ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ದೈವಗಳ ಧರ್ಮನೇಮೋತ್ಸವ ಆರಂಭ

0

ಪುತ್ತೂರು: ಕೊಡಿಪಾಡಿ ಗ್ರಾಮದ ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ಜ.18ರಿಂದ ಜ.20ರ ವರೆಗೆ ನಡೆಯಲಿರುವ ಶ್ರೀ ಧೂಮಾವತಿ-ಬಂಟ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಕೊರತಿ, ಜಾವತೆ, ಗುಳಿಗ ಹಾಗೂ ಪರಿವಾರ ದೈವಗಳ ಧರ್ಮನೇಮೋತ್ಸವದ ಪ್ರತರಮ ದಿನವಾದ ಜ.18ರಂದು ಬೆಳಗ್ಗೆ ಗಣಪತಿ ಹೋಮ, ನಾಗತಂಬಿಲ, ಚಂಡಿಕಾಹೋಮ, ಹರಿಸೇವೆ ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ವರ್ಣರ ಪಂಜುರ್ಲಿ ಹಾಗೂ ಜಾವತೆ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಿತು. ರಾತ್ರಿ 9 ಗಂಟೆಯಿಂದ ಅನ್ನಸಂತರ್ಪಣೆ ನಡೆಯಿತು.

ಈ‌ ಸಂದರ್ಭದಲ್ಲಿ ಹಣಿಯೂರು ಫ್ಯಾಮಿಲಿ ಡೈಟಿಸ್ ಟ್ರಸ್ಟ್ ನ ಅಧ್ಯಕ್ಷ ಡಾ. ಕೆ.ಸಿ. ನಾಯ್ಕ್ ಸೇರಿದಂತೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here