ಪೆರಾಬೆ: ಕಡಬ ತಾಲೂಕಿನ ಕುಂತೂರು ಗ್ರಾಮದ ನೇರೋಳ್ಪಲ್ಕೆ ಶ್ರೀ ರಾಜನ್ ದೈವಸ್ಥಾನದಲ್ಲಿ ಜ.13 ಹಾಗೂ 14ರಂದು ನೇಮೋತ್ಸವ ನಡೆಯಿತು.
ಜ.13ರಂದು ಬೆಳಿಗ್ಗೆ ದೈವಸ್ಥಾನದಲ್ಲಿ ಶುದ್ಧಿಕಲಶ ಹಾಗೂ ಗಣಪತಿ ಹೋಮ ನಡೆಯಿತು. ಸಂಜೆ ತೋರಣ ಮುಹೂರ್ತ, ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ, ಕಲ್ಕುಡ, ಕಲ್ಲುರ್ಟಿ, ಬ್ರಹ್ಮರು ದೈವಗಳ ನರ್ತನೋತ್ಸವ ನಡೆಯಿತು.
ಜ.14ರಂದು ಪ್ರಾತ:ಕಾಲ ಶಿರಾಡಿ ದೈವದ ನರ್ತನೋತ್ಸವ, ಮಧ್ಯಾಹ್ನ ಬಚ್ಚನಾಕ್ ದೈವದ ನರ್ತನೋತ್ಸವ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗುಳಿಗ ದೈವದ ನರ್ತನೋತ್ಸವ ನಡೆಯಿತು.
ಪ್ರಧಾನ ಅರ್ಚಕರಾದ ಕೆ.ಎನ್.ಕೃಷ್ಣಪ್ರಸಾದ್ ಉಪಾಧ್ಯಾಯ ಅರ್ಬಿ, ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಗುತ್ತುಪಾಲು ವಿಠಲ ರೈ, ಅಧ್ಯಕ್ಷ ಶಿವಪ್ಪ ಗೌಡ ಶೇಡಿ, ಕಾರ್ಯದರ್ಶಿ ಮೋಹನ್ ಶೆಟ್ಟಿ ಕೇವಳಪಟ್ಟೆ, ಖಜಾಂಜಿ ನಾಗೇಶ್ ಗೌಡ ಅರ್ಬಿ, ಸದಸ್ಯರಾದ ನಾಗೇಶ್ ಗೌಡ ಅಲಂಗಪ್ಪೆ, ಅಣ್ಣಿ ನಾಯ್ಕ ಜಯಂಪಾಡಿ, ಸಂತೋಷ್ ಗುರಿಯಡ್ಕ, ಈಶ್ವರ ಗೌಡ ಕುಂತೂರು, ವಿಶ್ವನಾಥ ಗೌಡ ಬಲತ್ತನೆ ಹಾಗೂ ಊರಿನ, ಪರವೂರಿನ ನೂರಾರು ಭಕ್ತರು ಆಗಮಿಸಿ ದೈವಗಳ ಗಂಧಪ್ರಸಾದ ಸ್ವೀಕರಿಸಿದರು.