ವಿವೇಕಾನಂದದಲ್ಲಿ “ಶ್ರೀರಾಮ ಪಾದುಕಾ ಪ್ರದಾನ” ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ಪುತ್ತೂರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ, ಪುತ್ತೂರು ತಾಲ್ಲೂಕು ಸಮಿತಿ ಒಟ್ಟಾಗಿ ಆಯೋಜಿಸಿದ ‘ರಾಮಾಯಣ ಅನುಸಂಧಾನ’ ಎಂಬ ಕಾರ್ಯಕ್ರಮದ ಅಡಿಯಲ್ಲಿ “ಶ್ರೀರಾಮ ಪಾದುಕಾ ಪ್ರದಾನ” ಎಂಬ ಯಕ್ಷಗಾನ ತಾಳಮದ್ದಳೆ ಜ.19ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ ಶ್ರೀರಾಮನನ್ನು ನಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಡಾl ಸುಲೇಖಾ ವರದರಾಜ್, ತಾಳಮದ್ದಳೆ ಜೀವನ ಮೌಲ್ಯಗಳನ್ನು ತಿಳಿಸಿ ಹೇಳುತ್ತದೆ ಎಂದರು.

ಅಭ್ಯಾಗತರಾಗಿ ಆಗಮಿಸಿದ ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಮಾತನಾಡಿ ಶ್ರೀರಾಮ ನಮ್ಮ ಮನಸಿನಲ್ಲಿಯೇ ಇದ್ದಾನೆ ಆದ ಕಾರಣ ಶ್ರೀರಾಮನ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಪೂರ್ವ ಅಧ್ಯಕ್ಷ ವಿ. ಬಿ. ಅರ್ತಿಕಜೆ, ವಿವೇಕಾನಂದ ಪದವಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಾಹಿತ್ಯ ಪರಿಷತ್ತು ಪುತ್ತೂರು ವಿಭಾಗದ ಅಧ್ಯಕ್ಷ ಗಣರಾಜ ಕುಂಬ್ಳೆ, ವಿವೇಕಾನಂದ ಬಿ. ಇಡಿ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕಿ ಗಂಗಮ್ಮ ಹೆಚ್. ಶಾಸ್ತ್ರಿ ಉಪಸ್ಥಿತರಿದ್ದರು.

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾl ಶೋಭಿತಾ ಸತೀಶ್ ಸ್ವಾಗತಿಸಿ, ಸಹ ಪ್ರಾಧ್ಯಾಪಕಿ ಅಕ್ಷತಾ ಎಂ. ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶ್ರೇಯಾ ಆಚಾರ್ಯ ಆಲಂಕಾರು, ಸತೀಶ್ ಇರ್ದೆ, ಮುರಳೀಧರ ಕಲ್ಲೂರಾಯ, ವರ್ಷಿತ್ ಕಿಜೆಕ್ಕಾರು, ಮುಮ್ಮೇಳದಲ್ಲಿ ಗಣರಾಜ  ಕುಂಬ್ಳೆ, ರಾಧಾಕೃಷ್ಣ ಕಲ್ಚಾರ್, ಗುಡ್ಡಪ್ಪ ಬಲ್ಯ, ಡಾ. ಶ್ರೀಪತಿ ಕಲ್ಲೂರಾಯ ಸಹಕರಿಸಿದರು. ಸಹಕರಿಸಿದ ಸರ್ವರಿಗೂ ಸಹ ಪ್ರಾಧ್ಯಾಪಕಿ ಅನುರಾಧ ಧನ್ಯವಾದ ತಿಳಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಶಶ್ವಿನಿ ಹಾಗೂ ಶ್ರದ್ದಾ ನಿರೂಪಿಸಿದರು.  ಕಾರ್ಯಕ್ರಮದಲ್ಲಿ  ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಕಲಾಭಿಮಾನಿಗಳು, ಭೋಧಕ – ಭೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here