ಲಿ ಡಿ.9ರಂದು ನಡೆದ ಬಾಲಮೇಳದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಗನವಾಡಿ ಪುಟಾಣಿಗಳಿಗೆ ಸರಕಾರದ ಮೂಲಕ ಪೌಷ್ಠಿಕ ಆಹಾರದ ವಿತರಣೆ ನಡೆಯುತ್ತಿದೆ. ಬಡವರ ಮಕ್ಕಳೂ ಅಪೌಷ್ಠಿಕತೆಯಿಂದ ಇರಬಾರದು ಎಂಬ ಏಕೈಕ ಉದ್ದೇಶದಿಂದ ಸರಕಾರ ಆಹಾರ ವಿತರಣೆಯನ್ನು ಮಾಡುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಪುಟ್ಟ ಹೃದಯಗಳಿಗೆ ಅಕ್ಷರ ಜ್ಞಾನವನ್ನು ಕಲಿಸುವ ಕಾಯಕ ಅತ್ಯಂತ ಪವಿತ್ರವಾದದ್ದು ಎಂದು ಹೇಳಿದರು. ವೇದಿಕೆಯಲ್ಲಿ ನಗರಸಭಾ ಸದಸ್ಯರುಗಳಾದ ಸುಂದರ ಪೂಜಾರಿ, ಲೀಲಾವತಿ, ಕೆಮ್ಮಾಯಿ ಶಾಲಾ ಮುಖ್ಯ ಶಿಕ್ಷಕಿ ಮರಿಯಮ್ಮ, ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ, ಸೋಮನಾಯ್ಕ್, ಜಾನು ನಾಯ್ಕ್, ಸಂತೋಷ್, ಆರೋಗ್ಯ ಸಹಾಯಕಿ ಮೀನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶಶಿಕಲಾ ಸ್ವಾಗತಿಸಿದರು. ಬಾಲವಿಕಾಸ ಸಮಿತಿ ಸದಸ್ಯೆಯಾದ ಶಿಕ್ಷಕಿ ಸುನೀತಾರವರು ಕಾರ್ಯಕ್ರಮ ನಿರೂಪಿಸಿದರು. ಬಾಲಮೇಳದ ಪ್ರಯುಕ್ತ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಣೆ ನಡೆಯಿತು. ಸಮಿತಿ ವತಿಯಿಂದ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.