ಪುತ್ತೂರು: ಬಲ್ನಾಡು ಗ್ರಾ.ಪಂ ಮಟ್ಟದ ಸಮೃದ್ಧಿ ಸಂಜೀವಿನಿ ಒಕ್ಕೂಟದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಜ.18ರಂದು ಬಲ್ನಾಡು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಎನ್.ಆರ್.ಎಲ್.ಎಂನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಮಾತನಾಡಿ, ಮಹಿಳೆಯರಿಗಾಗಿ ಸ್ವ ಉದ್ಯೋಗ, ವಿವಿಧ ಇಲಾಖೆಗಳ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕಿ ನಮಿತ ಮಾತನಾಡಿ, ವಾರ್ಡ್ ಹಾಗೂ ಒಕ್ಕೂಟದ ಕಾರ್ಯವೈಖರಿ ಬಗ್ಗೆ ಹಾಗೂ ಎನ್.ಆರ್.ಎಲ್.ಎಂನ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಆಮೀನಾ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ಪಿಡಿಓ ದೇವಪ್ಪ ಟಿ.ಆರ್, ಕಾರ್ಯದರ್ಶಿ ಲಕ್ಷ್ಮೀ, ಗ್ರಾ. ಪಂ ಸದಸ್ಯರು ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ:
ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು.
ಎಲ್.ಸಿ.ಆರ್.ಪಿ ಉಮಾವತಿ ಪ್ರಾರ್ಥಿಸಿ, ಎಂಬಿಕೆ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ವಿಮಲಾ ಸ್ವಾಗತಿಸಿ, ಅಕ್ಷತಾ ವಂದಿಸಿದರು. ಕೃಷಿ ಸಖಿ ವಿಮಲ ವರದಿ ವಾಚಿಸಿದರು. ಎಲ್.ಸಿ.ಆರ್.ಪಿ ಅಕ್ಷತ ಲೆಕ್ಕ ಪರಿಶೋಧನೆಯ ವರದಿ ಮಂಡಿಸಿದರು. ಸಂಪನ್ಮೂಲ ವ್ಯಕ್ತಿಗಳು ಸಹಕರಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಾಸಭೆಯ ಅಂಗವಾಗಿ ಸಂಜೀವಿನಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸಂತೆ ನಡೆಸಲಾಯಿತು. ಸ್ವಸಹಾಯ ಸಂಘಗಳ ಸದಸ್ಯರು ಮಾಡುತ್ತಿರುವ ಉತ್ಪನ್ನಗಳನ್ನು ಮಾರಾಟ ಮಾಡಲಾಯಿತು. ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಸಮುದಾಯ ಆರೋಗ್ಯ ಅಧಿಕಾರಿ ಪೂರ್ಣಿಮಾ ನಡೆಸಿದರು. ಮಹಾಸಭೆಯಲ್ಲಿ ಲಿಂಗತ್ವಾಧಾರಿತಾ ದೌರ್ಜನ್ಯ ವಿಷಯವಾಗಿ ಕಿರುನಾಟಕವೊಂದನ್ನು ಒಕ್ಕೂಟದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಪ್ರಸ್ತುತ ಪಡಿಸುವ ಮೂಲಕ ಸಮಾಜದಲ್ಲಿ ದೌರ್ಜನ್ಯ ತಡೆ ಜಾಗೃತಿ ಮೂಡಿಸಲಾಯಿತು.