ಪುತ್ತೂರು: ಕಬಕದಿಂದ ವಿಟ್ಲ ತನಕ ರಸ್ತೆಯಲ್ಲಿ ಮಳೆಗಾಲದಲ್ಲಿ ಉಂಟಾದ ಗುಂಡಿಯನ್ನು ಮುಚ್ಚುವಂತೆ ಶಾಸಕ ಅಶೋಕ್ ರೈ ಅವರು ಭಾನುವಾರ ಸೂಚನೆ ನೀಡಿದ್ದು, ಸೋಮವಾರ ಕಾಮಗಾರಿ ಆರಂಭಗೊಂಡಿದೆ.
ಕಬಕದಿಂದ ವಿಟ್ಲ ತನಕ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿದೆ. ಮಳೆ ಇದ್ದ ಕಾರಣ ರಸ್ತೆಯ ಹೊಂಡ ಮುಚ್ಚುವ ಕೆಲಸ ನಡೆದಿರಲಿಲ್ಲ.ಮಳೆ ಕಡಿಮೆಯಾದ ತಕ್ಷಣ ಹೊಂಡ ಮುಚ್ಚುವ ಕಾಮಗಾರಿಯನ್ನು ನಡೆಸುವಂತೆ ಶಾಸಕರು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರು.

ಮಳೆ ಕಡಿಮೆಯಾಗಿದ್ದರೂ ಹೊಂಡ ಮುಚ್ಚುವ ಕಾಮಗಾರಿ ನಡೆದಿರಲಿಲ್ಲ. ಇದನ್ನು ಗಮನಿಸಿದ ಶಾಸಕರು ಭಾನುವಾರ ಇಂಜಿನಿಯರ್ ಗಳಿಗೆ ಕರೆ ಮಾಡಿ ನಾಳೆಯೇ ಹೊಂಡ ಮುಚ್ಚುವಂತೆ ತಾಕೀತು ಮಾಡಿದ್ದರು.ಶಾಸಕರ ಸೂಚನೆಯ ಬಳಿಕ ಸೋಮವಾರ ಕಾಮಗಾರಿ ಪ್ರಾರಂಭಗೊಂಡಿದೆ.