ನೆಲ್ಯಾಡಿ: ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಂದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ವಠಾರದಲ್ಲಿ ಜ.15ರಂದು ಸಂಜೆ 6ಕ್ಕೆ ಪಂಚಮಿ ಕಿರುಷಷ್ಠಿ ಉತ್ಸವದ ಪ್ರಯುಕ್ತ ‘ಮಹಿಷ ಮರ್ಧಿನಿ-ಶಾಂಭವಿ ವಿಜಯ’ ಎಂಬ ಕನ್ನಡ ಕಥಾ ಭಾಗ ಯಕ್ಷಗಾನ ಬಯಲಾಟ ನಡೆಯಲಿದೆ.
ಸಂಜೆ 4.30ಕ್ಕೆ ಗೆಜ್ಜೆಪೂಜೆ, 5ಕ್ಕೆ ಗೆಜ್ಜೆ ವಿತರಣೆ, 5.30ಕ್ಕೆ ಚೌಕಿ ಪಡೆದು ೬ ಗಂಟೆಯಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಡಿ.ಕೆ.ಆಚಾರ್ಯ ಹಳೆನೇರೆಂಕಿ, ಸಂಜೀವ ಕಜೆ ಪದವು, ಸುಶಾಂತ್ ಆಚಾರ್ಯ ಕೈಕಂಬ, ಸಂಧ್ಯಾಪೂಜಾರಿ ದರ್ಬೆ ಬಂಟ್ವಾಳ, ಚೆಂಡೆ ಮದ್ದಳೆಯಲ್ಲಿ ಶಂಕರ ಭಟ್ ಕಲ್ಲಡ್ಕ, ಮುರಳೀಧರ ಆಚಾರ್ಯ, ಟಿ.ಡಿ.ಭಟ್ ವಿಟ್ಲ, ಚಕ್ರತಾಳದಲ್ಲಿ ದಿವಾಕರ ಆಚಾರ್ಯ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಶಾಲಾ ವಿದ್ಯಾರ್ಥಿಗಳಾದ ಕೌಶಲ್, ದಿವಿನ್, ತನ್ವಿ, ಮೋಕ್ಷ, ಮಾನ್ಯ, ಯಶಸ್, ಹಂಸಿಕ, ಚರಣ್ಯ, ದೀಪಿಕಾ, ರಕ್ಷಿತ್, ತೃಪ್ತಿ, ಸಾನ್ವಿ, ಸಾತ್ವಿಕ್, ಸುಜನ್, ಪಾರ್ಥ, ಮಿಥುನ್, ಮನೀಷ್, ಧೃತಿ, ಚೈತ್ರಾ, ಮಾನ್ವಿ, ತನಿಷ್ಕ, ಕುಶ್ವಿತ್, ತೇಜಸ್ವಿ, ಪ್ರಣಮ್ಯ, ಚಿರಾಜ್, ಚೈತನ್ಯ, ಗ್ರೀಷ್ಮಾ, ಪ್ರಾಪ್ತಿ, ಪ್ರೀತಿ, ಶ್ರವಣ್, ತನುಷ್, ಪೃಥ್ವಿ, ಹಾಸ್ಯದಲ್ಲಿ ಕೀರ್ತಿರಾಜ್, ಸ್ತ್ರೀಪಾತ್ರದಲ್ಲಿ ದೀಕ್ಷಾ, ನಿಧಿ, ಮೌಲ್ಯ ಪಾತ್ರ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಮೋಹನ್ ಎಸ್., ಮತ್ತು ದೀಕ್ಷಾ ಪಿ.ಕೆ.ಅವರು ನಾಟ್ಯ ತರಬೇತಿ ಮತ್ತು ನಿರ್ದೇಶನ ನೀಡಿದ್ದರು ಎಂದು ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ತಿಳಿಸಿದ್ದಾರೆ.