ತಾಲೂಕು ಕಚೇರಿಯಲ್ಲಿ ಕಡತಗಳನ್ನು ತಪ್ಪಿಸಿ ಸತಾಯಿಸಲಾಗುತ್ತಿದೆ- ದೂರು

0

ಪುತ್ತೂರು: ತಾಲೂಕು ಕಚೇರಿ ರೆಕಾರ್ಡ್‌ರೂಮ್‌ನಲ್ಲಿ ಸಾರ್ವಜನಿಕರು ದಾಖಲೆ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದಾಗ ಕೆಲವು ಕಡತಗಳನ್ನು ಉದ್ದೇಶ ಪೂರ್ವಕವಾಗಿ ನೀಡದೆ ಜನರನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಶಾಸಕರಿಗೆ, ಸಹಾಯಕ ಆಯುಕ್ತರಿಗೆ ದೂರು ನೀಡಲಾಗಿದೆ.

ಜನ ಜಮೀನಿನ ಪ್ಲಾಟಿಂಗ್ ಮತ್ತು ಬೇರೆ, ಬೇರೆ ಉದ್ದೇಶಗಳಿಗಾಗಿ ಕಡತಗಳ ಯಥಾಪ್ರತಿಗಾಗಿ ತಾಲೂಕು ಕಛೇರಿ ರೆಕಾರ್ಡ್‌ರೂಮ್‌ನಲ್ಲಿ ಅರ್ಜಿ ಸಲ್ಲಿಸಿದರೆ ಕೆಲವು ಕಡತಗಳು ಕಾಣೆಯಾಗಿರುತ್ತದೆ. ಕಡತವನ್ನು ರಕ್ಷಿಸುವ ಜವಾಬ್ದಾರಿ ತಾಲೂಕು ಕಛೇರಿಗೆ ಸಂಬಂಧ ಪಟ್ಟವರದ್ದಾಗಿರುತ್ತದೆ. ಕಡತಗಳು ಬೇರೆ ಯಾವುದಾದರೂ ಕಛೇರಿಗೆ ರವಾನೆಯಾಗಿದ್ದಲ್ಲಿ ಇದನ್ನು ದಾಖಲೆ ಪುಸ್ತಕಗಳಲ್ಲಿ ದಾಖಲಿಸಬೇಕಾಗುತ್ತದೆ. ಇಲ್ಲಿನ ಮುಖ್ಯಸ್ಥರ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ಇಲ್ಲಿಗೆ ಬರುವ ಮಧ್ಯವರ್ತಿಗಳಿಗೆ ಕಡತಗಳು ಕೂಡಲೇ ಸಿಗುತ್ತದೆ. ಜನ ಸಾಮಾನ್ಯರನ್ನು ಅಲೆದಾಡಿಸಲಾಗುತ್ತಿದೆ. ಯಥಾ ಪ್ರತಿಗಳಿಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ರಶೀದಿಗಳನ್ನು ನೀಡುತ್ತಿಲ್ಲ ತಿಂಗಳುಗಟ್ಟಲೆ ಕಾಯಿಸುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here