ಜ.20,21: ದಿ|ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಹೊನಲು ಬೆಳಕಿನ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ ‘ಸಿಝ್ಲರ್ ಟ್ರೋಫಿ’-2024

0

ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇದರ ಜಂಟಿ ಆಶ್ರಯದಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ದಿ|ಶ್ರೀನಾಥ್ ಆಚಾರ್ಯ ಸ್ಮರಣಾರ್ಥ ಅಹರ್ನಿಶಿ ರಾಷ್ಟ್ರಮಟ್ಟದ ಆಹ್ವಾನಿತ ಎಂಟು ತಂಡಗಳ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್ ಕ್ಯಾಂಪಸ್‌ನಲ್ಲಿನ ಕ್ರೀಡಾಂಗಣದಲ್ಲಿ ಜ.20 ಹಾಗೂ 21ರಂದು ಎರಡು ದಿನಗಳ ‘ಸಿಝ್ಲರ್ ಟ್ರೋಫಿ’ ಕ್ರಿಕೆಟ್ ಹವಾ ನಡೆಯಲಿದೆ ಎಂದು ಸಾಮೆತ್ತಡ್ಕ ಯುವಕ ಮಂಡಲದ ಕೋಶಾಧಿಕಾರಿ ಕವನ್ ನಾೖಕ್‌ ದರ್ಬೆ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


1976ರಿಂದ ಸಾಮೆತ್ತಡ್ಕ ಯುವಕ ಮಂಡಲ ಆರಂಭಗೊಂಡ ಬಳಿಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು, ಇದೀಗ ಪ್ರತಿ ವರ್ಷ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಅದ್ದೂರಿಯಿಂದ ನಡೆಸಿಕೊಂಡು ಬಂದಿದ್ದೇವೆ. ಅದರಲ್ಲೂ ಅಹರ್ನಿಶಿ(ಹೊನಲು-ಬೆಳಕು) ಪಂದ್ಯಾಟವನ್ನು 1999ರಿಂದ ಆರಂಭಿಸಿ ಅದನ್ನು ಮೂರು ವರ್ಷಕ್ಕೊಮ್ಮೆ ಮಾಡಿಕೊಂಡು ಬರುತ್ತಿದ್ದು ಇದೀಗ ಆರನೇ ಬಾರಿಗೆ ಈ ಪಂದ್ಯಾಟ ನಡೆಯಲಿದೆ. ಪಂದ್ಯಾಟವನ್ನು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ವಹಿಸಲಿದ್ದು ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಅಲ್ಲದೆ ಈ ಬಾರಿ ಮುಂಬಯಿ, ಮಧ್ಯಪ್ರದೇಶ, ಚೆನ್ನೈ, ಕುಂದಾಪುರ, ಉಡುಪಿ, ಬೆಂಗಳೂರು, ಪುತ್ತೂರು ಹೀಗೆ ವಿವಿಧೆಡೆಯ ಬಲಿಷ್ಟ ಆಟಗಾರರು ಎಂಟು ಬಲಿಷ್ಟ ತಂಡಗಳೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಅವರು ಹೇಳಿದರು.


