ಅಯೋಧ್ಯೆಯಲ್ಲಿ ಶ್ರೀ ರಾಮನ ವಿಗ್ರಹ ಪ್ರಾಣಪ್ರತಿಷ್ಠೆ- ಹಿಂದೂ ಸಮಾಜ ಭಾಂದವರಲ್ಲಿ ವಿಹಿಂಪ ಮನವಿ

0

ಪುತ್ತೂರು: ಜ.22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ಸಂದರ್ಭ ದೇಶಾದ್ಯಂತ ಹಿಂದೂಗಳು ತಮ್ಮ ವ್ಯವಹಾರ, ವಹಿವಾಟುಗಳಿಗೆ ಬಿಡುವು ಕೊಟ್ಟು ಸ್ಥಳೀಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ವಿಶ್ವಹಿಂದೂ ಪರಿಷತ್ ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.


ಅಯೋಧ್ಯೆ ಅಕ್ಷತಾ ಅಭಿಯಾನದ ಜಿಲ್ಲಾ ಸಂಯೋಜಕ ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ಮಾತನಾಡಿ ರಾಮನ ಪ್ರಾಣ ಪ್ರತಿಷ್ಠೆಯ ದಿನ ಪೂರ್ವಾಹ್ನ 11 ಗಂಟೆಯಿಂದ ಮಧ್ಯಾಹ್ನ 1.30ರ ತನಕ ಎಲ್ಲಾ ಹಿಂದೂಗಳು ತಮ್ಮ ವ್ಯವಹಾರ ವಹಿವಾಟುಗಳಿಗೆ ಬಿಡುವು ನೀಡಿ ಸ್ಥಳೀಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮನೆಗಳಲ್ಲಿ, ಅಂಗಡಿಗಳಲ್ಲಿ ವಾಹನಗಳಲ್ಲಿ ಹಾಗು ಕಚೇರಿಗಳಲ್ಲಿ ಬೆಳಗ್ಗಿನಿಂದಲೇ ಭಗವಧ್ವಜವನ್ನು ಹಾರಿಸಬೇಕು ಮತ್ತು ಶ್ರೀರಾಮನ ಭಾವಚಿತ್ರವನ್ನು ಪೂಜಿಸುವಂತೆ ಅವರು ಮನವಿ ಮಾಡಿದರು.


ಉತ್ತರದ ಕಡೆ ಆರತಿ ಬೆಳಗಿಸಿ:
ಶ್ರೀ ರಾಮನ ಪ್ರಾಣಪ್ರತಿಷ್ಠೆಯ ದಿನ ರಾತ್ರಿ ಎಲ್ಲಾ ಹಿಂದೂ ಬಾಂಧವರು ತಮ್ಮ ಮನೆಗಳಲ್ಲಿ ದೀಪಾವಳಿ ಅಚರಣೆ ರೀತಿಯಲ್ಲಿ ಕನಿಷ್ಠ 5 ದೀಪಗಳನ್ನು ಬೆಳಗಿಸಬೇಕು. ನಂತರ ಉತ್ತರಾಭಿಮುಖವಾಗಿ ಅಯೋಧ್ಯೆಯ ಕಡೆ ಆರತಿ ಬೆಳಗಿ ಶ್ರೀರಾಮನನ್ನು ಆರಾಧಿಸುವಂತೆ ಡಾ. ಕೃಷ್ಣಪ್ರಸನ್ನ ಮನವಿ ಮಾಡಿದರು.


ಪುತ್ತೂರಿನಲ್ಲಿ ರಾಮಾಶ್ವಯಾತ್ರೆ, ಶ್ರೀರಾಮನ ಪಟ್ಟಾಭಿಷೇಕ:
ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯ ದಿನ ಪ್ರತಿ ಹಿಂದೂವಿನ ಮನೆಯಲ್ಲಿ, ವಾಹನಗಳಲ್ಲಿ ಭಗವಧ್ವಜ ಹಾರಬೇಕು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಮಾಶ್ವಯಾತ್ರೆ ಆರಂಭಗೊಂಡಿದೆ. ಜ.22ರಂದು ರಾಮತಾರಕ ಯಜ್ಞ ನಡೆಯಲಿದೆ.ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಜ.22ರಂದು ಶ್ರೀ ರಾಮ ಪಟ್ಟಾಭಿಷೇಕ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.


ಕೇಂದ್ರ ಸರಕಾರ ಅರ್ಧದಿನ ರಜೆ ಘೋಷಣೆ ಮಾಡಿದೆ:
ಅಯೋಧ್ಯೆ ಶ್ರೀ ರಾಮನ ವಿಗ್ರಹ ಪ್ರಾಣಪ್ರತಿಷ್ಠೆಗೆ ಸಂಬಂಧಿಸಿ ಕೇಂದ್ರ ಸರಕಾರ ತನ್ನ ಆಡಳಿತಕ್ಕೊಳಪಟ್ಟ ಇಲಾಖೆಗೆ ಅರ್ಧ ದಿನದ ರಜೆ ಘೋಷಣೆ ಮಾಡಿದೆ. ಅದೇ ರೀತಿ ರಾಜ್ಯ ಸರಕಾರಕ್ಕೂ ರಜೆ ನೀಡುವಂತೆ ಶಾಸಕರೆಲ್ಲಾ ಮನವಿ ಮಾಡಿದ್ದಾರೆ. ಅದರೆ ಹಿಂದೂಗಳು ಧಾರ್ಮಿಕ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಳ್ಳುವಂತೆ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ದಿನೇಶ್ ಪಂಜಿಗ, ಪ್ರಾಂತ ಸದಸ್ಯ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.

ಅಕ್ಷತೆ ಸಿಗದವರು ಮಾಹಿತಿ ನೀಡಿ
ಆಯೋಧ್ಯೆಯಿಂದ ಬಂದಿರುವ ಶ್ರೀ ರಾಮನ ಅಕ್ಷತೆ ವಿತರಣೆ ಕಾರ್ಯಕ್ರಮ ಈಗಾಗಲೇ ಪುತ್ತೂರು ಜಿಲ್ಲೆಯಲ್ಲಿ ಬಹುತೇಕ ಪೂರ್ಣಗೊಂಡಿದೆ.ಕೆಲವೊಂದು ಮನೆಯಲ್ಲಿ ಯಾರು ಇಲ್ಲದ ಕಾರಣ ಅವರಿಗೆ ಅಕ್ಷತೆ ವಿತರಣೆ ಬಾಕಿ ಆಗಿದ್ದಲ್ಲಿ ಅವರಿಗೂ ಅಕ್ಷತೆ ತಲುಪಿಸುವ ಕಾರ್ಯ ನಡೆಯಲಿದೆ. ಈ ಕುರಿತು ಸಂಘಟನೆಯ ಕಾರ್ಯಕರ್ತರ ಮೂಲಕ ಮಾಹಿತಿ ನೀಡಬಹುದೆದು ವಿಹಿಂಪ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here