ಪುತ್ತೂರು: ಬೊಳುವಾರು ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ವಿವೇಕಾನಂದರ ಜನ್ಮದಿನ ಪ್ರಯುಕ್ತ ಯುವಜನ ದಿನಾಚರಣೆಯನ್ನು ಆಚರಿಸಲಾಯಿತು. ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಲೀಡರ್ ಆಫ್ ಟ್ರೈನರ್ ಸುನಿತಾ ಮೇಡಂ ಮತ್ತು ಅಸಿಸ್ಟೆಂಟ್ ಲೀಡರ್ ಆಫ್ ಟ್ರೈನರ್ ಪ್ರಫುಲ್ಲ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಮಕೃಷ್ಣ ಪ್ರೌಢಶಾಲೆಯ ಗೈಡ್ ವಿದ್ಯಾರ್ಥಿ ನಿಶಾ ವಿವೇಕಾನಂದರ ಜೀವನದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಅಂಬಿಕಾ ವಿದ್ಯಾಲಯದ ಮಂದಿರ ಕಂಠದಿಂದ ಸುಮಧುರ ದೇಶಭಕ್ತಿ ಗೀತೆ ಮೂಡಿ ಬಂತು. ಲೀಡರ್ ಆಫ್ ಟ್ರೈನರ್ ಗೈಡ್ ಸುನಿತಾ ವಿವೇಕಾನಂದರ ಆದರ್ಶ ಗುಣಗಳನ್ನು ಸ್ಕೌಟ್ ಗೈಡ್ ಮಕ್ಕಳು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದಾಗಿ ತಿಳಿಸಿದರು. ಬಳಿಕ ತೃತೀಯ ಸೋಪಾನ ಪರೀಕ್ಷಾ ತಯಾರಿಯಾಗಿ ಪೂರ್ವ ಸಿದ್ಧತಾ ಪರೀಕ್ಷಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಬೇರೆ ಬೇರೆ ಶಾಲೆಯಿಂದ ಬಂದ 104 ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಹಾಗೂ ಆರು ಜನ ಶಿಕ್ಷಕರು ಭಾಗವಹಿಸಿದ್ದರು. ಅಸಿಸ್ಟೆಂಟ್ ಲೀಡರ್ ಆಫ್ ಟ್ರೈನರ್ ಪ್ರಫುಲ್ಲ ಕಂಪಾಸ್ ಮತ್ತು ಮ್ಯಾಪಿಂಗ್ ಬಗ್ಗೆ ಮಕ್ಕಳಿಗೆ ತಿಳಿಸಿದರು. ಪ್ರಥಮಚಿಕಿತ್ಸೆ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳ ಬಗ್ಗೆ ಸುನಿತಾ ಮಾಹಿತಿ ನೀಡಿದರು. ಸಮವಸ್ತ್ರ, ಪ್ರಾರ್ಥನೆ, ಲಾ ಪ್ರಾಮಿಸ್ ಬಗ್ಗೆ ಹಿಮಾಲಯ ವುಡ್ ಬ್ಯಾಚ್ ಅಸಿಸ್ಟೆಂಟ್ ಲೀಡರ್ ಆಫ್ ಟ್ರೈನರ್ ಮೇಬಲ್ ತಿಳಿಸಿಕೊಟ್ಟರು. ಸುದಾನ ಶಾಲೆಯ ಶಿಕ್ಷಕಿ ಗೀತಾ, ಚೇತನ ಹಾಗೂ ಅಂಬಿಕಾ ವಿದ್ಯಾಲಯದ ಶಿಕ್ಷಕಿ ಚಂದ್ರಕಲಾ ಸಹಕರಿಸಿದರು.