ಉಪ್ಪಿನಂಗಡಿ: ಅಯೋಧ್ಯಾ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯಲ್ಲಿ ಶ್ರೀ ರಾಮತಾರಕ ಮಂತ್ರ ಪಠಣ ಕಾರ್ಯಕ್ರಮವು ನಡೆಯಿತು.
ಶ್ರೀ ರಾಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಅಭಿರಾಮ್ ಭಟ್ ಮೂಡಾಜೆ, ಅಯೋಧ್ಯಾ ರಾಮ ಮಂದಿರದ ಇತಿಹಾಸದ ಬಗ್ಗೆ ಮಾತನಾಡಿದರು. 1990 ಹಾಗೂ 1992 ರಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಭಾಗಿಯಾಗಿದ್ದ ಹರಿರಾಮಚಂದ್ರ, ಅಪ್ಪಯ್ಯ ನಾಯಕ್, ಡೊಂಬಯ್ಯ ಗೌಡ , ವಾಸುದೇವ ಪ್ರಭು, ಬಿ.ಟಿ. ರಾಮ ಶೆಣೈ, ಜಯಂತ ಪೊರೋಳಿ, ಗಂಗಾಧರ ಟೈಲರ್, ಶಿವಕುಮಾರ್, ಯು. ರಾಧಾ , ಸವಿತಾ ಪಿ.ಜಿ. ಭಟ್, ಎನ್. ಉಮೇಶ್ ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾಧ್ಯಕ್ಷ ಸುನಿಲ್ ಅನಾವು, ಉಪಾಧ್ಯಕ್ಷೆ ಅನುರಾಧಾ ಆರ್. ಶೆಟ್ಟಿ, ಸಂಚಾಲಕ ಯು.ಜಿ. ರಾಧಾ , ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್, ಮಾತೃ ಭಾರತಿಯ ಅಧ್ಯಕ್ಷೆ ಸೌಮ್ಯ ವಾಸುದೇವ ಆಚಾರ್ಯ , ಪ್ರೌಢ ವಿಭಾಗದ ಮುಖ್ಯ ಗುರು ರಘುರಾಮ ಭಟ್, ಪ್ರ್ರಾಥಮಿಕ ಶಾಲಾ ಮುಖ್ಯ ಗುರು ವಿಮಲಾ ಭಾಗವಹಿಸಿದ್ದರು.