ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ಜ.16 ರವರೆಗೆ ಕಿರುಷಷ್ಠಿ ಮಹೋತ್ಸವ

0

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.12 ರಿಂದ ಜ.16 ರವರೆಗೆ ಕಿರುಷಷ್ಠಿ ಮಹೋತ್ಸವವು ನಡೆಯಲಿದ್ದು, ಧಾರ್ಮಿಕ ಉಪನ್ಯಾಸ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ.12 ರಂದು ಸಂಜೆ 5:00 ಗಂಟೆಗೆ ಶ್ರೀ ಕಾರ್ತಿಕ ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಂಜೆ 5:45 ರಿಂದ ಕು| ವೈಷ್ಣವಿ ಕಿಶೋರ್ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ, ಸಂಜೆ 7:00 ರಿಂದ ಪ್ರಕಾಶ್ ಮಲ್ಪೆ ಸಾರಥ್ಯದಲ್ಲಿ “ಉತ್ತಿಷ್ಠ ಭಾರತ” ಗೀತ-ಕಥನ ಕಾರ್ಯಕ್ರಮ, ರಾತ್ರಿ 9:00 ರಿಂದ ವೈಷ್ಣವಿ ನಾಟ್ಯಾಲಯ(ರಿ.) ಪುತ್ತೂರು ಇದರ ನಿರ್ದೇಶಕರಾದ ಯೋಗೀಶ್ವರಿ ಜಯಪ್ರಕಾಶ್ ಇವರ ಶಿಷ್ಯವೃಂದದಿಂದ “ನೃತ್ಯಾರ್ಪಣಂ” ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಜ.13 ರಂದು ಸಂಜೆ 5:45 ರಿಂದ ನೃತ್ಯೋಪಾಸನಾ ಕಲಾಕೇಂದ್ರ(ರಿ.) ಪುತ್ತೂರು ಪ್ರಸ್ತುತಪಡಿಸುವ “ನೃತ್ಯೋಹಂ” ಕಾರ್ಯಕ್ರಮ ನಡೆಯಲಿದೆ. ಸಂಜೆ 7:00 ರಿಂದ ಶ್ರೀದೇವಿ ಸಚಿನ್‌ ಧರ್ಮಸ್ಥಳ ಮತ್ತು ಬಳಗದವರಿಂದ “ನಿನಾದ ಗಾನ ಸಂಭ್ರಮ” ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8:15 ರಿಂದ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವರ ಯಜ್ಞ ತಂಡದವರಿಂದ “ನೃತ್ಯಸಂಗಮ ಹಾಗೂ ನೃತ್ಯರೂಪಕ” ನಡೆಯಲಿದೆ.

ಜ.14 ರಂದು ಸಂಜೆ 4:30 ರಿಂದ ಕರ್ನಾಟಕ ಸರ್ಕಾರದ ಪೋಲೀಸು ವಾದ್ಯ ವೃಂದದಿಂದ(ಮೈಸೂರು ಅರಮನೆ ವಾದ್ಯವೃಂದ) ಇವರಿಂದ “ವಿಶೇಷ ವಾದ್ಯಗೋಷ್ಠಿ” ಕಾರ್ಯಕ್ರಮ ನಡೆಯಲಿದ್ದು, ಸಂಜೆ 6:00 ರಿಂದ ಕು| ನಿಧಿಶ್ರೀ.ಕೆ.ಎನ್ ಹಾಗೂ ಕು| ಸ್ನೇಹ.ಕೆ.ಸಿ ಚನ್ನರಾಯಪಟ್ಟಣ ಇವರಿಂದ “ಭರತನಾಟ್ಯ ಕಾರ್ಯಕ್ರಮ” ನಡೆಯಲಿದೆ. ಸಂಜೆ 7:15 ರಿಂದ ನಾಟ್ಯಭೈರವಿ ನೃತ್ಯಶಾಲೆ ಬೆಂಗಳೂರು ಗುರು ಡಾ। ಶೃತಿ.ಯನ್ ಮೂರ್ತಿ ಹಾಗೂ ಶಿಷ್ಯವೃಂದದಿಂದ “ಶ್ರೀ ಸುಬ್ರಹ್ಮಣ್ಯ ವೈಭವ” ಭರತನಾಟ್ಯ ನೃತ್ಯರೂಪಕ ನಡೆಯಲಿದೆ. ಜ.15 ರಂದು ಸಂಜೆ 5:30 ರಿಂದ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿನ ವಿದ್ಯಾರ್ಥಿಗಳಿಂದ “ಕುಮಾರ ವೈಭವ” ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 7:00 ರಿಂದ ಕು| ಗಂಗಾ ಶಶಿಧರನ್ ಗುರುವಾಯೂರು ಇವರಿಂದ “ವಯೋಲಿನ್ ವಾದನ” ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9:30 ರಿಂದ ಸಸಿಹಿತ್ತು ಶ್ರೀ ಭಗವತಿ ಮೇಳದವರಿಂದ “ಮುಗುರುಮಲ್ಲಿಗೆ” ತುಳು ಯಕ್ಷಗಾನ ನಡೆಯಲಿದೆ.

ಜ.16 ರಂದು ಪೂರ್ವಾಹ್ನ 9:30 ರಿಂದ ಶ್ರೀ ಕಾರ್ತಿಕ ವೇದಿಕೆಯಲ್ಲಿ ದೇವಾಲಯ ಆಡಳಿತ ಧರ್ಮದರ್ಶಿಗಳ ಚಿಂತನಾ ಸಭೆ ಗುಡಿ-ಜನರ ಜೀವನಾಡಿ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು। ಭಾಗೀರಥಿ ಮುರುಳ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ  ಮಲ್ಲಿಕಾ ಪ್ರಶಾಂತ್ ಪಕ್ಕಳ ಹಾಗೂ ಧಾರ್ಮಿಕ ಉಪನ್ಯಾಸಕರಾಗಿ ದೇವಾಲಯ ಸಂವರ್ಧನಾ ಸಮಿತಿ ಬೆಂಗಳೂರು ಇದರ ಸಂಯೋಜಕರಾದ ಮನೋಹರ್ ಮಠದ್ ಭಾಗವಹಿಸಲಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಾಯಂಕಾಲ 6:00 ಗಂಟೆಯಿಂದ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ ನಡೆಯಲಿದ್ದು, ರಾತ್ರಿ 9:00 ರಿಂದ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ(ರಿ.) ಕುಂಭಾಶಿ ಇವರಿಂದ “ಜಾಂಬವತಿ ಕಲ್ಯಾಣ” ಪೌರಾಣಿಕ ಯಕ್ಷಗಾನ ನಡೆಯಲಿದೆ.

LEAVE A REPLY

Please enter your comment!
Please enter your name here