ಪುತ್ತೂರು: ಸವಣೂರು ಗ್ರಾಮದ ಪರಣೆಯಿಂದ ಶ್ರೀ ವಿಷ್ಣುಮೂರ್ತಿ ದೇವಾಲಯದ ತನಕ ಒಂದು ಕಿ.ಮೀ ರಸ್ತೆಯು ತೀರ ಹದಗೆಟ್ಟಿದ್ದು, ಸದ್ರಿ ರಸ್ತೆಯ ಡಾಮರೀಕರಣ ಎದ್ದು ಹೋಗಿ ಸಂಚಾರಕ್ಕೆ ತೊಡಕು ಉಂಟಾದ ಕಾರಣ ಈ ರಸ್ತೆಯನ್ನು ಸಂಪೂರ್ಣ ಕಾಂಕ್ರಿಟೀಕರಣಗೊಳಿಸುವಂತೆ ದ.ಕ. ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ರವರಿಗೆ ಜ.17 ರಂದು ಸಂಸದರ ಕುಂಜಾಡಿ ನಿವಾಸದಲ್ಲಿ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿಯವರು ಭೇಟಿಯಾಗಿ ಮನವಿಯನ್ನು ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಸಂಸದರು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಅನುದಾನ ಒದಗಿಸಿಕೊಡುವುದಾಗಿ ತಿಳಿಸಿದರು. ಈ ಸಂದರ್ಭ ಸಂಸದರಿಗೆ ಸವಣೂರು ದೇವಾಲಯದ ಜಾತ್ರೋತ್ಸವದ ಆಮಂತ್ರಣ ಪತ್ರವನ್ನು ನೀಡಿ ಸಮಾರಂಭಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು, ಅಧ್ಯಕ್ಷ ಶ್ರೀಧರ ಸುಣ್ಣಾಜೆ, ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತೀಶ್ ಬಲ್ಯಾಯ ಕನಡಕುಮೇರು, ಸವಣೂರು ತುಳುಕೂಟದ ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಪ್ರಭು, ಸವಣ ಕುಮಾರಧಾರಾ ಅಟೋ ಚಾಲಕ-ಮಾಲಕ ಸಂಘದ ಸದಸ್ಯ ಅಪ್ಪಿ ಪೂಜಾರಿ ಉಪಸ್ಥಿತರಿದ್ದರು.