ಕರ್ನಾಟಕದ ಕ್ರಿಸ್ ಗೈಲ್ ಸಾಗರ್ ಭಂಡಾರಿ, ಸ್ವಸ್ತಿಕ್ ನಾಗರಾಜ್, ಪುತ್ತೂರಿನ ಲೋಕಿ ಸಹಿತ ಸ್ಟಾರ್ ಆಟಗಾರರ ಪ್ರಮುಖ ಆಕರ್ಷಣೆ
ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಕ್ರಿಕೆಟ್, ಕ್ರಿಕೆಟ್.. ಕಳೆದ ವರ್ಷ ಏಕದಿನ ವಿಶ್ವಕಪ್, ಮುಂಬರುವ ಟಿ.20 ವಿಶ್ವಕಪ್, ಬಳಿಕ ಐಪಿಎಲ್. ಹೀಗೆ ಕ್ರಿಕೆಟ್ ಜ್ವರದ ಕಾವು ಏರುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ ಪುತ್ತೂರಿನಲ್ಲಿ ಕ್ರಿಕೆಟ್ ಪ್ರಿಯರಿಗೆ ಕ್ರಿಕೆಟ್ ಅನ್ನು ಆಸ್ವಾದಿಸುವ ಕ್ಷಣ. ಹೌದು, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ, ದಿ|ಮೇಜರ್ ವೆಂಕಟ್ರಾಮಯ್ಯರವರ ಕನಸಿನ ಕೂಸಾದ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರರನ್ನೊಳಗೊಂಡ ಸಿಝ್ಲರ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದೆ. ಜ. 20ರಂದು ಸಂಜೆ ಪಂದ್ಯಾಟವು ಆರಂಭಗೊಳ್ಳಲಿದ್ದು ಈಗಾಗಲೇ ಈ ಪ್ರತಿಷ್ಠಿತ ಅಹರ್ನಿಶಿ ಪಂದ್ಯಾಕೂಟಕ್ಕೆ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣವು ಸಜ್ಜುಗೊಂಡಿದೆ.
ಪ್ರಸನ್ನ ಕುಮಾರ್ ಶೆಟ್ಟಿರವರ ಮುಂದಾಳತ್ವ:
ಕಳೆದ ವರ್ಷ ಅಗಲಿದ ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ದಿ|ಶ್ರೀನಾಥ್ ಆಚಾರ್ಯರವರ ಸ್ಮರಣಾರ್ಥ ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಸಾಮೆತ್ತಡ್ಕ ಇವರಿಂದ ಹೊನಲು-ಬೆಳಕಿನ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ನಿಗದಿತ ಓವರ್ಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಯೋಜನೆಯಾಗುತ್ತಿದ್ದು, ಸಿಝ್ಲರ್ ಗ್ರೂಪ್ಸ್ ಇದರ ಮುಖ್ಯಸ್ಥರಾದ ಪ್ರಸನ್ನಕುಮಾರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಮೈದಾನವನ್ನು ಸಜ್ಜುಗೊಳಿಸುವ ಮೂಲಕ ಪಂದ್ಯಾಕೂಟದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಎರಡು ದಿನಗಳ ಈ ಪಂದ್ಯಾಕೂಟದಲ್ಲಿ ಪಂದ್ಯಾಟವು ಯಾವಾಗ ಆರಂಭವಾಗುತ್ತದೆ ಮತ್ತು ರಾತ್ರಿ ಹೊತ್ತು ಪಂದ್ಯಾಟವನ್ನು ವೀಕ್ಷಿಸುವ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ ಎಂಬುದಂತೂ ಸತ್ಯ.