ಉದ್ಘಾಟನೆ:
ಪಂದ್ಯಾಕೂಟದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ತಹಶೀಲ್ದಾರ್ ಜಿ.ಶಿವಶಂಕರ್, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಆಂಟನಿ ಪ್ರಕಾಶ್ ಮೊಂತೇರೊ, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತ, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಕೆ. ಸವಣೂರು, ಶ್ರೀಮತಿ ರಶ್ಮಿ ಶ್ರೀನಾಥ್ ಆಚಾರ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯರಾದ ಬಾಲಚಂದ್ರ ಕೆ, ಮನೋಹರ್ ಕಲ್ಲಾರೆ, ಯೂಸುಫ್ ಡ್ರೀಮ್ಸ್, ರಿಯಾಝ್ ಪರ್ಲಡ್ಕ, ರಾಬಿನ್ ತಾವ್ರೋ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ, ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಪುತ್ತೂರು ಸಂಚಾರಿ ಠಾಣೆಯ ಪೊಲೀಸ್ ನಿರೀಕ್ಷಕ ಉದಯರವಿ, ಪುತ್ತೂರು ನಗರ ಠಾಣೆಯ ಉಪ ನಿರೀಕ್ಷಕ ಆಂಜನೇಯ ರೆಡ್ಡಿ, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಶ್ರೀಮತಿ ಭವಾನಿ, ಪುತ್ತೂರು ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ ಕರಂದ್ಲಾಜೆ, ಮೆಸ್ಕಾಂ ಎಇಇ ರಾಮಚಂದ್ರ, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಮೋದ್ ಕುಮಾರ್, ಗೌರವ ಉಪಸ್ಥಿತಿಯಾಗಿ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಪುತ್ತೂರು ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಮಾಯಿದೆ ದೇವುಸ್ ಚರ್ಚ್ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಪುತ್ತೂರು ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷ ಅಶೋಕ್ ಪ್ರಭು, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ, ಮಂಗಳೂರು ಪರಿವಾರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎ, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿ’ಸೋಜಾ, ಉದ್ಯಮಿ ಚಿಕ್ಕಪ್ಪ ನ್ಯಾಕ್ ಅರಿಯಡ್ಕ, ಮಂಗಳೂರು ಕೆ.ಎಂ.ಎಫ್‌ನ ಉಪಾಧ್ಯಕ್ಷ ಜಯರಾಮ್ ರೈ ಎಸ್.ಬಿ, ಹೊಟೇಲ್ ಅಶ್ವಿನಿ ಮಾಲಕ ಕರುಣಾಕರ್ ರೈ, ಸೋಜಾ ಮೆಟಲ್ಸ್‌ನ ಜೋನ್ ಕುಟಿನ್ಹಾ, ಸಂತ ಫಿಲೋಮಿನಾ ಕಾಲೇಜು ಕ್ಯಾಂಟೀನ್‌ನ ಆನಂದ ಶೆಟ್ಟಿ, ಬೆಂಗಳೂರು ಹೈಕೋರ್ಟ್ ವಕೀಲರಾದ ಪ್ರಶಾಂತ್ ರೈ ಪುಪ್ಪಾಡಿ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಪ್ರಮೋದ್ ನಾಯರ್ ಮಲೇಶಿಯಾ, ತಿರುಮಲ ಮೋಟಾರ‍್ಸ್‌ನ ಕೃಷ್ಣಕಿಶೋರ್ ಎನ್.ಟಿ, ಮುಗುರೋಡಿ ಕನ್‌ಸ್ಟ್ರಕ್ಷನ್‌ನ ದಾಮೋದರ್ ಕಾವೂರು, ಉಪ್ಪಿನಂಗಡಿ ಜುಪಿಟರ್ ಎಂಟರ್‌ಪ್ರೈಸಸ್‌ನ ಗಣೇಶ್ ಶೆಣೈ, ಉದ್ಯಮಿ ಭವಿನ್ ಸಾವ್‌ಜಾನಿ, ಅಕ್ಷಯ ಗ್ರೂಪ್‌ನ ಚೇರ್‌ಮ್ಯಾನ್ ಜಯಂತ ನಡುಬೈಲು, ಸುದೀಪ್ ಶೆಟ್ಟಿ ಮಾಣಿ, ಸುಧೀರ್ ಶೆಟ್ಟಿ ನೇಸರ-ಕಂಪ, ಉದ್ಯಮಿ ಪ್ರವೀಣ್ ಶೆಟ್ಟಿ ಆಳಕೆಮಜಲು ಬೆಂಗಳೂರು, ನ್ಯಾಯವಾದಿಗಳಾದ ಕೃಷ್ಣಪ್ರಸಾದ್ ರೈ, ರಾಕೇಶ್ ಮಸ್ಕರೇನ್ಹಸ್, ಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್, ಮಾನಕ ಜ್ಯುವೆಲ್ಲರ‍್ಸ್‌ನ ಸಿದ್ಧನಾಥ ಎಸ್.ಕೆ., ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಆರ್ಯಾಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್, ಇಲಿಯಾಸ್ ಮುಕ್ವೆ, ಪ್ರೇಮನಾಥ್ ಆಚಾರ್ಯ ಬೆಂಗಳೂರು, ಪುತ್ತೂರು ಯುವ ಕಾಂಗ್ರೆಸ್‌ನ ಪ್ರಸಾದ್ ಪಾಣಾಜೆ, ಬಿ.ಕೆ ಬಿಲ್ಡ್ ಮಾರ‍್ಟ್‌ನ ಪುತ್ತು ಹಾಜಿ ಬಾಯಾರು, ಜೆ.ಕೆ ಕನ್ಸ್‌ಟ್ರಕ್ಷನ್‌ನ ಜಯಕುಮಾರ್ ನಾಯರ್‌ರವರು ಉಪಸ್ಥಿತಲಿರುವರು.


