ಪುಣಚ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ವಿಟ್ಲ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಪುಣಚ ಗ್ರಾಮ ಪಂಚಾಯತ್ ಹಾಗೂ ಪುಣಚ ಉಜ್ವಲ ಸಂಜೀವಿನಿ ಒಕ್ಕೂಟ ಇವರ ಸಹಬಾಗಿತ್ವದಲ್ಲಿ ನಡೆಯಲಿರುವ 2 ದಿನಗಳ ಮೀನಿನ ಮೌಲ್ಯ ವರ್ದಿತ ಉತ್ಪನ್ನಗಳ ತರಬೇತಿ ಶಿಬಿರದ ಉದ್ಘಾಟನೆ ಜ.11ರಂದು ಪುಣಚ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ. ಪಂ. ಅಧ್ಯಕ್ಷೆ ಯಶೋಧ ಶಿಬಿರ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ತರಬೇತಿ ಪಡೆದು ಸ್ವ ಉದ್ಯೋಗ ಕೈಗೊಳ್ಳಲು ಪಂಚಾಯತ್ ವತಿಯಿಂದ ಸದಾ ಸಹಕಾರ ಇದೆ ಎಂದರು. ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತಾನಾಡಿ, ಮಹಿಳೆಯರು ಸ್ವಾವಲಂಬನೆ ಜೀವನ ಸಾಗಿಸಲು ಸ್ವ ಉದ್ಯೋಗ ಸಹಕಾರಿ ಎಂದರು. ಬಂಟ್ವಾಳ ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕದ ವ್ಯವಸ್ಥಾಪಕ ಪ್ರದೀಪ್ ಕಾಮತ್ ಮಾತನಾಡಿ, ತರಬೇತಿ ಪಡೆದು ಸಾಲ ಸೌಲಭ್ಯದ ಪೂರ್ಣ ಪ್ರಯೋಜನ ಪಡೆದು ಸ್ವ ಉದ್ಯೋಗ ಕೈಗೊಳ್ಳುವಂತೆ ಕರೆ ನೀಡಿದರು. ಪುಣಚ ಪಂಚಾಯತ್ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಪಾರ್ವತಿ, ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭಾರತಿ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಶುಸಖಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಪುಸ್ತಕ ಬರಹಗಾರರಾದ ರೇಖಾ ಸ್ವಾಗತಿಸಿ, ವಂದಿಸಿದರು. ಬೆಳ್ತಂಗಡಿ ಲಾಯಿಲ ಗುಂಪಿನ ಸಾವಿತ್ರಿ, ನಸೀಮಾ, ಶಾಹಿದ ಸಂಪನ್ಮೂಲ ವ್ಯಕ್ತಿಗಳಾಗಿ ಮೀನಿನ ಮೌಲ್ಯ ವರ್ದಿತ ಉತ್ಪನ್ನ ಮಾಡುವ ತರಬೇತಿ ನೀಡಿದರು. ಪುಣಚ ಹಾಗೂ ಸುತ್ತ ಮುತ್ತ ಗ್ರಾಮ ವ್ಯಾಪ್ತಿಯ ಅನೇಕ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.