ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆ- ಉತ್ಸವ ಸಮಿತಿ ರಚನೆ

0

ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೂರ್ವ ಸಿದ್ಧತಾ ಸಭೆ ಜ.21ರಂದು ದೇವಳದ ಹೊರಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಕಾರ್ಯಗಳಿಗೆ ಸಂಬಂಧಿಸಿ ಉತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.


ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿರುವ ದೈವದ ಪ್ರದಾನ ಪಾತ್ರಿ ಈಶ್ವರ ಗೌಡ ಗೋಳ್ತಿಲ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಜಯಾನಂದ ಜೈನರಗುರಿ, ಅಧ್ಯಕ್ಷರಾಗಿ ಶಶಿಧರ್ ಗೌಡ ಕುಂಟ್ಯಾನ, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಗೌಡ ದೇವಸ್ಯ, ಖಜಾಂಚಿಯಾಗಿ ಪ್ರೇಮಚಂದ್ರ ದೇವಸ್ಯ ರವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷರನ್ನಾಗಿ ಈ ಹಿಂದಿನ ಉತ್ಸವ ಸಮಿತಿ ಪದಾಧಿಕಾರಿಗಳನ್ನೇ ಪುನರಾಯ್ಕೆ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಚಪ್ಪರ ಸಮಿತಿ, ವೈದಿಕ ಸಮಿತಿ, ಕಾರ್ಯಾಲಯ ಸಮಿತಿ, ಸ್ವಾಗತ ಸಮಿತಿ ಸೇರಿ ಹಲವು ಉಪಸಮಿತಿಗಳನ್ನು ರಚನೆ ಮಾಡಲಾಯಿತು. ಸಭೆಯಲ್ಲಿ ಮುಂದಿನ ದಿನ ದೇವಳದ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ ಮಾಡುವ ಕುರಿತು ಸಲಹೆ ಸೂಚನೆಗಳು ಬಂದವು. ವೇದಿಕೆಯಲ್ಲಿ ರಾಘವೇಂದ್ರ ಮಯ್ಯ, ದೇವಳದ ಅರ್ಚಕ ಶಿವಪ್ರಸಾದ್ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಧರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು. ಉತ್ಸವ ಸಮಿತಿ ಖಜಾಂಚಿ ಪ್ರೇಮಚಂದ್ರ ದೇವಸ್ಯ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಶೆಟ್ಟಿ ವಂದಿಸಿದರು. ಸದಸ್ಯ ಮೌನೀಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here