ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ಜ.14 ರಂದು ಶ್ರೀ ದೇವರ ಬಲಿ ಹೊರಟು,ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂತ್ರಾ ಕ್ಷತೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್,ಚದುಕೂಡ್ಲು , ಪವಿತ್ರಪಾಣಿ ಕೇಶವ ಭಟ್ ಕೂವೆತೋಟ, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆಗುತ್ತು,ಪೇರಾಲು ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪದಡ್ಕ ,ಪ್ರಗತಿಪರ ಕೃಷಿಕ ಜಯಂತ ರೈ ಕುದ್ದಾಡಿ, ಗ್ರಾ.ಪಂ ಸದಸ್ಯ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ,ಪದ್ಮನಾಭ ರೈ ಅರೆಪ್ಪಾಡಿ ,ಗಣೇಶ್ ರೈ ಮುಳಿಪಡ್ಪು ಸ್ವಾಗತ, ಸಮಿತಿ ಸಂಚಾಲಕ, ಚಂದ್ರಶೇಖರ ಭಂಡಾರಿ ಕಂಬ್ಲ ನಲಿಕೆಮಜಲು,ಬಡಗನ್ನೂರು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ, ಸೀತಾರಾಮ ಗೌಡ ಉಳಯ, ಉತ್ಸವ ಸಮಿತಿ ಕಾರ್ಯದರ್ಶಿಗಳಾದ ರಘುರಾಮ ಪಾಟಾಳಿ ಶರವು, ರಾಜೇಶ್ ರೈ ಮೇಗಿನಮನೆ ಗಂಗಾಧರ ರೈ ಮೇಗಿನಮನೆ, , ಕೋಶಾಧಿಕಾರಿ ಸುರೇಶ್ ರೈ ಪಲ್ಲತ್ತಾರು ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ,ನಿಡ್ಪಳ್ಳಿ ಶಾಂತದುರ್ಗಾ ದೈವಸ್ಥಾನದ ನಿಕಟಪೂರ್ವ ಅಧ್ಯಕ್ಷ ನಾಗೇಶ್ ಗೌಡ ಪುಳಿತ್ತಡಿ, ಸಂಚಾಲಕ , ಶಂಕರಿ ನಾರಾಯಣ ಪಟ್ಟೆ , ಸುಬ್ಬಯ್ಯ ರೈ ಹಲಸಿನಡಿ , ಉತ್ತಮ ಪಡ್ಪು, ರವೀಶ ಪಡುಮಲೆ , ಲಿಂಗಪ್ಪಗೌಡ ಮೋಡಿಕೆ , ರಮೇಶ್ ರೈ ಕೊಯಿಲ, ರಾಧಾಕೃಷ್ಣ ಪಾಟಾಳಿ ಖಡಕಾಯೂರು ನಾರಾಯಣ ಭಟ್ ಬೀರ್ನೋಡಿ, ವೇಣುಗೋಪಾಲ ಭಟ್ ಪಟ್ಟೆ, ಶಿವಪ್ರಸಾದ್ ಪಟ್ಟೆ, ಬಾಲಕೃಷ್ಣ ರೈ ಕುದ್ದಾಡಿ, ಕೃಷ್ಣ ರೈ ಕುದ್ದಾಡಿ, ಸುಧಾಕರ ಶೆಟ್ಟಿ ಮಂಗಳಾದೇವಿ,  ಚಂದ್ರಶೇಖರ ಆಳ್ವ ಪಡುಮಲೆ, ಸುಬ್ಬಣ್ಣ ರೈ ಮೇಗಿನಮನೆ, ರಾಮಣ್ಣ ಗೌಡ ಬಸವಹಿತ್ಲಿಲು, ,ಪ್ರಭಾಕರ ಗೌಡ ಕನ್ನಯ ಹಾಗೂ ಊರಿನ ಭಕ್ತಾಧಿಗಳು ಭಾಗವಹಿಸಿದ್ದರು.. 

ಜ.13ರಂದು
ರಾತ್ರಿ  ಶ್ರೀ ದೇವರಿಗೆ ರಂಗ ಪೂಜೆ ನಡೆಯಿತು.ಬಳಿಕ ಭಕ್ತವೃಂದ ಮತ್ತು ಕರಸೇವಕರ ಪ್ರಾಯೋಜಕತ್ವದಲ್ಲಿ ನುರಿತ ಕಲಾವಿದರ ಕೂಡುವಿಕೆಯಿಂದ “ಮಕರಾಕ್ಷ ಪುರುಷಾಮೃಗ- ಮೈಂದದಿವಿದ,”  ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಅನ್ನದಾನ  
ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಜ.12 ರಿಂದ ಜ.14 ತನಕ ಸುಮಾರು 10,ಸಾವಿರ ಮಂದಿ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು.

LEAVE A REPLY

Please enter your comment!
Please enter your name here