ಸ್ಟಾರ್ ಆಟಗಾರರ ದಂಡು ಪುತ್ತೂರಿನಲ್ಲಿ:
ಆಂದ್ರಪ್ರದೇಶ, ಮುಂಬಯಿ, ಬೆಂಗಳೂರು, ಮೈಸೂರು, ಕುಂದಾಪುರ, ಉಡುಪಿ, ಕೋಲಾರ ಹೀಗೆ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತೀ ವಾರ ದೊಡ್ಡ ಮೊತ್ತದ ಬಹುಮಾನಗಳ ಸಾಪ್ಟ್ ಬಾಲ್ ಕ್ರಿಕೆಟ್ ಪಂದ್ಯಾಟಗಳು ನಡೆಯುತ್ತಲೇ ಇರುತ್ತದೆ. ಅನೇಕ ಮಂದಿ ಯುವ ಆಟಗಾರರು ಈ ಕ್ರಿಕೆಟ್ ಸಮರದಲ್ಲಿ ಮಿಂಚುವ ಮೂಲಕ ಸ್ಟಾರ್ ಆಟಗಾರರೆನಿಸಿಕೊಂಡಿದ್ದಾರೆ. ಇಂತಹ ಅನೇಕ ಸ್ಟಾರ್ ಆಟಗಾರರು ಈ ಮೂರು ದಿನಗಳ ಕಾಲ ನಡೆಯುವ ಸಿಝ್ಲರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ವಿವಿಧ ತಂಡಗಳಲ್ಲಿ ಪ್ರತಿನಿಧಿಸುವ ಮೂಲಕ ಸ್ಟಾರ್ ಕಳೆಯನ್ನು ತರುತ್ತಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಕರ್ನಾಟಕದ ಕ್ರಿಸ್ ಗೈಲ್ ಖ್ಯಾತರಾದ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ, ಅತ್ಯಧಿಕ ಬೈಕ್ ವಿಜೇತರಾದ ನ್ಯಾಶ್ ಬೆಂಗಳೂರಿನ ಸ್ವಸ್ತಿಕ್ ನಾಗರಾಜ್, ಜೋನ್ಸನ್ ಕುಂದಾಪುರದ ರಾಜ ಸಾಲಿಗ್ರಾಮ, ಚೆನ್ನೈ ಡ್ರೀಮ್ ಇಲೆವೆನ್ನ ರತನ್, ಜೈ ಕರ್ನಾಟಕದ ಸಚಿನ್ ಮಹಾದೇವ, ನ್ಯಾಶ್ ಬೆಂಗಳೂರಿನ ಅಕ್ಷಯ್ ಸಿ.ಕೆ ಅಲ್ಲದೆ ಮಾರ್ಕ್ ಮಹೇಶ, ಲೋಕಿ ಪುತ್ತೂರು, ಪುರುಶಿ ನ್ಯಾಶ್ ಬೆಂಗಳೂರು, ಸಲೀಮ್ ಮೈಟ್, ಸಂಪು ಬೈಲಕೆರೆ, ಉತ್ತರಪ್ರದೇಶದ ಆಟಗಾರ ಇ-ನ್ ಪಟೇಲ್ ಮುಂತಾದ ಹೊಡಿಬಡಿ ದಾಂಡಿಗರು ಪಂದ್ಯಾಟವನ್ನೇ ತಮ್ಮತ್ತ ವಾಲಿಸುವ ಚಾಕಚಾಕ್ಯತೆ ಹೊಂದಿರುವ ದೇಶಿ ಸ್ಟಾರ್ ಕ್ರಿಕೆಟ್ ಆಟಗಾರರ ದಂಡು ಫಿಲೋಮಿನಾ ಕಾಲೇಜಿನ ಕ್ರೀಡಾಂಗಳನ್ನು ತಾವು ಪ್ರತಿನಿಽಸುವ ತಂಡಕ್ಕೆ ಕದನ ಸಮರವನ್ನು ಸಾರಲಿದ್ದಾರೆ.
ಪುತ್ತೂರಿನ ಲೋಕಿ ಜೈಕರ್ನಾಟಕ ತಂಡದಲ್ಲಿ:
ಸಿಝ್ಲರ್ ಫ್ರೆಂಡ್ಸ್ ಗ್ರೂಪಿನ ಸದಸ್ಯ, ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಲೋಕೇಶ್ ಯಾನೆ ಲೋಕಿರವರು ಬೆಂಗಳೂರಿನ ಪ್ರತಿಷ್ಠಿತ ತಂಡವಾದ ಜೈಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರ. ಅದರಲ್ಲೂ ಜೈಕರ್ನಾಟಕ ತಂಡದ ಆರಂಭಿಕ ಆಟಗಾರನಾಗಿ ಲೋಕಿರವರು ಗುರುತಿಸಿಕೊಂಡಿದ್ದಾರೆ. ಚುರುಕಿನ ಫೀಲ್ಡಿಂಗ್ಗೆ ಹೆಸರುವಾಸಿಯಾಗಿರುವ ಲೋಕಿರವರು ಹಲವಾರು ಪಂದ್ಯಗಳಲ್ಲಿ ಪಂದ್ಯಪುರುಷ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿಯೇ ಕ್ರಿಕೆಟ್ ಆಭ್ಯಾಸವನ್ನು ಆರಂಭಿಸಿದ ಲೋಕಿರವರು ಇದೀಗ ಅದೇ ಮೈದಾನದಲ್ಲಿ ಆಟವಾಡಲು ಜೈಕರ್ನಾಟಕ ತಂಡದ ಪರವಾಗಿ ಸಿದ್ಧರಾಗಿ ನಿಂತಿದ್ದಾರೆ.