ಸಭಾ ಕಾರ್ಯಕ್ರಮ:
ಜ.21 ರಂದು ರಾತ್ರಿ ಸಭಾ ಕಾರ್ಯಕ್ರಮ ಜರಗಲಿದ್ದು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಸಭಾಪತಿ ಯು.ಟಿ ಖಾದರ್, ದ.ಕ ಸಂಸದ ನಳಿನ್ ಕುಮಾರ್ ಕಟೀಲು, ಮಡಿಕೇರಿ ಶಾಸಕ ಮಂತರ್ ಗೌಡ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಆಲಿ ಹಾಗೂ ಮಿಥುನ್ ರೈ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಗೌರವ ಉಪಸ್ಥಿತಿಯಾಗಿ ಪುತ್ತೂರು ಪೂಜಾ ಪ್ರಾಪರ್ಟಿಸ್‌ನ ನಿತ್ಯಾನಂದ ಶೆಟ್ಟಿ, ಉದ್ಯಮಿಗಳಾದ ಉಮೇಶ್ ನಾಡಾಜೆ ಮಂಗಳೂರು, ರಾಮ್‌ಪ್ರಸಾದ್ ಬೆಂಗಳೂರು, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ದೇವೇಂದ್ರ ಹೆಗ್ಡೆ ಬೆಂಗಳೂರು, ಶಶಿಧರ್ ಶೆಟ್ಟಿ ಮುಂಬಯಿ, ಸತೀಶ್ ರೈ ಮಿಶನ್‌ಮೂಲೆ, ಶಿವರಾಮ ಆಳ್ವ ಪುತ್ತೂರು, ಸಂತೋಷ್ ಕುಮಾರ್ ನಳೀಲು, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್, ಯು.ಆರ್ ಪ್ರಾಪರ್ಟಿಸ್‌ನ ಉಜ್ವಲ್ ಪ್ರಭು, ಪದ್ಮಶ್ರೀ ಗ್ರೂಪ್ಸ್‌ನ ಸೀತಾರಾಮ ರೈ, ತಹಶೀಲ್ದಾರ್ ಅಜಿತ್ ಶೆಟ್ಟಿ ಬೆಂಗಳೂರು, ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜನ ಸಮೃದ್ಧಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ಯಂ.ರಾಮು, ನ್ಯಾಯವಾದಿದೀನಬಂಧು ರೈ ಬೆಂಗಳೂರು, ದ.ಕ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಆರ್‌ಜಿಯುಎಚ್‌ಎಸ್ ಸಿಂಡಿಕೇಟ್ ಸದಸ್ಯ ಡಾ.ಯು.ಟಿ ಇಫ್ತಿಕಾರ್ ಆಲಿ, ಸೆನೆಟ್ ಸದಸ್ಯ ಡಾ|ಶರಣ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಬಂಟ್ವಾಳ ಮಂಡಲದ ಉಪಾಧ್ಯಕ್ಷ ಶ್ರೀಶಾಂತ್ ಶೆಟ್ಟಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಗೌರವ ಉಪಸ್ಥಿತಿಯಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಬಡಗನ್ನೂರು, ಎಂ.ಎಸ್.ಮೊಹಮ್ಮದ್, ಮಂಗಳೂರು ಮ.ನ.ಪಾ. ವಿರೋಧ ಪಕ್ಷದ ಅಧ್ಯಕ್ಷಪ್ರವೀಣ್‌ಚಂದ್ರ ಆಳ್ವ, ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ, ಎಸಿಎಫ್ ಕಾರ್ಯಪ್ಪ, ಎಸಿಎಫ್ ಪುತ್ತೂರು ಸುಬ್ಬಯ್ಯ ನಾಯ್ಕ, ಎಸಿಎಫ್ ಮಂಗಳೂರು ಶ್ರೀಧರ್, ಪುತ್ತೂರು ಆರ್‌ಎಫ್‌ಒ ಕಿರಣ್, ಸುಳ್ಯ ಆರ್‌ಎಫ್‌ಒ ಮಂಜುನಾಥ, ಬಂಟ್ವಾಳ ಆರ್‌ಎಫ್‌ಒ ಪ್ರಫುಲ್ ಶೆಟ್ಟಿ, ಪಂಜ ಆರ್‌ಎಫ್‌ಒ ಗಿರೀಶ್, ಸುಬ್ರಹ್ಮಣ್ಯ ಆರ್‌ಎಫ್‌ಒ ವಿಮಲ್ ಬಾಬು, ಡಾ.