ಪುತ್ತೂರು :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಂಗಳೂರಿನ ಪಿಲಿಕುಳದಲ್ಲಿ ನಡೆದ ಕಬ್ಸ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರಿನ 9 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ಬೆಂಗಳೂರು ರಾಜ ಭವನದ ಗಾಜಿನ ಮನೆಯಲ್ಲಿ ಜ.19ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಸ್ತುತ 5ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವೈತ ಶಂಕರ ವೈ (ರಾಜೇಶ್ ವೈ ಹಾಗೂ ದಿವ್ಯ ವೈ ದಂಪತಿಯ ಪುತ್ರ ) ಆರ್ಯನ್ ಪಿ .ಎಲ್. (ಪ್ರವೀಣ್ ಕುಮಾರ್ ಕೆ ಹಾಗೂ ಲತಾ ಬಿ ದಂಪತಿಯ ಪುತ್ರ)ಕೃತಿಕ್ ಬಿ ಆರ್( ಬಿ ರಮೇಶ್ ಹಾಗೂ ಅನುಪಮಾ ಬಿ ಎಂ ದಂಪತಿಯ ಪುತ್ರ) ಎಂ ಜಶಿತ್ ಆಚಾರ್ಯ (ಎಂ ಜಯಪ್ರಕಾಶ್ ಹಾಗೂ ಗೌತಮಿ ಕೆ ದಂಪತಿ ಪುತ್ರ )ಪ್ರಣವ್ ಕೇಕುಣ್ಣಾಯ (ಕೃಷ್ಣಪ್ರಸಾದ ಕೇಕುಣ್ಣಾಯ ಹಾಗೂ ಅರ್ಚನಾ ಕೆ ದಂಪತಿ ಪುತ್ರ) ರಾಹುಲ್ ಜಿ ಎಂ ( ಗಿರೀಶ್ ಎಂ ಹಾಗೂ ಮಲ್ಲಿಕಾ ದಂಪತಿ ಪುತ್ರ ) ಸಂಹಿತ್ ಸಿ ಅಲಾರ್ (ಚಂದ್ರಹಾಸ ಅಲಾರ್ ಹಾಗೂ ಯಾಮಿನಿ ದಂಪತಿ ಪುತ್ರ). ಸ್ಕಂದ ಎಂ (ಮೋಹನ್ ಹಾಗೂ ಶೋಭಾ ದಂಪತಿಯ ಪುತ್ರ) ವಸಿಷ್ಟ ಸಿ ಎಸ್ (ಚಂದ್ರಶೇಖರ್ ಎಸ್ ಹಾಗೂ ಸುಜಾತ ಡಿ ದಂಪತಿಯ ಪುತ್ರ) ಹಾಗೂ ಲೇಡಿ ಕಬ್ ಮಾಸ್ಟರ್ ಶ್ರೀಮತಿ ಪುಷ್ಪಲತಾ ಕೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.