ಶ್ರೀರಾಮ ಮಂದಿರಕ್ಕೆ ಶುಭಕೋರಿ ಪುತ್ತಿಲ ಬ್ರಿಗೇಡ್‌ನಿಂದ 3ಡಿ ಪ್ರಿಂಟ್ ಕಟೌಟ್

0

ಪುತ್ತೂರು: ಆಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀ ರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಶುಭಕೋರಿ “ಪುತ್ತಿಲ ಬ್ರಿಗೇಡ್ ಪುತ್ತೂರು” ಇದರ ವತಿಯಿಂದ ಪುತ್ತೂರು ಪೇಟೆಯಲ್ಲಿ ವಿದ್ಯು‌ತ್ ಅಲಂಕಾರದಿಂದ ಕಣ್ಮನ ಸೆಳೆಯುವ ಬೃಹತ್ 3ಡಿ ಪ್ರಿಂಟ್ ಕಟೌಟ್ ಅಳವಡಿಸಲಾಗಿದೆ.


ಸುಮಾರು 35 ಫೀಟ್ ಅಗಲ ಮತ್ತು 15 ಅಡಿ ಎತ್ತರದ ಈ ಕಟೌಟ್‌ನಲ್ಲಿ ಮೇಲಿನ ಭಾಗದಲ್ಲಿ ಪುತ್ತಿಲ ಬ್ರಿಗೇಡ್ ಎಂದು ಬ್ಯಾಕ್‌ಲೈಟ್ ಪ್ರಿಂಟ್‌ನಲ್ಲಿ ಬರೆಯಲಾಗಿದ್ದು, ಉಳಿದೆಲ್ಲಾ ಚಿತ್ರಗಳು 3ಡಿ ಪ್ರಿಂಟ್ ಮಾಡಲಾಗಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಇಂತಹ ಕಟೌಟ್ ಪುತ್ತೂರಿನಲ್ಲಿ ರಾರಾಜಿಸುತ್ತಿದೆ. ರಾತ್ರಿ ಸಮಯ ಸಂಪೂರ್ಣ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ. ಕಟೌಟ್ ಅಳವಡಿಸುವ ಸಂದರ್ಭ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಆಗಮಿಸಿ ಕಾರ್ಯಕರ್ತರೊಡನೆ ಪೊಟೋ ಕ್ಲಿಕ್ಕಿಸಿಕೊಂಡರು.

LEAVE A REPLY

Please enter your comment!
Please enter your name here