ಅಶ್ರಫ್ ಕಮ್ಮಾಡಿ, ಮಾಜಿ ಪುರಸಭಾ ಸದಸ್ಯ ಸತೀಶ್ ನ್ಯಾಕ್ ಪರ್ಲಡ್ಕ, ಮೈಸೂರು ಶುಭಂ ಕ್ಯಾಟರಿಂಗ್‌ನ ಸುಜಿತ್ ಶೆಟ್ಟಿ, ಉದ್ಯಮಿ ಸಹಜ್ ರೈ ಬಳಜ್ಜ, ಮಂಗಳೂರು ಇನ್ಫೋಸಿಸ್‌ನ ಡೆಲಿವರಿ ಮ್ಯಾನೇಜರ್ ರಂಗನಾಥ್ ಕಾರಂತ್, ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಮಣಿಕಂಠ ಗ್ಯಾಸ್ ಡಿಸ್ಟ್ರಿಬ್ಯೂಟರ‍್ಸ್‌ನ ಅರುಣ್ ಕುಮಾರ್ ರೈ ಆನಾಜೆ, ಪಡೀಲು ವಿಘ್ನೇಶ್ವರ ಸುಧೀರ್ ಶೆಟ್ಟಿ, ಯುಎಇ ರುಚಿ ಕೆಟರರ‍್ಸ್‌ನ ಆಡಳಿತ ನಿರ್ದೇಶಕ ಸುಜಿತ್ ಶೆಟ್ಟಿ ಸವಣೂರು, ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಸಂದೀಪ್ ಶೆಟ್ಟಿ ಅರಿಯಡ್ಕ, ವಿನೋದ್ ಶೆಟ್ಟಿ ಅರಿಯಡ್ಕ, ಕಿಶೋರ್ ಶೆಟ್ಟಿ ಅರಿಯಡ್ಕ, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಕಂಪ, ಕಾಮತ್ ಕ್ರಷರ್‌ನ ಆದಿತ್ಯ ಕಾಮತ್,ಫಾರೂಕ್ ಪೆರ್ನೆ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ತೌಸೀಫ್ ಯು.ಟಿ., ಶಬ್ಬೀರ್ ಕೆಂಪಿ, ಉಪ್ಪಿನಂಗಡಿ, ಆಸೀಫ್ ಉಪ್ಪಿನಂಗಡಿ, ಮೋನು ಪಿಲಿಗೂಡು, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಉದ್ಯಮಿಗಳಾದ ಮನ್ವಿಜ್ ಶೆಟ್ಟಿ ಬೆಂಗಳೂರು, ಅಶ್ವಿನ್ ರೈ ಪುತ್ತೂರು, ರಿತೇಶ್ ಶೆಟ್ಟಿ ಮಂಗಳೂರು, ಡ್ಯಾಶ್ ಮಾರ್ಕೆಟಿಂಗ್‌ನ ನಿಹಾಲ್ ಶೆಟ್ಟಿ, ಶ್ರೀಮತಿ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಸುಜಿತ್ ರೈ ಪಾಲ್ತಾಡು, ಶಮೂನ್ ಪರ್ಲಡ್ಕ, ಅಝಾರಾ ಟ್ರಾನ್ಸ್‌ಪೋರ‍್ಟ್‌ನ ಖಲಂದರ್, ಕೂರ್ನಡ್ಕ ಡ್ರೀಮ್ಸ್ ಹಸೈನಾರ್, ಸಂಪ್ಯ ಸೋಮನಾತ ಎಂಟರ್‌ಪ್ರೈಸಸ್‌ನ ರವಿ ಕೊಟ್ಟಾರಿ, ಬೆಂಗಳೂರು ಈಸ್ಟರ್ನ್ ಗ್ರೂಪ್‌ನ ಖಲಂದರ್, ಅರ್ಷದ್ ದರ್ಬೆ, ಜಿಲ್ಲಾ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷ ಗಿರೀಶ್ ಆಳ್ವ, ಉದ್ಯಮಿ ಗಿರೀಶ್ ಶೆಟ್ಟಿ, ಮಂಗಳೂರು ಪ್ರಗತಿ ಬಯೋಟೆಕ್‌ನ ಅಮೃತ್‌ಕಿರಣ್ ರೈ, ದರ್ಬೆ ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ, ಇಂಟಕ್ ಪುತ್ತೂರು ಅಧ್ಯಕ್ಷ ಜಯಪ್ರಕಾಶ್ ಬದಿನಾರುರವರು ಭಾಗವಹಿಸಲಿದ್ದಾರೆ.


