ಕೆ. ಸಂಜೀವ ಶೆಟ್ಟಿ ಅಭಿನಂದನಾ ಗ್ರಂಥ ಬಿಡುಗಡೆ

0

ಪುತ್ತೂರು: ಪ್ರಶಾಂತಿ ಸಧ್ಭವನಾ ಟ್ರಸ್ಟ್‌ ಪುತ್ತೂರು ಪ್ರಕಟಿಸಿರುವ ಕೆ ಸಂಜೀವ ಶೆಟ್ಟಿ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನಡೆಯಿತು.

ಜಾಗತಿಕ ಮಾನವೀಯ ಸೇವಾ ಕಾರ್ಯಗಳ ರೂವಾರಿ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಠಿಕತೆಗಳ ಬಗ್ಗೆ 33ಕ್ಕೂ ಮಿಕ್ಕಿ ದೇಶಗಳಲ್ಲಿ ಕಾರ್ಯಚರಿಸುತ್ತಿರುವ ಸತ್ಯಸಾಯಿ ಮಿಷನ್‌ ಮುಂದಾಳು ಸದ್ಗುರು ಮಧುಸೂದನ ಸಾಯಿಮಂದಿರ ಅವರ ದಿವ್ಯ ಹಸ್ತದಿಂದ ವಿನೂತನವಾಗಿ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ 350ಕ್ಕೂ ಮಿಕ್ಕಿ ಅಭಿಮಾನಿಗಳು ಈ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಹಿಂದೆ ಅಳಿಕೆಯ ಸತ್ಯಸಾಯಿ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದ ಕರಾಯ ಸಂಜೀವ ಶೆಟ್ಟಿಯವರ ಕುರಿತಾಗಿ 108 ಲೇಖನಗಳಿರುವ 108 ಲೇಖನಗಳಿರುವ ಸಚಿತ್ರ ಅಭಿನಂದನಾ ಗ್ರಂಥವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಸಂಜೀವ ಶೆಟ್ಟಿಯವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ.

ಸಂಪಾದಕ ಮಂಡಳಿಯ ಪ್ರೊ.ಕೆ ಭಟ್‌, ಪ್ರೊ.ಕೆ ಗೋವಿಂದ ಭಟ್‌ ಹಾಗೂ ಎಂ ಮಧುಸೂದನ ನಾಯಕ್‌ ರವರ ನಿರಂತರ ಪ್ರಯತ್ನದಿಂದ ಈ ಗ್ರಂಥವನ್ನು ಹೊರತರಲಾಗಿದೆ.ಸಮಾರಂಭದಲ್ಲಿ ಸಂಜೀವ ಶೆಟ್ಟಿ ಉಪಸ್ಥಿತರಿದ್ದು, ಪ್ರಶಾಂತಿ ಸದ್ಭವನಾ ಟ್ರಸ್ಟ್‌ ಪರವಾಗಿ ಶ್ರೀ ಸತ್ಯಸಾಯಿ ಸಾಹಿತ್ಯ ಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಅನೇಕ ಹಿರಿಯ ತ್ಯಾಗಜೀವಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here