ಬೆದ್ರಾಳ ಪ್ಲೈವುಡ್ ಫ್ಯಾಕ್ಟರಿ ಕಾರ್ಮಿಕ ಹೃದಯಾಘಾತದಿಂದ ನಿಧನ

0

ಪುತ್ತೂರು: ಬೆದ್ರಾಳ ಪ್ಲೈವುಡ್ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರೊಬ್ಬರು ಜ.16 ರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.


ಅಸ್ಸಾಂ ಮೂಲದ ಮುಕ್ತಾರ್ ಹುಸೈನ್ (32ವ) ಮೃತಪಟ್ಟವರು. ಅವರು ಬೆದ್ರಾಳ ಕೃಷ್ಣಾನಂದ ಮಾಲಕತ್ವದ ಪ್ಲೈವುಡ್ ಪ್ಯಾಕ್ಟರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಬೆದ್ರಾಳದಲ್ಲಿ ತನ್ನ ಮೂವರು ಸಂಬಂಧಿಕರೊಂದಿಗೆ ಕೊಠಡಿಯೊಂದರಲ್ಲಿ ತಂಗಿದ್ದರು. ರಾತ್ರಿ ಎದೆ ನೋವಿನಿಂದ ಬಳಲಿದ ಮುಕ್ತಾರ್ ಹುಸೈನ್ ಅವರನ್ನು ಸಂಬಂಧಿಕರು ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತರ ಸಂಬಂಧಿಕ ನಝೀರ್ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಅಸ್ಸಾಂ ನ ಮೃತ ಮುಕ್ತಾರ್ ಹುಸೈನ್ ಅವರ ಮನೆಗೆ ಕೊಂಡೊಯ್ಯಲಾಗಿದೆ.

LEAVE A REPLY

Please enter your comment!
Please enter your name here