ಪುತ್ತೂರು: ಉಪ್ಪಿನಂಗಡಿ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಜ.28ರಂದು ಪೂರ್ವಾಹ್ನದಿಂದ ಸಂಜೆಯವರೆಗೆ ಸಂಘದ ಆವರಣದಲ್ಲಿ ಜರಗಲಿರುವುದು.
ಸಂಘದ ಉಪವಿಧಿ ಹಾಗೂ ಸಹಕಾರ ಕಾಯ್ದೆಗೆ ಅನುಗುಣವಾಗಿ ಚುನಾಯಿಸಲ್ಪಡ ಬೇಕಾದ ಸ್ಥಾನಗಳು 13 ಆಗಿದ್ದು, ಇದರಲ್ಲಿ ಸಾಮಾನ್ಯ ಸ್ಥಾನಗಳು 7, ಪ.ಜಾತಿ ಮೀಸಲು ಸ್ಥಾನ 1, ಪ.ಪಂಗಡ ಮೀಸಲು ಸ್ಥಾನ 1, ಹಿಂದುಳಿದ ಪ್ರವರ್ಗ ಎ' ಮೀಸಲು ಸ್ಥಾನ 1, ಹಿಂದುಳಿದ ಪ್ರವರ್ಗ
ಬಿ’ ಮೀಸಲು ಸ್ಥಾನ 1, ಮಹಿಳಾ ಸ್ಥಾನ 2 ಒಳಗೊಂಡಿರುತ್ತದೆ. ಆಕಾಂಕ್ಷೆವುಳ್ಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜ.16ರಂದು ಅಪರಾಹ್ನದಿಂದ ಸಂಜೆಯವರೆಗೆ, ಸ್ಪರ್ಧಿಸಲು ಇಚ್ಛಿಸುವಂತಹ ಆಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜ.20ರಂದು ಅಪರಾಹ್ನದಿಂದ ಸಂಜೆಯವರೆಗೆ ನಿಗದಿಯಾಗಿರುತ್ತದೆ. ಜ.21ರಂದು ನಾಮಪತ್ರ ಪರಿಶೀಲನೆ ಬಳಿಕ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆ, ಜ.22ರಂದು ಉಮೇದುವಾರರಿಂದ ನಾಮಪತ್ರವನ್ನು ಹಿಂಪಡೆಯಲು ಅವಕಾಶ ಬಳಿಕ ಸಿಂಧುತ್ವ ಹೊಂದಿದ ಆಭ್ಯರ್ಥಿಗಳ ಪಟ್ಟಿಯ ಪ್ರಕಟಣೆ, ಆಭ್ಯರ್ಥಿಗಳ ಪಟ್ಟಿ ಪ್ರಕಟಣೆಯ ನಂತರ ಆಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ, ಜ.24ರಂದು ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಣೆ, ಜ.28ರಂದು ಮತದಾನ ಬಳಿಕ ಮತ ಎಣಿಕೆ, ಘೋಷಣೆ ನಡೆಯಲಿದೆ ಎಂದು ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.