ವಿಟ್ಲ ರಸ್ತೆಯ ಕಾಮಗಾರಿ ಕಳಪೆ – ಚಪ್ ಡಿ(ತೇಪೆ) ಕೆಲಸಕ್ಕೆ ಬ್ರೇಕ್ ಹಾಕಿದ‌ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ

0

ಪುತ್ತೂರು: ರೋಡ್ ರೋಲರ್ ಬಳಸದೆ ರಸ್ತೆಗೆ ಜಲ್ಲಿ ಹಾಕಿ ಚಪ್ ಡಿ (ತೇಪೆ) ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಅಶೋಕ್‌ ಕುಮಾರ್ ರೈ ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ವಿಟ್ಲ ಬೊಬ್ಬೆಕೇರಿಯಲ್ಲಿ ನಡೆದಿದೆ.

ಮಂಗಳೂರಿನಿಂದ‌ ವಿಟ್ಲಕ್ಕೆ ತೆರಳುತ್ತಿದ್ದ ವೇಳೆ ಕಾರ್ಮಿಕರು ಹಾರೆಯ ಮೂಲಕ ರಸ್ತೆ ಹೊಂಡಗಳಿಗೆ ಜಲ್ಲಿ‌ ಮಿಶ್ರಣವನ್ನು ಕೈಯಿಂದ ಗಟ್ಟಿ ಮಾಡುತ್ತಿದ್ದರು. ಇದನ್ನು ನೋಡಿದ ಶಾಸಕರು ಕಾರು ನಿಲ್ಲಿಸಿ ಕಾಮಗಾರಿ ಮಾಹಿತಿ ಪಡೆದಿದ್ದಾರೆ. ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರೀತಮ್ ಅವರಿಗೆ ಕರೆ ಮಾಡಿದ ಶಾಸಕರು ಕಳಪೆ ಕಾಮಗಾರಿ ಅಥವಾ ಚಪ್ ಡಿ ಕೆಲಸ‌ಮಾಡುವುದು ಬೇಡ, ಗುಣಮಟ್ಟದ ಜಲ್ಲಿ ಡಾಮಾರು ಹಾಕಿ, ರೋಡ್ ರೋಲರ್ ಬಳಸಿ ಕಾಮಗಾರಿ ನಡೆಸುವಂತೆ ಶಾಸಕರು ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆಯ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://puttur.suddinews.com/wp-content/uploads/2024/01/WhatsApp-Video-2024-01-15-at-4.46.41-PM.mp4

LEAVE A REPLY

Please enter your comment!
Please enter your name here