2023-24ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತಯಾರಿ ಮಾಹಿತಿ ಕಾರ್ಯಗಾರ

0

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ಪರೀಕ್ಷೆಯನ್ನು ಹಬ್ಬದ ರೀತಿ ಆಚರಿಸುವ ಸಲುವಾಗಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಜೆ.ಸಿ.ಐ ಪುತ್ತೂರು ಇದರ ನೇತೃತ್ವದಲ್ಲಿ 2023-24ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತಯಾರಿ ಮಾಹಿತಿ ಕಾರ್ಯಗಾರವನ್ನು ಜ.21ರಂದು ಬೆಳಗ್ಗೆ 10 ಗಂಟೆ‌ಯಿಂದ ಸಂಜೆ 4 ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರದಲ್ಲಿ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳ ವಿವರ, ಉತ್ತರಗಳನ್ನು ಬರೆಯುವ ರೀತಿ, ಹೆಚ್ಚು ಅಂಕಗಳನ್ನು ಗಳಿಸುವ ವಿಧಾನ, ಪರೀಕ್ಷಾ ಸಮಯದ ನಿರ್ವಹಣೆ, ಪರಿಣಾಮಕಾರಿ ಅಧ್ಯಯನದ ವಿಧಾನ, ಪ್ರಮುಖ ಪ್ರಶ್ನೋತ್ತರಗಳ ಪುನರ್ ಮನನ ಇನ್ನೂ ಅನೇಕ ಪ್ರಮುಖ ಅಂಶಗಳ ಬಗ್ಗೆ ನುರಿತ ಉಪಾನ್ಯಾಸಕ ಹಾಗೂ ಅಧ್ಯಾಪಕ ವೃಂದದವರಿಂದ ಮಾರ್ಗದರ್ಶನವನ್ನು ನೀಡಲಾಗುವುದು. ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ ಉಪನ್ಯಾಸಕ ಗಣೇಶ್ ಮೂರ್ತಿ ಅಳಿಕೆ, ಇಂಗ್ಲೀಷ್ ವಿಷಯಕ್ಕೆ ನಿವೃತ್ತ ಪ್ರಾಂಶುಪಾಲ ಬಿ.ವಿ. ಸೂರ್ಯನಾರಾಯಣ, ಭೌತಶಾಸ್ತ್ರ ಉಪಾನ್ಯಾಸಕ ಸುಧೀರ್, ರಾಸಾಯನಶಾಸ್ತ್ರ ಉಪಾನ್ಯಾಸಕ ರಮ್ಯಾಶ್ರೀ ಭಟ್ ಹಾಗೂ 10ನೇ ತರಗತಿ ವಿಭಾಗದ ವಿದ್ಯಾರ್ಥಿಗಳಿಗೆ ಗಣಿತ ವಿಷಯಕ್ಕೆ ಹೇಮಲತಾ ಕೆ, ವಿಜ್ಞಾನ ವಿಷಯಕ್ಕೆ ರಮ್ಯಶ್ರೀ ಭಟ್, ಸಮಾಜ ವಿಜ್ಞಾನ ಹಾಗೂ ಕನ್ನಡ ವಿಷಯಕ್ಕೆ ಪ್ರಮೀಳಾ ಎನ್.ಡಿ. ಹಾಗೂ ಇಂತಹ ಇನ್ನು ಅನೇಕ ವಿಷಯವಾರು ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಗಾರಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆಯಿದೆ. ಪ್ರತ್ಯೇಕ ವಿಭಾಗಗಳಲ್ಲಿ ವಿಷಯವಾರು ವಿಂಗಡಿಸಿ ತರಗತಿ ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ಜ.17ರ ಒಳಗಾಗಿ 9480106274 ಈ ದೂರವಾಣಿ ಸಂಖ್ಯೆಗೆ ಬೆಳಗ್ಗೆ 9:30ರಿಂದ ಸಂಜೆ 5:30 ಗಂಟೆಯ ಒಳಗಾಗಿ ಕರೆ ಮಾಡಿ ಅಥವಾ ವಾಟ್ಸಪ್ ಮೂಲಕ ನೋಂದಣಿ ಮಾಡಿ ಕಾರ್ಯಗಾರದ ಸದುಪಯೋಗ ಮಾಡಿಕೊಳ್ಳಬೇಕಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಹಾಗೂ ಜೆ.ಸಿ.ಐ ಪುತ್ತೂರು ಇದರ ಅಧ್ಯಕ್ಷ ಜೆ.ಸಿ. ಮೋಹನ್ ಕೆ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here