ಕೆಯ್ಯೂರು: ಅಯ್ಯಪ್ಪ ಭಕ್ತ ವೃಂದ, ಅಯ್ಯಪ್ಪ ಭಜನಾ ಮಂದಿರ ಮಾಡಾವಿನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ 11ನೇ ವರ್ಷದ ಶ್ರೀ ಕಟೀಲು ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಬಯಲಾಟವು ಜ.14ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಸಂಜೆ 5 ಗಂಟೆಗೆ ಶ್ರೀ ಭಕ್ತಿ ಸ್ವರ ಭಜನಾ ಮಂಡಳಿ ಕೆಯ್ಯೂರು ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆದು, ಮಕರ ಸಂಕ್ರಾಂತಿಯ ಪ್ರಯುಕ್ತ ಅಯ್ಯಪ್ಪ ಸ್ವಾಮಿಗೆ ದೀಪಾರಧಣೆ ನಡೆಯಿತು. ನಂತರ ಚೌಕಿ ಪೂಜೆ ನಡೆದು, ಪ್ರಸಾದ ವಿತರಣೆ ನಡೆಯಿತು. ನಂತರ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅನ್ನಸಂತರ್ಪಣೆಯ ಪ್ರಯೋಜತ್ವವನ್ನು ವೆಂಕಟೇಶ್ವರ ಅರೆಪ್ಪಳ ಮತ್ತು ಅಜಯ್ ಕೃಷ್ಣ ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಕ್ತವೃಂದ ಗೌರವದ್ಯಕ್ಷ ಡಾ.ರಾಮಚಂದ್ರಭಟ್, ಅದ್ಯಕ್ಷ ಕೃಷ್ಣ ಮೂರ್ತಿ ವಿ.ಎಸ್ ವಳಕ್ಕುಂಜ, ಮಾಜಿ ಅಧ್ಯಕ್ಷ ಸುಬ್ರಾಯ ಗೌಡ ಮಾಡಾವು ,ಅಯ್ಯಪ್ಪ ಭಜನಾ ಮಂದಿರ ಮಾಡಾವು ಅದ್ಯಕ್ಷ ರವೀಂದ್ರ ರೈ ಬೊಳಿಕಲ ಮಠ , ಡಾ.ರಾಮಚಂದ್ರ ಭಟ್ ಮಾಡಾವು, , ವಸಂತ ಪೂಜಾರಿ ನೆರೋಲ್ತಡ್ಕ, ವಸಂತ ರೈ ಮಡಾವು, ಪುರಂದರ ಬಲ್ಯಾಯ, ಜನಾರ್ದನ ನಾಯ್ಕ ಕಕ್ಕೇರ, ಗುರುಕಿರಣ್ ಬೊಳಿಯಾಲ, ಸಂದೀಪ್ ರೈ ಮಾಡಾವು, ಭಾಸ್ಕರ ರೈ ಮಠ, ರಾಕೇಶ್ ಗೌಡ ಬೊಳಿಕಲ, ರವೀಂದ್ರ ರೈ ನೆಲ್ಯಾಜೆ, ಮೋಹನ ದೇವಾಡಿಗ ಮಾಡಾವು, ಕೇಶವ ಪರ್ತ್ಯಡ್ಕ, ರಾಮಚಂದ್ರ ಆಚಾರ್ಯ ಮಾಡಾವು, ನಾಗೇಶ, ಸುರೇಶ್ ಪರ್ತ್ಯಡ್ಕ, ಚೇತನ್ ಆಚಾರ್ಯ, ಆಕರ್ಷ್ ರೈ, ರವಿಕಲಾ, ಶೀಲ, ಜಯಂತಿ ಪಾಲ್ತಾಡಿ, ಗೀತಾ ರೈ ಮಾಡಾವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ, ವನದುರ್ಗ,ಶಿವದುರ್ಗಾ, ದೇರ್ಲ ಬಿ ಒಕ್ಕೂಟ, ಸಮಿತಿ ಸದಸ್ಯರು, ಗ್ರಾಮಸ್ಥರು, ಉಪಸ್ಥಿತರಿದ್ದರು, ರಾತ್ರಿ ಸುಡುಮದ್ದು ಪ್ರದರ್ಶನ ನಡೆಯಿತು.