ಅಧಿಕ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ:
ಎರಡು ದಿನಗಳ ಈ ಅಹರ್ನಿಶಿ ರೋಚಕ ಹೋರಾಟದ ಪಂದ್ಯಾಕೂಟದಲ್ಲಿ ಪಂದ್ಯಗಳನ್ನು ಸವಿಯಲು ಕ್ರಿಕೆಟ್ ಆಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ ಎಂಬುದು ಸತ್ಯ. ಅದರಲ್ಲೂ ರಾತ್ರಿ ಹೊತ್ತು ನಡೆಯುವ ಪಂದ್ಯಗಳನ್ನು ನೋಡಲು ಚಂದವೋ ಚಂದ. ಆಟಗಾರರು ಬಾರಿಸುವ ಬೌಂಡರಿ, ಸಿಕ್ಸರ್ಗೆ ಪ್ರೇಕ್ಷಕರು ತಮ್ಮ ಶಿಳ್ಳೆ ಹಾಗೂ ಕರತಾಡನಗಳಿಂದ ಹುರಿದುಂಬಿಸುವ ಕ್ಷಣಗಳಿಗೆ ಈ ಫಿಲೋಮಿನಾ ಮೈದಾನವು ಸಾಕ್ಷಿಯಾಗಲಿದೆ. ಕಳೆದ ನಾಲ್ಕು ಆವೃತ್ತಿಗಳಲ್ಲಿಯೂ ಸಂಘಟಕರು ಆಯೋಜಿಸಿದ ಈ ಕ್ರಿಕೆಟ್ ಟೂರ್ನಿಗೆ ಕ್ರಿಕೆಟ್ ಅಭಿಮಾನಿಗಳು ಅಭೂತಪೂರ್ವ ಪ್ರೋತ್ಸಾಹವನ್ನು ನೀಡಿದ್ದು, ಈ ಬಾರಿಯೂ ಅಽಕ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯಾಟವನ್ನು ವೀಕ್ಷಿಸಲು ಕ್ರೀಡಾಂಗಣದತ್ತ ಧಾವಿಸಿ ಬರುವ ನಿರೀಕ್ಷೆಯನ್ನು ಹೊಂದಲಾಗಿದೆ.
ಫ್ಲೆಕ್ಸ್ಗಳ ಭರಾಟೆ: ರಾಷ್ಟ್ರಮಟ್ಟದ ಈ ಕ್ರಿಕೆಟ್ ಟೂರ್ನಿಯ ಯಶಸ್ವಿಗಾಗಿ ಸಂಘಟಕರು ಅಹರ್ನಿಶಿ ದುಡಿಯುತ್ತಿದ್ದು ಮಾತ್ರವಲ್ಲ ಈ ಕ್ರಿಕೆಟ್ ಟೂರ್ನಿಯ ಫ್ಲೆಕ್ಸ್ಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಇತ್ತ ಉಪ್ಪಿನಂಗಡಿ, ಮಾಣಿ, ಸುಳ್ಯ. ಕಡಬ ಹೀಗೆ ಎಲ್ಲೆಡೆ ಸಿಝ್ಲರ್ -ಂಡ್ಸ್ ಅಭಿಮಾನಿಗಳು ಶುಭ ಕೋರಿ ಕ್ರಿಕೆಟ್ ಟೂರ್ನಿಯ ಫ್ಲೆಕ್ಸ್ಗಳದ್ದೇ ಭರಾಟೆ ಎದ್ದು ಕಾಣುತ್ತಿದೆ.
ರಝಾಕ್ ಬಿ.ಎಚ್ ನೇತೃತ್ವದಲ್ಲಿ ಟ್ರೋಫಿ ಕೊಡುಗೆ: ಉದ್ಯಮಿ ಹಾಗೂ ಅಮರ್ ಅಕ್ಬರ್ ಅಂತೋನಿ ಟ್ರೊಫಿಯ ಪ್ರಮುಖ ಆಯೋಜಕ ರಝಾಕ್ ಬಿ.ಎಚ್ರವರ ಮುಂದಾಳತ್ವದಲ್ಲಿ ಸ್ಪೋರ್ಟ್ಸ್ ವರ್ಲ್ಡ್ ಪುತ್ತೂರು, ಸುಳ್ಯ, ಬೆಳ್ತಂಗಡಿ, ಟೆನ್ ಗೈಯ್ಸ್ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅಬುಧಾಬಿ, ಕ್ಲಾಸಿಕ್ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸೌದಿ ಅರೇಬಿಯಾ, ಬಾಂಧವ್ಯ ಟ್ರೋಫಿಯ ಆಯೋಜಕರು, ಬಿ.ಕೆ ಬಿಲ್ಡ್ ಮಾರ್ಟ್ನ ಮೊನುರವರನ್ನೊಳಗೊಂಡ ತಂಡವು ಸಿಝ್ಲರ್ ಟ್ರೋಫಿಯ ಪ್ರಾಯೋಜಕತ್ವ ವಹಿಸಿಕೊಂಡಿರುತ್ತಾರೆ.
ಬಲಿಷ್ಟ ತಂಡಗಳು…
ಮೈಟಿ ಬೆಂಗಳೂರು, ಜೆ.ಕೆ ಬೆಂಗಳೂರು, ನ್ಯಾಶ್ ಬೆಂಗಳೂರು, -ಂಡ್ಸ್ ಬೆಂಗಳೂರು, ಜೋನ್ಸನ್ ಕುಂದಾಪುರ, ರಿಯಲ್ -ಟರ್ಸ್ ಉಡುಪಿ, ಇಝಾನ್ ಸ್ಪೋರ್ಟ್ಸ್ ಉಡುಪಿ, ಡ್ರೀಮ್ ಇಲೆವೆನ್ ಚೆನ್ನೈ
ರಾಜ್ಯದ ‘ಬಿಲ್ಲಿ ಬೌಡೆನ್’ ಅಂಪೈರ್ ‘ಮದನ್ ಮಡಿಕೇರಿ’ ಪುತ್ತೂರಿಗೆ..
ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ತನ್ನ ವಿಶೇಷ ಭಂಗಿಯ ಮೂಲಕ ಕ್ರಿಕೆಟ್ ಸಿಗ್ನಲ್ಗಳನ್ನು ನೀಡುತ್ತಾ ಎಲ್ಲರ ಪ್ರಶಂಸೆಗೆ ಒಳಗಾಗಿರುವ ನ್ಯೂಝಿಲೆಂಡ್ನ ಬಿಲ್ಲಿ ಬೌಡೆನ್ನಂತೆಯೇ ರಾಜ್ಯದ ‘ಬಿಲ್ಲಿ ಬೌಡೆನ್’ ಎಂದೇ ಖ್ಯಾತರಾಗಿರುವ ಉದ್ದುದ್ದ ಕೇಶರಾಶಿ ಹಾಗೂ ಗಡ್ಡ ಹೊಂದಿರುವ ಅಂಪಾಯರ್ ಮದನ್ ಮಡಿಕೇರಿರವರಿಗೆ ಪುತ್ತೂರಿನಲ್ಲಿ ಪ್ರಶಂಸೆಯ ಸುರಿಮಳೆ ಅಂದು ವ್ಯಕ್ತವಾಗಿತ್ತು. ಬೌಂಡರಿ, ಸಿಕ್ಸರ್, ಲೆಗ್ ಬೈ, ಅಗಲ ಎಸೆತ, ನೋಬಾಲ್, ಫ್ರೀಹಿಟ್ಗೆ ವಿಶೇಷ ನೃತ್ಯ ಭಂಗಿಯ ಮೂಲಕ ಗಮನಸೆಳೆದ ಮದನ್ ಮಡಿಕೇರಿರವರು ತನ್ನದೇ ಸ್ಟೈಲ್ ಡ್ಯಾನ್ಸ್ ಶೋ ಮುಖೇನ ಪ್ರಸ್ತುತಪಡಿಸಿ ಎಲ್ಲರಿಗೂ ರಸದೌತಣವನ್ನು ಉಣಬಡಿಸಿದ್ದರು ಮಾತ್ರವಲ್ಲ ಇದೇ ರಸದೌತಣವನ್ನು ಮತ್ತೊಮ್ಮೆ ಪ್ರೇಕ್ಷಕರಿಗೆ ಉಣಬಡಿಸಲು ಅಂಪೈರ್ ಮದನ್ ಮಡಿಕೇರಿ ಬರುತ್ತಿದ್ದಾರೆ.
ಕೂಟದ ಯಶಸ್ವಿಗೆ ಎಲ್ಲರ ಸಹಕಾರವಿರಲಿ
ಐದನೇ ವರ್ಷದ ಪ್ರತಿಷ್ಠಿತ ಈ ಕ್ರಿಕೆಟ್ ಪಂದ್ಯಾಟವು ಎಲ್ಲರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಹಲವಾರು ಗಣ್ಯರು, ಘಟಾನುಘಟಿ ಆಟಗಾರರು, ಚಿತ್ರತಾರೆಯರು, ಕ್ರಿಕೆಟ್ ಆಟಗಾರರು ಭಾಗಿಯಾಗಲಿದ್ದು ಕೂಟವು ರಂಗೇರುವಂತೆ ಆಗಿದೆ. ಈ ಕ್ರಿಕೆಟ್ ಟೂರ್ನಿಯನ್ನು ವೀಕ್ಷಿಸಲು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದ್ದು ಕೂಟದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರುತ್ತಿದ್ದೇನೆ.
-ಪ್ರಸನ್ನ ಕುಮಾರ್ ಶೆಟ್ಟಿ, ಆಯೋಜಕರು, ಸಿಝ್ಲರ್ ಟ್ರೋಫಿ