ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ

0

ಪುತ್ತೂರು: ಜ.22 ರಂದು ಅಯೋಧ್ತೆಯಲ್ಲಿ ಐತಿಹಾಸಿಕ ರಾಮಮಂದಿರ ಪ್ರತಿಷ್ಠೆ- ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ರಾತ್ರಿ ಸಮಯ  ದೀಪಾರಾಧನೆ ಮಾಡುವ ಕುರಿತು ದೇಶದ ಜನತೆಗೆ  ಪ್ರಧಾನ ಮಂತ್ರಿ ನರೇಂದ್ರ ಮೋದೀಜಿಯವರ ಸೂಚನೆಯಂತೆ ಪುತ್ತೂರು ಕೊಂಬೆಟ್ಟು ಅಟಲ್ ಉದ್ಯಾನದ ಧಾರ್ಮಿಕ ಶಿಕ್ಷಣ ಕೇಂದ್ರದ  ನೇತೃತ್ವದಲ್ಲಿ  ಉದ್ಯಾನದ ಅಶ್ವತ್ಥ ಕಟ್ಟೆಯ ವಠಾರದಲ್ಲಿ ರಾತ್ರಿ ದೀಪಾರಾಧನೆ, ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. 

ಅಯೋದ್ಯಾ ಕರಸೇವಕರಾದ ಪುತ್ತೂರು ಕೋ‌ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ  ಬಪ್ಪಳಿಗೆ ಚಂದ್ರಶೇಖರ ರಾವ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ ನಾರಾವಿ, ಕೊಂಬೆಟ್ಟು ನಿವಾಸಿ ವೆಂಕಟ್ರಾಯ ಪ್ರಭುರವರನ್ನು ಶಾಲು ಹೊದಿಸಿ, ಹಾರ ಹಾಕಿ ಫಲ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಸನ್ಮಾನಿತ ಪರವಾಗಿ ಬಪ್ಪಳಿಗೆ ಚಂದ್ರಶೇಖರ ರಾವ್ ರವರು ಮಾತನಾಡಿ 1990, ಹಾಗೂ 1992 ರಲ್ಲಿ ಪುತ್ತೂರಿನಿಂದ ಅಯೋಧ್ಯಾ ಕರಸೇವೆಯಲ್ಲಿ ಪಾಲ್ಗೊಂಡ ಪುತ್ತೂರಿನ ತಂಡದ ಅನುಭವಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ಕೊನೆಗೆ ಭಾರತ ಮಾತೆ , ಭಗವದ್ಗೀತೆ, ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಆರಂಭದಲ್ಲಿ ಪ್ರಭಾವತಿಯವರ ನೇತೃತ್ವದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರದ ಪುಟಾಣಿಗಳಿಂದ ಪ್ರಾರ್ಥನೆ ನಡೆಯಿತು. ನಗರ ಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ , ನವೀನ್ ಪಡಿವಾಳ್ ರವರು ವಂದಿಸಿದರು. ವಿಶ್ವ ಹಿಂದು ಪರಿಷತ್  ಜಿಲ್ಲಾಧ್ಯಕ್ಷ  ಡಾ. ಕೃಷ್ಣ ಪ್ರಸನ್ನ, ಸ್ಥಳೀಯರಾದ ಗಣೇಶ ಬಾಳಿಗ, ಭಾಮಿ ಪದ್ಮನಾಭ ಶೆಣೈ,  ರಾಧಾ, ರಾಘವೇಂದ್ರ ಭಟ್, ಶ್ರೀವಿದ್ಯಾ ಜೆ.ರಾವ್, ಸುಮನಾ ರಾವ್, ಪಾಂಡುರಂಗ ನಾಯಕ್, ಗೋಪಾಲ ಆಚಾರ್ಯ, ಸವಿತಾ ದೇವಿ, ಪ್ರವೀಣ್ ರಾವ್ , ಮದುಮಿತಾ, ಸಮತ್ ಪ್ರಭು, ವೈಷ್ಣವೀ ಜೆ.ರಾವ್, ಶ್ರೀಕೃಷ್ಣ  ಜೆ ರಾವ್, ಶಾಂತೇರಿ, ಲಲಿತಾ, ವಸಂತ, ಶಾಂತಿ, ರಘುನಾಥ, ಪುಷ್ಪಾವತಿ, ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here