ಉಪ್ಪಿನಂಗಡಿ: ಕಾಲು ದಾರಿಯ ಗಿಡ-ಗಂಟಿ ತೆರವು

0

ಉಪ್ಪಿನಂಗಡಿ: ಬಿಳಿಯೂರು ಸರಕಾರಿ ಶಾಲೆಗೆ ತೆರಳುತ್ತಿದ್ದಾಗ ಖಾಸಗಿ ವ್ಯಕ್ತಿಯೋರ್ವರು ಕಾಲುದಾರಿಯಲ್ಲಿರುವ ಕಸವನ್ನು ಹೆಕ್ಕಿಸಿದ ಪ್ರಕರಣ ನಡೆದ ಬಳಿಕ ಇದೀಗ ಪೋಷಕರು ಹಾಗೂ ಆ ಭಾಗದ ಗ್ರಾಮಸ್ಥರು ಶ್ರಮದಾನದ ಮೂಲಕ ಕಾಲು ದಾರಿಯಲ್ಲಿನ ಕಸವನ್ನು ಹೆಕ್ಕಿದ್ದಲ್ಲದೆ, ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ.


ಈ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯೋರ್ವನಿಂದ ಆ ಕಾಲು ದಾರಿಯಲ್ಲಿದ್ದ ಕಸವನ್ನು ಖಾಸಗಿ ವ್ಯಕ್ತಿಯೋರ್ವರು ಹೆಕ್ಕಿಸಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮಾಜಿ ಶಾಸಕ ಸಂಜೀವ ಮಠಂದೂರು ಅವರೂ ಅಲ್ಲಿಗೆ ಭೇಟಿ ನೀಡಿ ಮಕ್ಕಳ ಪೋಷಕರಲ್ಲಿ ಮಾತನಾಡಿದ್ದರು. ಇಲ್ಲಿ ಕಾಲುದಾರಿಯಿರುವ ಜಾಗ ತನ್ನ ಸ್ವಂತ ಜಾಗವೆಂದು ಖಾಸಗಿ ವ್ಯಕ್ತಿ ವಾದವಾದರೆ, ಇದು ಮೊದಲಿನಿಂದ ಇದ್ದ ಕಾಲು ದಾರಿ ಎನ್ನುವುದು ಇದನ್ನು ಬಳಕೆ ಮಾಡುವವರ ವಾದ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೀಗ ಮಕ್ಕಳ ಪೋಷಕರು ಹಾಗೂ ಆ ಭಾಗದ ಗ್ರಾಮಸ್ಥರು ಸೇರಿಕೊಂಡು ಶ್ರಮದಾನದ ಮೂಲಕ ಕಾಲು ದಾರಿಯ ಗಿಡಗಂಟಿಗಳನ್ನು ತೆರವುಗೊಳಿಸಿದ್ದು, ಅಲ್ಲಿದ್ದ ಕಸವನ್ನು ತೆಗೆದಿದ್ದಾರೆ.

LEAVE A REPLY

Please enter your comment!
Please enter your name here