ಬಹುಮಾನ ವಿತರಣೆ:
ಪಂದ್ಯಾಟದ ಬಳಿಕ ಬಹುಮಾನ ವಿತರಣೆ ಜರಗಲಿದ್ದು ಪುತ್ತೂರು ಸಿಝ್ಲರ್ ಗ್ರೂಪ್‌ನ ಪ್ರಸನ್ನ ಕುಮಾರ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ, ಸೂರಜ್ ನಾಯರ್ ಸಾಮೆತ್ತಡ್ಕ, ಹೊಟೇಲ್ ಸುಜಾತಾದ ಸುಶಾಮ್ ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ರತನ್ ನ್ಯಾಕ್ ಕರ್ನೂರು, ಮಂಗಳೂರು ಮುಗುರೋಡಿ ಕನ್‌ಸ್ಟ್ರಕ್ಷನ್‌ನ ಸನ್ಮತ್ ಮೇಲಾಂಟ, ಉದ್ಯಮಿ ಮಹೇಶ್ ಪಕ್ಕಳ, ಪುತ್ತೂರು ಪ್ರಾಪರ್ಟಿಸ್‌ನ ನಿತಿನ್ ಪಕ್ಕಳ, ಇಡ್ಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಿತ್ತೂರು, ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈ, ಸುನಿಲ್ ರೈ ಪಾಲ್ಗುಣಿ, ಮಾಣಿ ಸುರಭಿ ಗ್ರೂಪ್‌ನ ನವೀತ್ ಶೆಟ್ಟಿ, ನವೀನ್ ರೈ ಎಣ್ಣೂರುಗುತ್ತು, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿಸೋಜ, ಉದ್ಯಮಿ ಶಾಸ್ತ್ರ ಚಡಗ ಹೈದರಾಬಾದ್, ಸೂರಜ್ ಶೆಟ್ಟಿ ಸ್ವಾಗತ್ ಸಾಮೆತ್ತಡ್ಕ, ಶ್ರೀರಾಂ ಪಕ್ಕಳ ಕರ್ನೂರು, ಅವಿನಾಶ್ ರೈ ಕುಡ್ಚಿಲ, ಮೊಹಮ್ಮದ್ ಸೈಪ್ ದರ್ಬೆ, ಬ್ರಿಜೇಶ್ ಶೆಟ್ಟಿ ಅರಿಯಡ್ಕ, ಆಶ್ರಯ್ ರೈ ಮಾದೋಡಿ, ಮೈಸೂರು ಹೋಟೆಲ್ ನೀಲಾಂಜನ ಮಹೇಶ್ ಪ್ರಸಾದ್‌ನ ರವಿನಂದನ್ ಶೆಟ್ಟಿ, ಲಕ್ಷ್ಮಣ್ ಬೈಲಾಡಿ ಸಂಪ್ಯ, ಸಚಿನ್ ರೈ ಪಾಪೆಮಜಲು, ಸಾರ್ಥಕ್ ಶೆಟ್ಟಿ ಅರಿಯಡ್ಕ, ಚಂದ್ರಶೇಖರ್ ರೈ ಜಿಡೆಕಲ್, ಅಶ್ವಿನ್ ರೈ ಅರಿಯಡ್ಕ, ಮುನ್ನಾಲಾಯಿ ಇನ್ಫ್ರಾ ಪ್ರಾಜೆಕ್ಟ್‌ನ ಮನು ಯಂ ರೈ, ನ್ಯಾಯವಾದಿ ಜಯರಾಮ್ ರೈ, ಉದ್ಯಮಿ ಹಾಫಿಲ್ ಕೂರ್ನಡ್ಕ, ಇಂದಿವರ್ ಭಟ್ ಸಾಮೆತ್ತಡ್ಕ, ಪಂಚಮಿ ಸ್ಟೋರ್‌ನ ಉಮೇಶ್ ಮಹಾಬಲ, ಮೊಹಮ್ಮದ್ ತ್ವಾಹ, ದೀಪಕ್ ಮಲ್ಯ, ನವಜೀವನ್ ಫ್ಲವರ‍್ಸ್‌ನ ಜೋನ್ ಪೀಟರ್ ಡಿಸಿಲ್ವ ಸಾಮೆತ್ತಡ್ಕ, ನವನೀತ್ ಕೆಮ್ಮಿಂಜೆ, ರಾಕೇಶ್ ರೈ ಕುದ್ಯಾಡಿ, ಸಾರ್ಥಕ್ ಶೆಟ್ಟಿ ಮುಂಬಯಿ, ಬಶೀರ್ ಪರ್ಲಡ್ಕ, ಸಿರಾಜ್ ಸಾಮೆತ್ತಡ್ಕ, ಮುಸ್ತಾಫಾ ಪುಷ್ಪಕ್, ಕಿಶೋರ್ ಪೂಜಾರಿ, ರೇಶಲ್ ರೇಗೋ, ದಾವುದ್ ಬನ್ನೂರು, ಸಂದೀಪ್ ರೈ ಕೆಲ್ಲಾಡಿ, ಇಮ್ರಾಝ್ ಬೊಳ್ವಾರು, ಅಮರ್ ಅಕ್ಬರ್ ಅಂತೋನಿ ಟ್ರೋಫಿ ಆಯೋಜಕ ರಝಾಕ್ ಬಿ.ಎಚ್.ರವರು ಉಪಸ್ಥಿತಲಿರುವರು.
ಪತ್ರಿಕಾಗೋಷ್ಟಿಯಲ್ಲಿ ಸಿಝ್ಲರ್ ಟ್ರೋಫಿ ಅಧ್ಯಕ್ಷ ರೋಶನ್ ರೆಬೆಲ್ಲೋ, ಹಿರಿಯ ಸದಸ್ಯ ಮಹಮದ್ ತಾಹ, ಪ್ರಸಾದ್ ಪಿ, ಜೊತೆ ಕಾರ್ಯದರ್ಶಿ ಇಂದೀವರ್ ಭಟ್ ಉಪಸ್ಥಿತರಿದ್ದರು.

  • *ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ, ಬಲಿಷ್ಟ ಆಟಗಾರರ ದಂಡು ಫಿಲೋಮಿನಾದತ್ತ
  • *ಚಲನಚಿತ್ರ ನಟ, ನಟಿಯರು ಹಾಗೂ ಕ್ರಿಕೆಟ್ ತಾರೆಯರು ಪ್ರಮುಖ ಆಕರ್ಷಣೆ
  • *ಚಾಂಪಿಯನ್ ತಂಡಕ್ಕೆ ರೂ.2 ಲಕ್ಷ, ರನ್ನರ‍್ಸ್ ತಂಡಕ್ಕೆ ರೂ.1 ಲಕ್ಷ ಬಹುಮಾನ
  • *ರಾಜ್ಯದ ಬಿಲ್ಲಿ ಬೌಡೆನ್ ಅಂಪೈರ್ ಮದನ್ ಮಡಿಕೇರಿ ಆಕರ್ಷಣೆ
  • *ಪಂದ್ಯಶ್ರೇಷ್ಟ, ಬೆಸ್ಟ್ ಬ್ಯಾಟರ್/ಬೌಲರ್/ಸರಣಿಶ್ರೇಷ್ಟ ಪ್ರಶಸ್ತಿ
  • *ಸರಣಿಶ್ರೇಷ್ಟ ಆಟಗಾರನಿಗೆ ರೂ.1 ಲಕ್ಷ ಮೌಲ್ಯದ ಬೈಕ್ ಕೊಡುಗೆ
  • *ಅಹರ್ನಿಶಿ ಪಂದ್ಯಕ್ಕೆ ಕ್ರೀಡಾಂಗಣದ ಸುತ್ತ ಎಂಟು ಟವರ್‌ಗಳಲ್ಲಿ ಹೈ ವೋಲ್ಟೇಜ್ ಬೆಳಕಿನ ಬಲ್ಬ್‌ಗಳು
  • *ಇನ್ನೂ ಅನೇಕ ಆಕರ್ಷಕ ಬಹುಮಾನಗಳು

LEAVE A REPLY

Please enter your comment!
Please enter your name here