ಪುತ್ತೂರು: ನರಿಮೊಗರು ಗ್ರಾಮದಲ್ಲಿ ಒಟ್ಟು 47 ಲಕ್ಷದ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು. ಶ್ರೀ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ಶಾಂತಿಗೋಡು ಗ್ರಾಮದ ವೀರಮಂಗಲ ದಂಡಿ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ಮಾಡಿ ಮಾತನಾಡಿದ ಶಾಸಕ ಅಶೋಕ್ ರೈ ದೇವರು ಅವಭೃತ ಸ್ನಾನಕ್ಕೆ ತೆರಳುವ ರಸ್ತೆಯನ್ನು ಯಾಕೆ ಕಾಂಕ್ರಿಟೀಕರಣ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ.ಕಳೆದ ಏಳು ವರ್ಷಗಳಿಂದ ಇಲ್ಲಿನವರ ಬೇಡಿಕೆ ಇತ್ತು. ಊರಿಡೀ ನಾನೇ ಅನುದಾನ ತಂದದ್ದು ಎಂದು ಹೇಳುವವರಿಗೆ ಈ ಪವಿತ್ರ ರಸ್ತೆಯ ಗೋಚರವಾಗಲಿಲ್ಲ ಎಂಬುದು ದುರಂತ. ಈ ರಸ್ತೆಗೆ ಸದ್ಯಕ್ಕೆ 5ಲಕ್ಷ ಅನುದಾನ ನೀಡಿದ್ದೇನೆ ಮುಂದೆ ಇದೇ ರಸ್ತೆಗೆ 15 ಲಕ್ಷ ಅನುದಾನ ನೀಡುವ ಮೂಲಕ ಪೂರ್ತಿಯಾಗಿ ಕಾಂಕ್ರೀಟ್ ಮಾಡುತ್ತೇವೆ ಎಂದು ಹೇಳಿದರು.
ಹಿಂದುತ್ವದ ಆಧಾರದಲ್ಲಿ ಮತ ಕೇಳುವವರಿಗೆ ದೇವರು ತೆರಳುವ ರಸ್ತೆ ಮರೆಯಬಾರದಿತ್ತು. ನಮ್ಮದು ಪಕ್ಷಾತೀತ,ಜಾತ್ಯಾತೀತ ವ್ಯವಸ್ಥೆಯಾಗಿದೆ ನಾವು ಎಲ್ಲವನ್ನೂ ಒಂದೇ ದೃಷ್ಟಿಯಲ್ಲಿ ಕಾಣುವ ಮೂಲಕ ರಾಜಧರ್ಮ ಪಾಲನೆ ಮಾಡುತ್ತೇವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಮಾತನಾಡಿ ಜನರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಶಾಸಕರು ಜನಪ್ರಿಯತೆಯನ್ನು ಪಡೆಯುತ್ತಿದ್ದು ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಪ್ರಾರಂಭವಾಗಿದೆ. ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಮೀಸಲಿಡುವ ಮೂಲಕ ಶಾಸಕರು ಸಮಾನತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಬಾಬು ಶೆಟ್ಡಿ ವೀರಮಂಗಲ, ಹೊನ್ನಪ್ಪ ಪೂಜಾರಿ ಕೈಂದಾಡಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್,ಬೂತ್ ಅಧ್ಯಕ್ಷ ವಸಂತ ಪೂಜಾರಿ,ಹಿರಿಯ ಕಾಂಗ್ರೆಸ್ ಮುಖಂಡ ವೇದನಾಥ ಸುವರ್ಣ, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್,ಮಂಜುನಾಥ ಶೇಖ,ಗಂಗಾಧರ್ ಶೆಟ್ಟಿ ಎಲಿಕ,ಜಗದೀಶ್ ಗೌಡ ಎರುಕಡಪ್ಪು, ಲೋಕೇಶ್ ಗೌಡ ಎರುಕಡಪ್ಪು, ಗಣೇಶ್ ದೋಳ, ವಿಜೇತ್ ಗೌಡ,ನಾಗರಾಜ್ ದೋಳ,ಮಹಿಳಾ ಕಾಂಗ್ರೆಸ್ ಘಡಕದ ವಿಶಾಲಾಕ್ಷಿ ಬನ್ನೂರು, ನರಿಮೊಗರು ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.