ಪುತ್ತೂರು: ಬನ್ನೂರು ಕರ್ಮಲ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಜ.16ರಂದು ಪಾರ್ತಿಸುಬ್ಬ ವಿರಚಿತ ಪಂಚವಟಿ (ಮುಂದುವರಿದ ಭಾಗ)ಎಂಬ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಶ್ರೀಪತಿ ಭಟ್ ಉಪ್ಪಿನಂಗಡಿ, ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಕುಂಬ್ಳೆ ಶ್ರೀಧರ್ ರಾವ್ (ಸೀತೆ,), ಭಾಸ್ಕರ ಬಾರ್ಯ (ಸನ್ಯಾಸಿ ರಾವಣ), ಶುಭಾ ಜೆ.ಸಿ.ಅಡಿಗ (ಶ್ರೀ ರಾಮ), ಅಧೋಮುಖಿ (ಗುಡ್ಡಪ್ಪ ಬಲ್ಯ), ಮಾಂಬಾಡಿ ವೇಣುಗೋಪಾಲ್ ಭಟ್ (ರಾವಣ), ಅಚ್ಯುತ ಪಾಂಗಣ್ಣಾಯ (ಲಕ್ಷ್ಮಣ), ಬಡೆಕ್ಕಿಲ ಚಂದ್ರಶೇಖರ ಭಟ್ (ಜಟಾಯು) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ ವಂದಿಸಿದರು.