ಕರಾಟೆ ಸ್ಪರ್ಧೆ: ರಾಮಕುಂಜೇಶ್ವರ ಆ.ಮಾ.ಶಾಲೆಗೆ ಸಮಗ್ರ ತಂಡ ಪ್ರಶಸ್ತಿ

0

ರಾಮಕುಂಜ: ಯಾಮೊಟೋ ಶೊಟೋಕಾನ್ ಕರಾಟೆ ಎಸೋಸಿಯೇಶನ್ ಟ್ರಸ್ಟ್ ಮಂಗಳೂರು ಹಾಗೂ ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಆಯೋಜಿಸಿದ 2ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ತಂಡ ಪ್ರಶಸ್ತಿ ಲಭಿಸಿದೆ.


ವಿದ್ಯಾರ್ಥಿಗಳಾದ ಅನ್ವೇಶ್ (8ನೇ) ಕಟಾ-ದ್ವಿತೀಯ, ಕುಮಿಟೆ ಪ್ರಥಮ, ಯಶ್ ವಿ (8ನೇ) ಕಟಾ-ಪ್ರಥಮ, ಕುಮಿಟೆ-ತೃತೀಯ, ವಿಷ್ಣು ಸಿ(8ನೇ) ಕಟಾ-ತೃತೀಯ, ಕುಮಿಟೆ-ದ್ವಿತೀಯ, ಭರತ್ ಕುಮಾರ್ (9ನೇ) ಕಟಾ-ತೃತೀಯ, ಕುಮಿಟೆ ಪ್ರಥಮ, ಮನ್ವಿತ್ ಸಿ (9ನೇ) ಕಟಾ-ತೃತೀಯ, ಕುಮಿಟೆ-ತೃತೀಯ, ಪ್ರೀತಂ ಎಸ್ ಆರ್ (9ನೇ) ಕಟಾ-ಪ್ರಥಮ, ಕುಮಿಟೆ-ತೃತೀಯ, ಭವಿಷ್ ಎಂ ಎಸ್(9ನೇ) ಕಟಾ-ಪ್ರಥಮ, ಕುಮಿಟೆ-ದ್ವಿತೀಯ, ಆಕಾಂಕ್ಷ್ (9ನೇ) ಕಟಾ-ತೃತೀಯ, ಕುಮಿಟೆ ಪ್ರಥಮ, ಚಿರಾಗ್ ಪಿ ಗೌಡ (9ನೇ) ಕಟಾ-ತೃತೀಯ, ಕುಮಿಟೆ-ತೃತೀಯ, ನಿರಂಜನ್ (10ನೇ) ಕಟಾ-ದ್ವಿತೀಯ, ಕುಮಿಟೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಶಾಲೆಗೆ ಸಮಗ್ರ ತಂಡ ಪ್ರಶಸ್ತಿ ಲಭಿಸಿದೆ.


ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಚಂದ್ರಶೇಖರ ಕನಕಮಜಲು, ಧನುಷ್, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮಾ ಬಿ, ರಾಘವ್‌ರವರು ತರಬೇತಿ ನೀಡಿದ್ದಾರೆ. ಸಂಸ್ಥೆಯ ಆಡಳಿತಾಧಿಕಾರಿ ಆನಂದ್ ಎಸ್ ಟಿ, ವ್ಯವಸ್ಥಾಪಕ ರಮೇಶ್ ರೈ ಆರ್.ಬಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಪ್ರೋತ್ಸಾಹಿಸಿದ್ದರು.

LEAVE A REPLY

Please enter your comment!
Please enter your name here