ಅಂಕತ್ತಡ್ಕ: ಪೂಂಜಿರೋಟು ಶ್ರೀ ಬಹ್ಮಬೈದೆರುಗಳ ನೇತ್ರಾವತಿ ಗರಡಿಯಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಕೋಟಿ ಚೆನ್ನಯ ನಗರ ಪೂಂಜಿರೋಟು ಶ್ರೀ ಬಹ್ಮಬೈದೆರುಗಳ ನೇತ್ರಾವತಿ ಗರಡಿಯ ಸಾನಿಧ್ಯದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವವು ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಜ.23 ರಿಂದ ಜ.25ರವರೆಗೆ ನಡೆಯಲಿದೆ.

ಕಾರ್ಯಕ್ರಮಗಳು:
ಜ.23ರಂದು ಸಂಜೆ ಪುಣ್ಯಾಹವಾಚನ ಸ್ಥಳ ಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತುಪುಣ್ಯಾಹಾಂತ, ಅನ್ನಸಂತರ್ಪಣೆ ನಡೆಯಲಿದೆ. ಜ.24ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, 7.15 ರಿಂದ 8.15ರ ಶುಭ ಸುಮೂಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೆಮಿತ್ತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಸ್ವಾಮೀಜಿಯವರಿಗೆ ಮತ್ತು ಗಣ್ಯ ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸಂಜೆ ಭಂಡಾರ ತೆಗೆಯುವುದು, ಸಾಂಸ್ಕೃತಿಕ ಕಾರ್ಯಕ್ರಮ ,ರಾತ್ರಿ ಅನ್ನಸಂತರ್ಪಣೆ, ರಾತ್ರಿ 10 ರಿಂದ ಬೈದೆರುಗಳ ಗರಡಿ ಇಳಿಯುವುದು, ಬೈದೆರುಗಳಿಗೆ ಆಯುಧ ಒಪ್ಪಿಸುವುದು, ಸುರಿಯದ ಬಲಿ ನಡೆದು, ಜ.25 ಮುಂಜಾನೆ 1ಗಂಟೆಗೆ ಮಾಣಿಬಾಲೆ ನೇಮ, ಬೈದೆರುಗಳ ಸುರಿಯ, ಪೂಂಜಿರೋಟು ಮನೆಗೆ ಕೋಟಿ ಚೆನ್ನಯರು ಹಾಲು ಕುಡಿಯಲು ಹೋಗುವುದು, ನಂತರ ಪ್ರಸಾದ ವಿತರಣೆ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಜ.24ರಂದು ಪೂರ್ವಾಹ್ನ ಗಂಟೆ 11 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಅಧ್ಯಕತೆಯಲ್ಲಿ ನಡೆಯಲಿದ್ದು, ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಾಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಮೊಕ್ತೇಸರು ಲಕ್ಷ್ಮೀನಾರಾಯಣ ಅಸ್ರಣ್ಷ ಶುಭಾಶಂಶನೆ ನೀಡಲಿದ್ದು, ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕೆಯ್ಯೂರು ಗ್ರಾಮ ಪಂ. ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಮಾಜಿ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ, ಅಬಕಾರಿ ಇಲಾಖೆಯ ಉಡುಪಿ ಡೆಪ್ಯೂಟಿ ಕಮೀಶನರ್ ಬಿಂದುಶ್ರೀ, ಅಬಕಾರಿ ಇಲಾಖೆಯ ಮಂಗಳೂರು ಸೂಪರಿಟೆಂಡೆಂಟ್ ಅಮರ್ ನಾಥ್ ಎಸ್.ಎಸ್ ಭಂಡಾರಿ, ಬ್ರಹ್ಮ ಬೈದೆರುಗಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಕೆ.ಎಸ್ ಪದ್ಮನಾಭ ಭಂಡಾರಿ, ಪುತ್ತೂರು ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಅಧ್ಯಕ್ಷ ಮತ್ತು ಆಡಳಿತ ಮೊಕ್ತೇಸರ ಲಕ್ಷ್ಮಣ ಕರಾವಳಿ ಬೆಂಗಳೂರು, ಮಾಜಿ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ, ಪುತ್ತೂರು ಮೆಸ್ಕಾಂ ಮಾಜಿ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ, ಬೆಂಗಳೂರು ತಹಶೀಲ್ದಾರ್ ಅಜಿತ್ ಕುಮಾರ್ ಸೊರಕೆ, ಮಂಗಳೂರು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳಜ್ಜ, ಭಂಡಾರಿ ಮಹಾ ಮಂಡಲ ಬಾರ್ಕೂರು ಅಧ್ಯಕ್ಷ ಶಶಿಧರ ಭಂಡಾರಿ ಕಾರ್ಕಳ, ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ, ಸವಣೂರು ಗ್ರಾ.ಪಂ ಅಧ್ಯಕ್ಷೆ ಬಿ.ಕೆ ಇಂದಿರಾ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ವಿಠಲನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here