ರೆನಾಲ್ಟ್‌ ಕಾರುಗಳ ಮೆಗಾ ವಿನಿಮಯ ಮೇಳ ಆರಂಭ – ಜ.13 ಕೊನೆಯ ದಿನ

0

ಪುತ್ತೂರು: ಜ.12ರಂದು ಮಂಗಳೂರಿನ ಕೂಳೂರು ಬಳಿಯ ಎನಾಕ್ ರೆನಾಲ್ಟ್‌ ಹಾಗೂ ರೆನಾಲ್ಟ್ ಪುತ್ತೂರು ಅಯೋಜಿಸಿದ್ದ ಎರಡು ದಿನಗಳ ವಿನಿಮಯ, ಲೋನ್ ಮೇಳ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂತ ಫಿಲೋಮಿನ ಪಿಯು ಕಾಲೇಜಿನ ಕಂಪ್ಯೂಟರ್ ಸಯನ್ಸ್ ಉಪನ್ಯಾಸಕ ಗೋವಿಂದ ಪ್ರಕಾಶ್ ಅತಿಥಿಯಾಗಿ ಭಾಗವಹಿಸಿ, ದೀಪ ಪ್ರಜ್ವಲನೆ ಮೂಲಕ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ʼತಾನು ಕಳೆದ 8 ವರುಷಗಳಿಂದ ರೆನಾಲ್ಟ್‌ ಕಂಪನಿಯ ಗ್ರಾಹಕನಾಗಿದ್ದು, ಕ್ವಿಡ್ ಕಾರು ಹೊಂದಿದ್ದೆ. ಇದೀಗ ಅಪ್ಡೇಟ್ ಆಗಿ ರೆನಾಲ್ಟ್‌ ಕೈಗಾರ್ ಖರೀದಿ ಮಾಡಿದ್ದೇನೆ. ಇಲ್ಲಿ ತುಂಬಾ ಇಷ್ಟವಾಗಿರೋದು ವ್ಯಾಲ್ಯೂ ಫಾರ್ ಮನಿ, ರೆನಾಲ್ಟ್ ಕಾರುಗಳ ವೈಷಿಷ್ಟ್ಯಗಳಿಂದ ನಾನೊಬ್ಬ ಖುಷಿಯ ಗ್ರಾಹಕನೆಂದೂ ಬಣ್ಣಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಗುರುಪ್ರಸಾದ್ ಬಿಲ್ಡಿಂಗ್ ಇದರ ಮಾಲೀಕ ವಾಸುದೇವ ಆಚಾರ್ಯ, ವಿದ್ಯಾ ಹಾಗೂ ಜಯಲಕ್ಷ್ಮೀ ಉಪಸ್ಥಿತರಿದ್ದರು. ಪುತ್ತೂರು ರೆನಾಲ್ಟ್‌ ಇದರ ಮಾರ್ಕೆಟಿಂಗ್ ವಿಭಾಗದ ಮಮತಾ ಹಾಗೂ ಚರಿತಾ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.
ನೂತನ ವರುಷದ ಸಲುವಾಗಿ ರೆನಾಲ್ಟ್ ಕಾರುಗಳ ಖರೀದಿಗೆ ಕ್ಯಾಶ್ ಡಿಸ್ಕೌಂಟ್, ನೂರರಷ್ಟೂ ಸಾಲ ಸೌಲಭ್ಯ ವ್ಯವಸ್ಥೆ ಇಷ್ಟೇಯಲ್ಲದೇ, ಕಾರು ಪ್ರಿಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಂದಿಗೆ ವಿನಿಮಯ ಮಾಡೋ ಅವಕಾಶ. ಸುಲಭ ಸರಳ ಫೈನಾನ್ಸ್ ಹಾಗೂ ಅತೀ ಕಡಿಮೆ ಬಡ್ಡಿ ದರದೊಂದಿಗೆ ನೂತನ ಕಾರು ಖರೀದಿಗೂ ಅವಕಾಶ, ಪ್ರತಿ ಮಾದರಿ ಕಾರಿನಲ್ಲೂ ಕೂಡ ಉಳಿತಾಯವಕಾಶವನ್ನೂ ಸಂಸ್ಥೆ ಒದಗಿಸಿದ್ದು ಜ.13ರ ಸಂಜೆ ಮೇಳ ಕೊನೆಯಾಗಲಿದೆ. ಗ್ರಾಹಕರು ಈ ಮೇಳದ ಪ್ರಯೋಜನ ಪಡೆಯುವಂತೆ ಅವರು ವಿನಂತಿಸಿದರು.
ಮಾಹಿತಿಗೆ ಮೊಬೈಲ್ ಸಂಖ್ಯೆ 7022002555 ಕರೆ ಮಾಡಬಹುದು.

LEAVE A REPLY

Please enter your comment!
Please enter your name here